ರಾಯಚೂರು/ ಸಿಂಧನೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕರ್ನಾಟಕ ಕಟ್ಟಡ ನಿರ್ಮಾಣ ಹಾಗೂ ಕಟ್ಟಿಗೆ ಸಾಮಗ್ರಿಗಳ ಕಾರ್ಮಿಕರ ಫೆಡರೇಷನ್ ಸಮಿತಿಯ ರಾಜ್ಯ ಮಹಿಳಾ ಅಧ್ಯಕ್ಷರಾದ ಸಂಗೀತಾ ನಾಡಗೌಡ್ರು ಮುದ್ದೇಬಿಹಾಳ ಹಾಗೂ ದಿ. ತಾಳಿಕೋಟಿ ಸಹಕಾರಿ ಬ್ಯಾಂಕ್ ನಿಯಮಿತ ತಾಳಿಕೋಟೆ ಪ್ರಧಾನ ಶಾಖೆಯ ಪ್ರಧಾನ ವ್ಯವಸ್ಥಾಪಕರಾದ ಬಸಮ್ಮ ಕಾಶಿರಾಯ ಮಣ್ಣೂರು ಇವರುಗಳು ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ.) ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂಧ್ಯ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮದಲ್ಲಿನ ಆಶ್ರಯದಾತರುಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಆತ್ಮಸ್ಥೈರ್ಯ ತುಂಬಿದರು.
ಈ ಸಮಯದಲ್ಲಿ ಕಾರುಣ್ಯ ಆಶ್ರಮದ ಸದಸ್ಯರಾದ ಡಾ. ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಕರಡಕಲ್ ಸಾ. ಲಿಂಗಸೂಗೂರು ಇವರನ್ನು ಸನ್ಮಾನಿಸಿ ಗೌರವಿಸಿದರು.
ಇದೇ ಸಮಯದಲ್ಲಿ ಸಂಗೀತ ನಾಡಗೌಡ್ರು ಮುದ್ದೇಬಿಹಾಳ ಬಸಮ್ಮ ಕಾ. ಮಣ್ಣೂರು ತಾಳಿಕೋಟೆ ಇವರುಗಳನ್ನು ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ನಂತರ ಮಾತನಾಡಿದ ಕೆಪಿಸಿಸಿಯ ಕೆ.ಕೆ.ಎನ್. ಕೆ. ಸಾ. ಕಾ. ಫೇ. ರಾಜ್ಯ ಮಹಿಳಾ ಅಧ್ಯಕ್ಷರಾದ ಸಂಗೀತ ನಾಡಗೌಡ್ರು ಮಾತನಾಡಿ ನಾವುಗಳು ಕಾರುಣ್ಯ ಆಶ್ರಮದ ಬಗ್ಗೆ ಕೇಳುತ್ತಿದ್ದೆವು ಆದರೆ ಇಂದಿನ ವಾಸ್ತವ ಸ್ಥಿತಿ ನೋಡಿದಾಗ ಮಾನವರಾದ ನಾವುಗಳು ನಮಗೆ ಜನ್ಮ ಜೀವ ಜೀವನವನ್ನು ರೂಪಿಸಿ ಕೊಟ್ಟಂತಹ ತಂದೆ ತಾಯಿಗಳನ್ನು ಇಂತಹ ವೃದ್ಧಾಶ್ರಮಕ್ಕೆ ತಳ್ಳುತ್ತಿರುವದು ದುರದೃಷ್ಟಕರ ಸಂಗತಿ. ಈಗಾಗಲೇ ಇಲ್ಲಿನ ಸಿಬ್ಬಂದಿಗಳು ಈ ಆಶ್ರಮವು ಕರ್ಮಭೂಮಿ ಎಂದು ಹೇಳುತ್ತಿರುವ ಅಂಶಗಳನ್ನು ನಾನು ಅರಿತುಕೊಂಡಾಗ ಕಾರುಣ್ಯಾಶ್ರಮವು ಕರ್ಮಭೂಮಿಯಲ್ಲ ಪುಣ್ಯಕ್ಷೇತ್ರವಿದು ಎಂದೆನಿಸಿದೆ. ಸಿಂಧನೂರಿನ ಕಾರುಣ್ಯಾಶ್ರಮವು ಪುಣ್ಯಕ್ಷೇತ್ರವಾಗಿ ಮಾನವೀಯತೆಯ ಮಂದಿರವಾಗಿದೆ. ಇಂತಹ ಮಂದಿರಕ್ಕೆ ಸಹಾಯ ಸಹಕಾರ ಮಾಡುವ ದಾನಿಗಳೇ ನಿಜವಾದ ಭಕ್ತರುಗಳು ನಾನು ನನ್ನದು ಎನ್ನುವ ಈ ಸ್ವಾರ್ಥ ಪ್ರಪಂಚದಲ್ಲಿ ನಿಸ್ವಾರ್ಥತೆಯ ಬದುಕನ್ನು ಕಟ್ಟಿಕೊಂಡು ರಾಜ್ಯಕ್ಕೆ ಮಾದರಿಯಾಗಿ ಪ್ರಾಮಾಣಿಕವಾಗಿ ಸೇವೆ ಮಾಡುತ್ತಿರುವ ಕಾರುಣ್ಯಾಶ್ರಮಕ್ಕೆ ಮುಂದಿನ ದಿನಮಾನಗಳಲ್ಲಿ ನಮ್ಮ ಕುಟುಂಬದಿಂದ ಹಾಗೂ ಸರ್ಕಾರದ ವ್ಯವಸ್ಥೆಯಲ್ಲಿ ಸೌಲಭ್ಯಗಳನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮಾತನಾಡಿದರು. ನಂತರ ದಿ. ತಾಳಿಕೋಟೆ ಸಹಕಾರ ಬ್ಯಾಂಕ್ ನಿಯಮಿತ ತಾಳಿಕೋಟೆಯ ಪ್ರಧಾನ ಶಾಖೆಯ ಪ್ರಧಾನ ವ್ಯವಸ್ಥಾಪಕರಾದ ಬಸಮ್ಮ ಮಣ್ಣೂರು ಮಾತನಾಡಿ ಹುಟ್ಟು ಸಾವಿನ ಮಧ್ಯೆ ಮಾನವನ ಮಾನವೀಯತೆ ಪಾಠಶಾಲೆಯಾಗಿ ಕಾರುಣ್ಯಾಶ್ರಮವು ಮಾನವ ಧರ್ಮದ ಮಾನವೀಯತೆಯನ್ನು ಸಮಾಜಕ್ಕೆ ತೋರಿಸಿಕೊಟ್ಟಿದೆ. ಈ ನಮ್ಮ ಕಾರುಣ್ಯ ಕುಟುಂಬವು ಬರೀ ಅನಾಥಾಶ್ರಮ ನಡೆಸುವುದಲ್ಲದೆ ಜನರಲ್ಲಿ ಹೆತ್ತವರ ಬಗ್ಗೆ ಹಿರಿಯರ ಬಗ್ಗೆ ಹಲವಾರು ಅಭಿಮಾನಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜವನ್ನು ಶುದ್ಧೀಕರಣ ಮಾಡುವ ಕಾರ್ಯ ಮಾಡುತ್ತಿರುವುದು ನಮಗೆ ಸಂತೋಷವನ್ನುಂಟು ಮಾಡಿದೆ ಎಂದು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಡಾ. ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಸದಸ್ಯರು ಶ್ರೀ ಮಠ ಸೇವಾ ಟ್ರಸ್ಟ್ ಕಾರುಣ್ಯ ಆಶ್ರಮ ಸಿಂಧನೂರು. ಶರಣಪ್ಪ ನಾಯಕ ಕಸಬಾ ಲಿಂಗಸೂಗೂರು. ಸುಜಾತ ಹಿರೇಮಠ ಸದಸ್ಯರು ಶ್ರೀಮಠ ಸೇವಾ ಟ್ರಸ್ಟ್. ಹಾಗೂ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವಯ್ಯ ಸ್ವಾಮಿ ಹಿರೇಮಠ ಹರೇಟನೂರು. ಮತ್ತು ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದ ಗುಡ್ಡ . ಸಿದ್ದಯ್ಯ ಸ್ವಾಮಿ ಮರಿಯಪ್ಪ ಜ್ಯೋತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



















