
ಉಪ್ಪಾರಹಳ್ಳಿ ಗ್ರಾಮದಲ್ಲಿ ನೂತನ ಶ್ರೀ ಆಂಜಿನೇಯಸ್ವಾಮಿ ದೇವಾಲಯ ಲೋಕಾರ್ಪಣೆ, ಶಿಲಾಮೂರ್ತಿ ಪ್ರತಿಷ್ಠಾಪನೆ ಹಾಗೂ ಸಾಮೂಹಿಕ ವಿವಾಹ : ಸಾಮೂಹಿಕ ವಿವಾಹಗಳಿಂದ ಸಮಾಜದಲ್ಲಿ ಸಮಾನತೆ ಮೂಡುತ್ತದೆ : ಜೆ. ಎನ್. ಗಣೇಶ್.

ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ಮೆಟ್ರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಉಪ್ಪಾರಹಳ್ಳಿಗ್ರಾಮದಲ್ಲಿ ನೂತನ ಶ್ರೀ ಆಂಜಿನೇಯಸ್ವಾಮಿ ದೇವಾಲಯ ಲೋಕಾರ್ಪಣೆ, ಶ್ರೀ ಆಂಜಿನೇಯಸ್ವಾಮಿಯ ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ ಹಾಗೂ ಸಾಮೂಹಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಡಗರ ಸಂಭ್ರಮ, ಶ್ರದ್ದೆ ಭಕ್ತಿಯಿಂದ ಜರುಗಿದವು.
ಶುಕ್ರವಾರ ಗ್ರಾಮದಲ್ಲಿ ಲಿಂ.ವೇ.ಮೂ. ವೀರಭದ್ರಯ್ಯ ತಾತನವರ ಸತ್ ಸಂಕಲ್ಪದ ಮೇರೆಗೆ ಮೆಟ್ರಿಯ ವೇ.ಮೂ. ವೃಷಬೇಂದ್ರಯ್ಯ ಸ್ವಾಮಿಗಳು, ಪಾಪಿನಾಯಕನಹಳ್ಳಿಯ ವೇ.ಮೂ. ಕು.ಮ. ವಿಶ್ವಾರಾಧ್ಯ ಸ್ವಾಮಿಗಳ ಪೌರೋಹಿತ್ಯದಲ್ಲಿ ಹರಗಿನಡೋಣಿಯ ಪ.ಪೂ. ಷ.ಬ್ರ.ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಶ್ರೀಆಂಜಿನೇಯ ಸ್ವಾಮಿಯ ನೂತನ ಶಿಲಾ ಮೂರ್ತಿಯ ಪ್ರಾಣಪ್ರತಿಷ್ಠೆ ಮತ್ತು ನೂತನ ದೇವಾಲಯದ ಕಳಸಾರೋಹಣ ಶ್ರದ್ದೆ, ಭಕ್ತಿಯಿಂದ ಜರುಗಿತು.
ನಂತರ 14 ಜೋಡಿ ನವ ದಂಪತಿಗಳ ಸಾಮೂಹಿಕ ವಿವಾಹ ವಿಜೃಂಭಣೆಯಿಂದ ಜರುಗಿದವು. ನೂತನ ದಂಪತಿಗಳಿ ಆರ್ಶೀವಧಿಸಿ ಮಾತನಾಡಿದ ಹರಗಿನಡೋಣಿಯ ಪಂಚವಣ್ಣಿಗೆ ಮಠದ ಪೀಠಾಧಿಪತಿಗಳಾದ ಸಿದ್ದಲಿಂಗ ಶಿವಾಚಾರ್ಯರು ನೂತನ ಸತಿಪತಿಗಳು ಒಂದಾಗಿ ಜೀವನ ನಡೆಸಬೇಕು, ಹಿತ ಮಿತ ಸಂತಾನ ಹೊಂದಿ ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವ ಜೊತೆಗೆ ಉತ್ತಮ ಶಿಕ್ಷಣವನ್ನು ಕೊಡಿಸಿ ನಾಡಿಗೆ ಉತ್ತಮ ಪ್ರಜೆಗಳನ್ನು ನೀಡಬೇಕೆಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಂಪ್ಲಿ ಶಾಸಕರಾದ ಜೆ.ಎನ್.ಗಣೇಶ ನೂತನ ವಧುವರರಿಗೆ ಆರ್ಶೀವದಿಸಿ ಮಾತನಾಡಿ ಸಾಮೂಹಿಕ ವಿವಾಹಗಳಿಂದ ಆರ್ಥಿಕವಾಗಿ ಸಬಲರಾಗವುದರ ಜೊತೆಗೆ ಸಮಾಜದಲ್ಲಿ ಸಮಾನತೆ ಮೂಡುತ್ತದೆ. ಸತಿಪತಿಗಳು ಒಬ್ಬರಿಗೊಬ್ಬರು ಅರಿತು ಜೀವನ ನಡೆಸುವ ಮೂಲಕ ಮಾದರಿ ಸತಿಪತಿಗಳಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಬೇಕು ಎಂದು ಅವರವರ ಕುಟುಂಬದವರೇ ವಿವಾಹ ಮಾಡಿಕೊಂಡರೆ ಕೇವಲ ಅವರವರ ಕುಟುಂಬದ ಸದಸ್ಯರ ಆರ್ಶೀವಾದ ಸಿಕ್ಕರೆ, ಸಾಮೂಹಿಕ ವಿವಾಹದಲ್ಲಿ ಹಲವಾರು ಹರಚರಗುರು ಮೂರ್ತಿಗಳ ಆರ್ಶೀವಾದದ ಜೊತೆಗೆ ಎಲ್ಲಾ ಸಮಾಜಗಳ ಮುಖಂಡರ ಗಣ್ಯರ ಆರ್ಶೀವಾದ ಸಿಗುತ್ತದೆ. ಈ ನಿಟ್ಟಿನಲ್ಲಿ ಸಾಮೂಹಿಕ ವಿವಾಹದಲ್ಲಿ ವಿವಾಹವಾದವರು ಕೀಳಿರಿಮೆಯನ್ನು ಹೊಂದಬೇಡಿ ಎಂದರು.
ಇದಕ್ಕೂ ಮುನ್ನ ಫೆ.5ರಂದು ಶ್ರೀಆಂಜಿನೇಯಸ್ವಾಮಿಯ ನೂತನ ಶಿಲಾ ಮೂರ್ತಿಯನ್ನು ಗ್ರಾಮದಲ್ಲಿ ಅದ್ದೂರಿಯಾಗಿ ಗ್ರಾಮದ ಪ್ರಮುಖ ಬೀದಿಯಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಿದ ನಂತರ ದೇವಸ್ಥಾನ ಪ್ರವೇಶ ಮತ್ತು ಜಲದಿವಾಸ, ಧಾನ್ಯಾಧಿವಾಸ, ವಸ್ತ್ರಾಧಿವಾಸ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಎಚ್.ಎಂ.ವಿದ್ಯಾಧರ ಸ್ವಾಮಿ, ಎಚ್.ಎಂ.ವಿಶ್ವೇಶ್ವರಯ್ಯಸ್ವಾಮಿಮೆಟ್ರಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಮೆಟ್ರಿ ಪಿಕೆಪಿಎಸ್ ಅಧ್ಯಕ್ಷ ಹೊಸಕೋಟೆ ಜಗದೀಶ್, ಉಪ್ಪಾರಹಳ್ಳಿಯ ಹನುಮನಗೌಡ, ಕಂಪ್ಯೂಟರ್ ತಿಮ್ಮಯ್ಯ, ಉಡೇದ ತಿಪ್ಪಯ್ಯ, ಗುರಪ್ಪ, ಜೆಸ್ಕಾಂ ಜೆಇ ಶಮೀವುಲ್ಲ, ನೇಣಕಿ ಗಿರೀಶ್, ಬಂಡಿ ಮಲ್ಲಯ್ಯ, ಜೆ.ಎಸ್.ಡಬ್ಲ್ಯುನ ಗುರುರಾಜ ಗುಪ್ತ ಮತ್ತು ಸಿಬ್ಬಂದಿಗಳು, ಗಂಗಾಧರ ಹೊನ್ನಳ್ಳಿ, ಮರೇಗೌಡ, ಮೆಟ್ರಿ ಗ್ರಾ.ಪಂ.ನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಉಪ್ಪಾರಹಳ್ಳಿ ಗ್ರಾಮ ಗ್ರಾ.ಪಂ.ಸದಸ್ಯರು, ಎಸ್.ಡಿ.ಎಂ.ಸಿ.ಯ ಪದಾಧಿಕಾರಿಗಳು, ಗ್ರಾಮದ 28 ಮೇಟಿಯ ಮುಖಂಡರು ಗ್ರಾಮದ ಸಮಸ್ತ ನಾಗರೀಕರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















