ಇಣುಕಿ ನೋಡುವೆ ಪವಿತ್ರ ಮಡದಿ ಚೆಲುವೆ/
ನಿನ್ನ ಕಣ್ಣೋಟದಲಿ ಯೋಧನ ಹುಡುಕುತಿರುವೆ/
ಹಳ್ಳಿಯ ಚಂದನದ ಗೂಬೆಯಂತೆ ಕಾಣುತಿರುವೆ/
ಬಂಗಾರದ ರಂಗಿನ ಸೀರೆ ಧರಿಸಿ ಸೊಗಸಾಗಿ ನಿಂತಿರುವೆ//{೦೧}//
ಮನೆಯನ್ನು ಸುಗಂಧ ಸುವಾಸನೆಯಿಂದ ಮನ ಜಲ್ಲೆನಿಸುವಂತಿರುವೆ/
ಅಬ್ಬಾ ಆ ಕಣ್ಣು ಪಿಳುಕಿಸುತ ಮನಮುಟ್ಟುವಂತೆ ಕರೆದಿರುವೆ/
ನಿನ್ನ ಕಣ್ಣೋಟಕೆ ಬೆರಗಾಗಿ ನಾ ಕರಗಿ ಹೋಗಿರುವೆ/
ನಿನ್ನ ಬಳಿ ನಾ ರಜೆಯಲ್ಲಿ ಓಡೋಡಿ ಬರುವೆ//{೦೨}//
ಮನೆಯ ಚಂದದ ಅಲಂಕಾರ ಮದುವೆಗೆ ಸಿಂಗರಿಸಿದಂತಿದೆ/
ಆ ಕುಡಿ ನೋಟಕೆ ಮನಸೋತು ನಿನ್ನ ಬಿಡಲು ಸಾಧ್ಯವಾಗದೆ/
ರಂಗು ರಂಗಿನ ರಂಗೋಲಿ ಅಂದ ಚಂದದಿ ಕಂಗೊಳಿಸುತಲಿದೆ/
ಸಾಕು ಮಾಡು ತಾಳಲಾರೆ ನೀನಿರುವಲ್ಲಿಗೆ ಬಂದು ನಾ ನಿಲ್ಲುವೆ//{೦೩}//
ಬ್ಯಾಗ್ ಹಿಡಿದು ಕಾಶ್ಮೀರ ಸುತ್ತಿ ನಾನು ಬರುವೆ/
ನಿನ್ನ ನೋಡಿದ ಕ್ಷಣವೇ ನಾನು ಮನಸೋತು ಬಿಟ್ಟಿರುವೆ/
ಒಂದು ಘಳಿಗೆಯು ನಿನ್ನ ಬಿಟ್ಟಿರಲು ನನಗೆ ಸಾಧ್ಯವಾಗುವುದೆ/
ಪ್ರಕೃತಿಯು ನಾಚುವಂತೆ ನಮ್ಮಿಬ್ಬರ ಪ್ರೀತಿಯು ಗಟ್ಟಿಯಾಗಿದೆ//{೦೪}//
✍️ ಶ್ರೀ ಚನ್ನಬಸಪ್ಪ ಬಳಗಾರ
(ಮಾಜಿ ಸೈನಿಕ) ಪೊಲೀಸ ಇಲಾಖೆ, ಉಡುಪಿ ಜಿಲ್ಲೆ ಸಶಸ್ತ್ರ ಮೀಸಲು ಪಡೆ ಹವ್ಯಾಸಿ ಬರಹಗಾರ, ಕಾರ್ಗಿಲ್ ಯೋಧ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೃತರು.




















