ಕಲಬುರಗಿ/ ಕಾಳಗಿ: ಕರ್ನಾಟಕ ರಾಜ್ಯ ಸರಕಾರ ಗ್ರಾಮೀಣ ಪತ್ರಕರ್ತರಿಗಾಗಿ ನೀಡಲ್ಪಡುವ ಉಚಿತ ಬಸ್ ಪಾಸ್ ನ್ನು ಸೋಮವಾರ ಕಾಳಗಿ ತಾಲೂಕು ಪತ್ರಕರ್ತ ಸೂರ್ಯಕಾಂತ ಜಿ.ಕಟ್ಟಿಮನಿ ಅವರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಲಬುರಗಿ ಉಪ ನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಅವರು ವಿತರಿಸಿದರು. ಈ ಸಂದರ್ಭದಲ್ಲಿ
ಅಧಿಕಾರಿ ಉಮಾಶಂಕರ ಇದ್ದರು.
ಕಲಬುರಗಿ ಜಿಲ್ಲೆಯ ಇನ್ನುಳಿದ ಅರ್ಹ ಪತ್ರಕರ್ತರು ಕೂಡ ತಮ್ಮ ಕ್ರಮಬದ್ಧವಾಗಿರುವ ದಾಖಲಾತಿಗಳನ್ನು ಸೇವಾ ಕೇಂದ್ರಗಳ ಮೂಲಕ ನೀಡಿ ಸರಕಾರದ ಸೌಲಭ್ಯವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ವರದಿ ಎಸ್ ವಿ ಗಂಗಾಣಿ.




















