ಕಲಬುರಗಿ ಜಿಲ್ಲೆ ಜೇವರ್ಗಿ ಪಟ್ಟಣದಲ್ಲಿ ಇಂದು ನಡೆದ ಶಿವಶರಣ ಮಾದರ ಚೆನ್ನಯ್ಯ ಪುತ್ತಳಿ ಆವರಣದಲ್ಲಿ ಆಯೋಜನೆಗೊಂಡ ಕನಾ೯ಟಕ ಮಾದರ ಮಹಾಸಭಾದ ಪೂವ೯ಭಾವಿ ಸಭೆಯಲ್ಲಿ ಮಾತನಾಡಿದ ಮಾದಿಗ ಸಮಾಜದ ಶ್ರೀ ಶಿವಶರಣ ಮಾದರ ಚೆನ್ನಯ್ಯ ಸಮಿತಿಯ ತಾಲೂಕು ಅಧ್ಯಕ್ಷರಾದ ಮಾನಪ್ಪ ಗೋಗಿ ಮಾತನಾಡಿ
ಕರ್ನಾಟಕ ರಾಜ್ಯಾದ್ಯಂತ ಆಯಾ ಜಾತಿಗಳ ಜಾತಿವಾರು ವರ್ಗವಾರು ಜಾತಿ ಸಂಘಟನೆಗಳು ಸಂಘಟಿತರಾಗಿ ಬಲಗೊಳ್ಳುತ್ತಿದ್ದು, ಅದರ ಸಾಲಿನಲ್ಲಿಯೇ ನಮ್ಮ ಮಾದಿಗ ಸಮುದಾಯದ ಜನತೆಯು ಕೂಡಾ ರಾಜ್ಯಮಟ್ಟದಲ್ಲಿ ಕರ್ನಾಟಕ ಮಾದರ ಮಹಾಸಭಾ ವೇದಿಕೆ ಅಡಿಯಲ್ಲಿ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನವನ್ನು ಮಾಡುತ್ತಿದ್ದು ಇದಕ್ಕೆ ಪೂರಕವಾಗಿ ನಮ್ಮ ಮಾದಿಗ ಸಮುದಾಯದವರು ಹೆಚ್ಚಿನ ಸದಸ್ಯತ್ವವನ್ನು ಪಡೆಯುವ ಮೂಲಕ ಸಮುದಾಯವನ್ನು ಸಂಘಟನೆಯ ಬಲ ಶಕ್ತಿಯೊಂದಿಗೆ ಕೊಂಡೊಯ್ಯಬೇಕೆಂದು ಎಂದು ಹೇಳಿದರು.
ನಂತರ ಮಾತನಾಡಿದ ಶ್ರೀ ಸಾಯಿ ಪಿಯು ಕಾಲೇಜಿನ ಪ್ರಾಚಾರ್ಯರಾದ ಅಮೀನಪ್ಪ ಹೊಸಮನಿ ಮಾತನಾಡಿ ಸಮುದಾಯದ ಮುಖಂಡರು ಹಾಗೂ ಎಲ್ಲಾ ಯುವಜನತೆ ತಾವೆಲ್ಲರೂ ಈ ಕರ್ನಾಟಕ ಮಾದರ ಮಹಾಸಭಾದ ಸದಸ್ಯತ್ವ ನೋಂದಣಿ ಇತರೆ ಸಮುದಾಯಗಳ ಜನತೆಗೆ ಇಂಜಿನಿಯರಿಂಗ್ ಕಾಲೇಜ್, ಮೆಡಿಕಲ್ ಕಾಲೇಜ್, ಮಠಗಳು ಸೇರಿದಂತೆ ಭವಿಷ್ಯದ ಮಕ್ಕಳಿಗಾಗಿ ಶಾಶ್ವತ ಚಿರಾಸ್ತಿಗಳನ್ನು ಮಾಡಿದ್ದಾರೆ. ಆದುದರಿಂದ ನಮ್ಮ ಸಮುದಾಯದ ಮಕ್ಕಳ ಭವಿಷ್ಯತ್ತಿಗಾಗಿ ಈಗಾಗಲೇ ದೊಡ್ಡಬಳ್ಳಾಪುರದ ಬಳಿ ಸರ್ಕಾರಿ ಜಾಗವನ್ನು ಸರ್ಕಾರದ ಬೆಲೆಕಟ್ಟಿ ಖರೀದಿ ಮಾಡಲು ನಿರ್ಧರಿಸಲಾಗಿದೆ ಹಾಗಾಗಿ ತಾವೆಲ್ಲರೂ ಈ ಸದಸ್ಯತ್ವವನ್ನು ಕಡ್ಡಾಯವಾಗಿ ಮಾಡಲೇಬೇಕು ಎಂದು ಹೇಳಿದರು .
ತದ ನಂತರ ಮಾತನಾಡಿದ ಸಮಾಜದ ಮುಖಂಡರಾದ ಭೀಮು ಖಾದ್ಯಾಪೂರ ರವರು ಮಾತನಾಡಿ ಸಮುದಾಯದ ಹಿರಿಯ ಮಹಾಸಭಾದ ಸದಸ್ಯತ್ವವನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡುವ ಮೂಲಕ ಮಹಾಸಭಾವನ್ನು ನಮ್ಮ ತಾಲೂಕಿನಲ್ಲಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಸದಸ್ಯತ್ವ ಪಡೆಯುವ ಮೂಲಕ ನಾವೆಲ್ಲರೂ ರಾಜ್ಯಕ್ಕೆ ಮಾದರಿಯಾಗೋಣ ಹಾಗೂ ಭವಿಷ್ಯದ ಮಕ್ಕಳಿಗೆ ನಾವೆಲ್ಲರೂ ಪೂರಕವಾಗಬೇಕು ಈ ನಾಟ್ಟಿನಲ್ಲಿ ಇಂದಿನಿಂದ ಸದಸ್ಯತ್ವ ಪಡೆಯೋಣ ಎಂದು ಹೇಳಿದರು.
ಶ್ರೀ ಮಲ್ಲಪ್ಪ ಮಾಸ್ತಾರ ಕುರಳಗೇರಾ
ಸುಭಾಷ್ ಡೊಳ್ಳೆ ,ಅನೀಲ್ ದೊಡ್ಡಮನಿ ,
ಭೀಮು ಖಾದ್ಯಾಪೂ, ಮಹೇಶ ಕೆಂಭಾವಿ , ಶರಣು ಆಂದೋಲಾ, ಬಾಲೇಶ, ಪರಶುರಾಮ್ ,
ವಿಶ್ವರಾದ್ಯ ಕುಂಟನೂರ ಹಾಗೂ ಸಮಾಜದ ಹಿರಿಯರು, ಕಿರಿಯರು, ಮಹಿಳೆಯರು ಸೇರಿದಂತೆ
ಹಲವಾರು ಜನ ಉಪಸ್ಥಿತರಿದ್ದರು.
ವರದಿ – ಶರಣು ಬಿಲ್ಲಾರ.



















