ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿ ಉತ್ಸವ ಹಿನ್ನಲೆ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ : ವಿಭಿನ್ನವಾಗಿ ಮೂಡಿಬಂದ ರಂಗೋಲಿ

ಬಳ್ಳಾರಿ / ಕಂಪ್ಲಿ: ಪಟ್ಟಣದ ನೀರಾವರಿ ಮುಂಭಾಗದಿಂದ ಕೊಟ್ಟಾಲ್ ರಸ್ತೆಯ ಚೇತನ್‌ಶಾಲೆ ಬಳಿಯ ರಸ್ತೆವರೆಗೂ ಬುಧವಾರ ಬೆಳಿಗ್ಗೆ ಮಹಿಳೆಯರು ವಿವಿಧ ಆಕೃತಿಯ ರಂಗೋಲಿ ಬಿಡಿಸುತ್ತಿರುವುದು ಕಂಡು ಬಂತು.
ಕಂಪ್ಲಿ ಉತ್ಸವದ ಹಿನ್ನಲೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಇಲ್ಲಿನ ಏಕಮುಖ ರಸ್ತೆಯಲ್ಲಿ ಸಾಕಷ್ಟು ಮಹಿಳೆಯರು ಮಾತಿನೊಂದಿಗೆ ಮತ್ತು ಕೈಬಳೆ ಸದ್ಧಿನ ಮೂಲಕ ರಂಗೋಲಿ ಚಿತ್ತಾರಕ್ಕೆ ಮೆರಗು ನೀಡಿದರು.
ಗಂಡುಗಲಿ ಕುಮಾರರಾಮನ ಕೋಟೆ ಒಳಗೊಂಡಂತಹ ಚಿತ್ರವನ್ನು ಡಿ. ಪೂಜಾ ಭರತ್ ಇವರು ರಂಗೋಲಿಯೊಂದಿಗೆ ಬಿಡಿಸಿದರು. ಮತ್ತು ರತ್ನವೇಣಿ ಇವರು ಶಿವಲಿಂಗ ಆಧಾರಿತ ರಂಗೋಲಿ ಚಿತ್ತಾರ ಹಾಕಿದರು. ನವಿಲಿನಲ್ಲಿ ಅರಳಿದ ಶ್ರೀಕೃಷ್ಣ ಸೇರಿದಂತೆ 132 ರಂಗೋಲಿಯನ್ನು ಯುವತಿಯರು ಹಾಗೂ ಮಹಿಳೆಯರು ವಿಭಿನ್ನವಾಗಿ ಬಿಡಿಸುವ ಮೂಲಕ ನೋಡುಗರನ್ನು ಆಕರ್ಷಿಸಿದರು.
ಅಂಗಳದಲ್ಲಿ ವರ್ಣ ಮತ್ತು ವಿವಿಧ ವಿನ್ಯಾಸದ ರಂಗೋಲಿಗಳು ರಸ್ತೆಯ ಅಂದವನ್ನು ಹೆಚ್ಚಿಸಿದವು. ಕೆಂಧೂಳಿನಿಂದ ಕೂಡಿದ ರಸ್ತೆಗಳು ಇಂದಿನ ರಂಗೋಲಿಯಲ್ಲಿ ಕಲರ್ ಫುಲ್ ಆಗಿ ಕಾಣತೊಡಗಿದವು. ಇಲ್ಲಿನ ನಿರ್ಣಾಯಕರಾಗಿ ರಾಮಚಂದ್ರ ಚಿತ್ರಗಾರ, ಬಸವರಾಜ ಎಂ, ಶೋಭಾ ಸಿ ಕಾರ್ಯನಿರ್ವಹಿಸಿದರು.
ಶಾಸಕ ಜೆ.ಎನ್.ಗಣೇಶ್ ಅವರ ಧರ್ಮಪತ್ನಿ ಶ್ರೀದೇವಿ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ನಾಡಿನ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸುವಲ್ಲಿ ಹಾಗೂ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಲು ಇಂತಹ ಸ್ಪರ್ಧೆ ಸಹಕಾರಿಯಾಗಿದೆ.

ಮಹಿಳೆಯರು ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ರಂಗೋಲಿ ಸ್ಪರ್ಧೆ ಸಹಕಾರಿಯಾಗಿದೆ. ರಂಗೋಲಿ ಕಲೆಯನ್ನು ಇಂದಿನ ಮಕ್ಕಳು ಹಾಗೂ ಯುವ ಜನತೆಗೆ ಪರಿಚಯಿಸಲು ಈ ಸ್ಪರ್ಧೆ ಅನುಕೂಲವಾಗಿದೆ ಎಂದರು. ನಂತರ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಶಿಲ್ಪ, ದ್ವಿತೀಯ ಸ್ಥಾನ ಮೀನಾಕ್ಷಿ ಹಾಗೂ ತೃತೀಯ ಸ್ಥಾನದೊಂದಿಗೆ ಜಿ.ಭಾಗ್ಯಲಕ್ಷ್ಮಿ ಇವರು ಪ್ರಶಸ್ತಿ ಪಡೆದುಕೊಂಡರು. ಉಳಿದ ಮಹಿಳೆಯರಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!