
ಕಂಪ್ಲಿ: ಸ್ಪರ್ಧೆಯ ಮುಖ್ಯ ಉದ್ದೇಶ ಭಾರತೀಯ ಸಂಸ್ಕೃತಿಯಲ್ಲಿ ಅದು ಶ್ರಾವಣ ಮಾಸದ ಪ್ರಾರಂಭದಲ್ಲಿ ಮೆಹಂದಿ ಹಾಕಿಕೊಳ್ಳುವ ಪರಂಪರೆ ಇದೆ ಹಾಗೂ ಶುಭ ಸಂಕೇತವಾಗಿದೆ. ಮೆಹಂದಿಯಲ್ಲಿ ಔಷಧೀಯ ಗುಣವಿದ್ದು ಅನೇಕ ರೋಗಗಳಿಗೆ ರಾಮಬಾಣವಾಗಿದೆ ಹಾಗೂ ಮೆಹಂದಿಯು ಮಹಿಳೆಯರ ಅಲಂಕಾರಕ್ಕಾಗಿ ಹಾಗೂ ಸೌಂಧರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ ನಾಡಿನ ಕಲೆ, ಸಂಸ್ಕೃತಿಯಲ್ಲಿ ಒಂದಾದ ಮೆಹೆಂದಿಯೂ ಶುಭದ ಸಂಕೇತವಾಗಿದೆ ಎಂದು ಶಾಸಕ ಜೆ.ಎನ್.ಗಣೇಶ್ ಅವರ ಧರ್ಮಪತ್ನಿ ಶ್ರೀದೇವಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಬಿಎಸ್ವಿ ಶಾಲೆಯಲ್ಲಿ ಕಂಪ್ಲಿ ಉತ್ಸವದ ಹಿನ್ನಲೆ ಬುಧವಾರ ಹಮ್ಮಿಕೊಂಡಿದ್ದ ಮೆಹೆಂದಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಸೃಜನಸೀಲತೆ ಮತ್ತು ಸಾಂಪ್ರದಾಯ ಕೌಶಲ್ಯಗಳನ್ನು ಪ್ರದರ್ಶಿಸುವ ರೋಮಾಂಚನ ಕಾರ್ಯಕ್ರಮವಾಗಿದೆ. ಮಹಿಳೆಯರ ಕಲೆಗೆ ಇದೊಂದು ಮುಖ್ಯ ವೇದಿಕೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿಡಿಪಿಒ ಪ್ರದೀಪ್, ಪುರಸಭೆಯ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಸಮುದಾಯ ಸಂಘಟನಾಧಿಕಾರಿ(ಕಂದಾಯ ನಿರೀಕ್ಷಕಿ) ಜಯಲಕ್ಷಿ ಅಂಗನವಾಡಿ ಮೇಲ್ವಿಚಾರಕಿ ಲತೀಫಾ ಬೇಗಂ,
ಇಲ್ಲಿನ ಮೆಹೆಂದಿ ಸ್ಪರ್ಧೆಯಲ್ಲಿ ನಾಡಿನ ವಿವಿಧ ಬಗೆಯ ವಿನ್ಯಾಸದ ಮೆಹೆಂದಿಯಲ್ಲಿ ಕಂಗೊಳಿಸುತ್ತಿರುವುದು ಕಂಡು ಬಂತು. ಇಲ್ಲಿನ ಮೆಹೆಂದಿ ಚಿತ್ತಾರಗಳು ನೋಡುಗರ ಆಕರ್ಷಣೆಗೆ ಪಾತ್ರವಾದವು.
ಇಲ್ಲಿನ ಸ್ಪರ್ಧೆಯಲ್ಲಿ ಬಿ.ಕೆ.ಸಲ್ಮಾನಾಜ್ ಪ್ರಥಮ ಸ್ಥಾನದೊಂದಿಗೆ ಬಹುಮಾನದೊಂದಿಗೆ ಪ್ರಶಸ್ತಿ ಪ್ರಮಾಣ ಪತ್ರ ಪಡೆದುಕೊಂಡರು. ಆಫ್ರೀನ್ ಇವರು ದ್ವೀತಿಯ ಸ್ಥಾನ ಹೊಂದಿದರು. ಕೌಸರ್(ಗೌಸಿಯಾ) ಇವರು ತೃತೀಯ ಸ್ಥಾನದೊಂದಿಗೆ ಪ್ರಶಸ್ತಿ ಪತ್ರ ಪಡೆದುಕೊಂಡರು. ಉಳಿದ ಸ್ಪರ್ಧಿಗಳಿಗೆ ಸಮಧಾನಕರ ಬಹುಮಾನ ನೀಡಲಾಯಿತು. ವಿದ್ಯಾರ್ಥಿನಿಯರು, ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















