ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಎಸ್.ಎ. ನಿಂಗೋಜಿ ಸೆಂಟ್ರಲ್ ಪಬ್ಲಿಕ್ ಶಾಲೆಯ ೧೨ ನೇ ವಾರ್ಷಿಕೋತ್ಸವ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಶ್ರೀ ಎಸ್.ಎ. ನಿಂಗೋಜಿ ಸೆಂಟ್ರಲ್ ಪಬ್ಲಿಕ್ ಶಾಲೆಯ ೧೨ ನೇ ವಾರ್ಷಿಕೋತ್ಸವ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೊಪ್ಪಳ ರಾಮಕೃಷ್ಣ ಮಿಷಿನ್ ಸ್ವಾಮೀಜಿಗಳು ಉದ್ಘಾಟಿಸಿದರು.

ಪ್ರಾಸ್ತವಿಕವಾಗಿ ಮಾತನಾಡಿದ ಪ್ರೊ.ವೀರಣ್ಣ ನಿಂಗೋಜಿ ಶಾಲೆ ಬೆಳೆದು ಬಂದ ವಿಚಾರ ತಿಳಿಸಿದರು.

ನಿ.ಪ್ರಾಚಾರ್ಯ ಗವಿಸಿದ್ದಪ್ಪ ನಿಂಗೋಜಿ ಇಂಗ್ಲಿಷ್ ಭಾಷೆಯ ಅನಿವಾರ್ಯತೆ ಮಕ್ಕಳ ಕಲಿಕಾ ವಿಚಾರದಲ್ಲಿ ಪಾಲಕರ ಜವಾಬ್ದಾರಿ ಕುರಿತು ಹೇಳಿದರು.

ಶಿವಶರಣಪ್ಪ ಬಳಿಗಾರ ಸಂಸ್ಥೆಯ ಅಧ್ಯಕ್ಷ ಶಶಿಕಾಂತ ನಿಂಗೋಜಿ ಯವರ ಬಾಲ್ಯದ ಶಿಕ್ಷಣ, ಗ್ರಾಮೀಣಭಾಗದಲ್ಲಿ ವಿದ್ಯಾಸಂಸ್ಥೆ ಸ್ಥಾಪಿಸುವ ಮೂಲಕ ಶಿಕ್ಷಣ ಸೇವೆಯ ಒದಗಿಸುತ್ತಿರುವುದು ಶ್ಲಾಘನೀಯ ಎಂದರು.
ನಿಂಗೋಜಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಕರಮುಡಿ ಗ್ರಾಮದ ೭ ಹಾಗೂ ೧೦ ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ನಗದು ಪುರಸ್ಕಾರ ನೀಡಲಾಯಿತು.

ಸಹಕಾರ ಕ್ಷೇತ್ರದ ಸಾಧಕರಾದ ಶೇಖರಗೌಡ ಉಳ್ಳಾಗಡ್ಡಿ ಅವರಿಗೆ ಅವ್ವ- ಅಪ್ಪ ಪ್ರಶಸ್ತಿ ನೀಡಿ ಸನ್ಮಾನಿಸಿದರು, ಸ್ವಾವಲಂಬಿ ಮಹಿಳಾ ಸಾಧಕಿ ಶ್ರೀಮತಿ ರೇಣುಕಾ ಸಂಗನಾಳ ಇವರಿಗೆ ಶ್ರೀಮತಿ ಲಲಿತಾ ವೀ ನಿಂಗೋಜಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕೊನೆಯಲ್ಲಿ ಪೂಜ್ಯರು ಆಶೀರ್ವಚನ ನೀಡಿದರು.
ವೀರಣ್ಣ ವಾಲಿ, ರಾಯಪ್ಪ ಉಂಡಿ,ನೀಲನಗೌಡ ಪವಾಡಿಗೌಡ್ರ, ಸಂಸ್ಥೆಯ ಅಧ್ಯಕ್ಷರಾದ ಶಶಿಕಾಂತ ನಿಂಗೋಜಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!