ಬೆಳಗಾವಿ/ ಅಥಣಿ: ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿಯ ಜನಪ್ರಿಯ ಶಾಸಕ ಲಕ್ಷ್ಮಣ ಸವದಿಯವರ 66ನೇ ಜನ್ಮದಿನದ ಅಂಗವಾಗಿ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಅಖಿಲ ಭಾರತ “ಎ” ಗ್ರೇಡ್ ಪುರುಷರ ಕಬಡ್ಡಿ ಪಂದ್ಯಾವಳಿಗಳನ್ನು ಭರ್ಜರಿಯಾಗಿ ಆಯೋಜಿಸಲಾಗಿದೆ.
ಪಟ್ಟಣ ಪಂಚಾಯತ್ ಸದಸ್ಯ ಸಂಜಯ ಬಿರಡಿ ಅವರು ಐನಾಪೂರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಯುವ ನಾಯಕ ಚಿದಾನಂದ ಸವದಿ ಅವರ ಕಾಗವಾಡ ಮತಕ್ಷೇತ್ರದ ಅಭಿಮಾನಿಗಳ ಬಳಗದ ವತಿಯಿಂದ ಫೆಬ್ರವರಿ 15 ಮತ್ತು 16ರಂದು ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ಈ ಕ್ರೀಡಾ ಹಬ್ಬ ನಡೆಯಲಿದೆ ಎಂದರು.
ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಆಂಧ್ರಪ್ರದೇಶ, ತಮಿಳುನಾಡು, ಹಿಮಾಚಲ ಪ್ರದೇಶ, ಹರಿಯಾಣ, ರಾಜಸ್ಥಾನ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ 35ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿವೆ.
ಪ್ರೊ. ಕಬಡ್ಡಿಯ ಖ್ಯಾತ ಆಟಗಾರರು ಕಣಕ್ಕಿಳಿಯುತ್ತಿರುವುದು ಪಂದ್ಯಾವಳಿಯ ವಿಶೇಷ ಆಕರ್ಷಣೆಯಾಗಿದೆ.
ಫೆಬ್ರವರಿ 15ರಂದು ಸಂಜೆ 5 ಗಂಟೆಗೆ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಯುವ ಧುರೀಣ ಚಿದಾನಂದ ಸವದಿ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ ಎಂದು ಅಪ್ಪು ಪೂಜಾರಿ ತಿಳಿಸಿದ್ದಾರೆ.
ಬಹುಮಾನ ವಿವರಗಳು ಹೀಗಿವೆ:
🥇 ಪ್ರಥಮ ಬಹುಮಾನ – ₹1,00,000
🥈 ದ್ವಿತೀಯ ಬಹುಮಾನ – ₹75,000
🥉 ತೃತೀಯ ಬಹುಮಾನ – ₹50,000
🏅 ಚತುರ್ಥ ಬಹುಮಾನ – ₹25,000
ಇದರ ಜೊತೆಗೆ ನಗದು, ಟ್ರೋಫಿ ಹಾಗೂ ಉತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳಿಗೆ ವಿಶೇಷ ಪ್ರಶಸ್ತಿ ನೀಡಲಾಗುತ್ತದೆ.
ಸರ್ವೋತ್ತಮ ರೈಡರ್ ಮತ್ತು ಸರ್ವೋತ್ತಮ ಕ್ಯಾಚರ್ ಪ್ರಶಸ್ತಿಗಳೂ ಇರಲಿವೆ.
ಪಾಲ್ಗೊಳ್ಳುವ ಎಲ್ಲಾ ತಂಡಗಳಿಗೆ ಊಟ ಮತ್ತು ವಸತಿ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಕಲ್ಪಿಸಲಾಗಿದೆ. ಐನಾಪೂರದಲ್ಲಿ ನಡೆಯಲಿರುವ ಈ ಕ್ರೀಡಾ ಸಂಭ್ರಮ ಕಾಗವಾಡ ಕ್ಷೇತ್ರಕ್ಕೆ ಮತ್ತೊಂದು ಕ್ರೀಡಾ ಉತ್ಸವದ ಮೆರುಗು ನೀಡಲಿದೆ.
ಈ ಪಂದ್ಯಾವಳಿಯ ಮೂಲಕ ಲಕ್ಷ್ಮಣ ಸವದಿಯವರ ಜನ್ಮದಿನವನ್ನು ಕ್ರೀಡಾ ಉತ್ಸವವಾಗಿ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.
ವರದಿ. ವಿಠ್ಠಲ ಖೋಕಾಟೆ



















