ಬಳ್ಳಾರಿ / ಕಂಪ್ಲಿ : ತಾಲೂಕಿನ ನಂ.10 ಮುದ್ದಾಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂದಿನ ಭಾಗದಲ್ಲಿ ಹಾದು ಹೋಗಿರುವ ರಸ್ತೆ ಹಾಳಾಗಿದೆ.
ಕಂಪ್ಲಿ ತಾಲೂಕಿನ ನಂ.10ಮುದ್ದಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂದಿನ ಭಾಗದಲ್ಲಿನ ರಸ್ತೆಯನ್ನು ಸಿದ್ದೇಶ್ವರ ಕ್ರಾಸ್‌ವರೆಗೆ ಅಭಿವೃದ್ಧಿ ಮಾಡದ ಕಾರಣ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ.
ವಾಹನ ಸವಾರರಿಗೆ ಸಮಸ್ಯೆ.:
ಸ.ಹಿ.ಪ್ರಾ. ಶಾಲೆಯಿಂದ ಸಿದ್ದೇಶ್ವರ ಕ್ರಾಸ್‌ವರೆಗಿನ ರಸ್ತೆಯಲ್ಲಿ ಹಲವು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳು ಸಂಚರಿಸುತ್ತವೆ. ಅಲ್ಲದೆ ರಾಮಸಾಗರ, ಕಣವಿ ತಿಮ್ಮಲಾಪುರದ ವಿದ್ಯಾರ್ಥಿಗಳು ಸೇರಿ ಜನರು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಈ ರಸ್ತೆ ಪಟ್ಟಣಕ್ಕೆ ಬರಲು ಸಮೀಪವಾಗುವುದರಿಂದ ಇಲ್ಲಿ ಜನರ ಸಂಚಾರ ಅಧಿಕವಾಗಿದೆ. ಹಾಳದ ಈ ರಸ್ತೆಯನ್ನು ಕೂಡಲೇ ಅಭಿವೃದ್ಧಿಪಡಿಸಬೇಕು.
ಕಂಪ್ಲಿ ಹೊಸ ಬಸ್ ನಿಲ್ದಾಣದಿಂದ ಗ್ರಾಮದ ಸ.ಹಿ.ಪ್ರಾ. ಶಾಲೆವರೆಗಿನ ಅಂದಾಜು 2.2 ಕಿ.ಮೀ. ರಸ್ತೆಯನ್ನು 4 ಕೋಟಿ ರೂ. ವೆಚ್ಚದಲ್ಲಿ ಪೈಪ್ ಕಲ್ವರ್ಟ್ ಸೇರಿ ಅಭಿವೃದ್ಧಿಪಡಿಸಲಾಗಿದೆ. ಆದರೆ, ಸ.ಹಿ.ಪ್ರಾ.ಶಾಲೆ ಮುಂದಿನ ಭಾಗದಿಂದ ಸಿದ್ದೇಶ್ವರ ಕ್ರಾಸ್‌ವರೆಗೆ ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಳ್ಳದ ಹಿನ್ನೆಲೆ ಜನರ ಸಂಚಾರಕ್ಕೆ ಅನಾನುಕೂಲವಾಗಿದೆ.
ಆದಷ್ಟು ಬೇಗಾ ರಸ್ತೆ ನಿರ್ಮಿಸಲು ಅಗ್ರಹ.
- ಎ.ಎಸ್.ಯಲ್ಲಪ್ಪ,
ಧನರಾಜ್, ಧನುಷ್
ಭೀಮ್ ಆರ್ಮಿ ತಾಲೂಕು ಸಮಿತಿ
ಕಂಪ್ಲಿ ಹೊಸ ಬಸ್ ನಿಲ್ದಾಣದಿಂದ ಗ್ರಾಮದ ಸ.ಹಿ.ಪ್ರಾ. ಶಾಲೆವರೆಗಿನ 2.2 ಕಿ.ಮೀ. ರಸ್ತೆಯನ್ನು 4 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದಲ್ಲಿ ಅಭಿವೃದ್ಧಿಪಡಿಸಿದೆ. ಉಳಿದ 4ಕಿ.ಮೀ. ರಸ್ತೆಯನ್ನು 2ನೇ ಹಂತದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಆನಂದ್ ಪಮ್ಮಾರ, ಎಇ, ಲೋಕೋಪಯೋಗಿ ಇಲಾಖೆ, ಕಂಪ್ಲಿ
ವರದಿ : ಜಿಲಾನಸಾಬ್ ಬಡಿಗೇರ್




















