ಶಿವಮೊಗ್ಗ : ನಗರದ ಇತಿಹಾಸ ಪ್ರಸಿದ್ದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ -ಫೆಬ್ರವರಿ 24 ರಿಂದ 28 ರವರೆಗೆ ನಡೆಯಲಿದ್ದು , ಶುಕ್ರವಾರ ಸಂಜೆ ಗಾಂಧಿಬಜಾರ್‌ನ ತವರು ಮನೆಯಲ್ಲಿ ಚಪ್ಪರ ಪೂಜೆ ಶಾಸ್ತ್ರ ನಡೆಯಿತು.
ಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ಎಸ್.ಕೆ.ಮರಿಯಪ್ಪ , ಪ್ರಧಾನ ಕಾರ್ಯದರ್ಶಿ ಶ್ರೀ ಎನ್.ಮಂಜುನಾಥ್ ಇವರುಗಳು ಪೂಜೆ ಸಲ್ಲಿಸಿ ಚಪ್ಪರ ಶಾಸ್ತ್ರಕ್ಕೆ ಚಾಲನೆ ನೀಡಿದರು.
ಜಾತ್ರಾ ಮಹೋತ್ಸವದ ಮೊದಲ ದಿನ ದೇವಿಯನ್ನು ಗಾಂಧಿ ಬಜಾರ್ ತವರು ಮನೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಚಪ್ಪರ ಶಾಸ್ತ್ರ ನಡೆಯಿತು.
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಎನ್. ಉಮಾಪತಿ, ಎಂ.ಕೆ.ಸುರೇಶ್‌ಕುಮಾರ್, ಹೆಚ್.ವಿ. ತಿಮ್ಮಪ್ಪ, ಎಸ್. ಹನುಮಂತಪ್ಪ, ಡಿ.ಎಂ. ರಾಮಯ್ಯ, ಎಸ್.ಸಿ. ಲೋಕೇಶ್, ಸೀತಾರಾಮ್ ನಾಯಕ್, ಟಿ.ಎಸ್.ಚಂದ್ರಶೇಖರ್, ಎ.ಹೆಚ್. ಸುನೀಲ್, ಪೂಜಾ ಕನ್ವೀನಿಯರ್ ಸತ್ಯನಾರಾಯಣ್ , ವಿ. ರಾಜು, ಶ್ರೀಧರ್ ಮೂರ್ತಿ ನವುಲೆ, ಪ್ರಕಾಶ್, ಹರೀಶ್‌ಲಾಲು, ಸೋಮಶೇಖರ್ ನಾಡಿಗ್, ವಿಶ್ವ ಕರ್ಮ ಸಮಾಜದ ಪದಾಧಿಕಾರಿಗಳು ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ಬೆಂಗಳೂರು.



















