ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಾಡು, ನುಡಿಗೆ ಕ.ಸಾ.ಪ ಕಾರ್ಯ ಶ್ಲಾಘನೀಯ :ಅರುಣ ಸುಣಗಾರ

ನಾಲವಾರ ವಲಯ ಘಟಕ ಕಸಾಪ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಬದುಕು ಬರಹ ಕುರಿತು ವಿಶೇಷ ಕಾರ್ಯಕ್ರಮ ತರಕಸಪೇಠ ಗ್ರಾಮದಲ್ಲಿ ಜರುಗಿತು. ‌

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ತರಕಸಪೇಠ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಶಾಲಾ ಅವಧಿ ಮುಗಿದ ನಂತರ ನಾಲವಾರ ವಲಯ ಘಟಕ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಬದುಕು ಬರಹ ಕುರಿತು ವಿಶೇಷ ಕಾರ್ಯಕ್ರಮದಲ್ಲಿ ತಾಯಿ ಕನ್ನಡಾಂಬೆ ಭಾವಚಿತ್ರಕ್ಕೆ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಕ್ಕೆ ವಿಶೇಷವಾಗಿ ಪೂಜೆ ಮತ್ತು ಪುಷ್ಪ ನಮನ ಸಲ್ಲಿಸಲಾಯಿತು.
ವಿದ್ಯಾರ್ಥಿಗಳಲ್ಲಿ ಕನ್ನಡ ಆಸಕ್ತಿ ಮೂಡಿಸಲು ಪ್ರಬಂಧ, ಭಾಷಣ, ಮತ್ತು ಕವಿತೆ ವಾಚನ ಸ್ಪರ್ಧೆಗಳನ್ನು ರಂಗೋಲಿ ಸ್ಪರ್ಧೆ ಏರ್ಪಟ್ಟಿತು.
ನಾಲವಾರ ವಲಯ ಘಟಕದ ಕಸಾಪ ಅಧ್ಯಕ್ಷರಾದ ಅಂಜುನಾಥ ಎಸ್ ನಾಯ್ಕಲ್ ಇವರು ತಮ್ಮ ಪ್ರಾಸ್ತಾವಿಕ ಭಾಷಣ ಮಾಡುವ ಮೂಲಕ ಕನ್ನಡ ಸಾಹಿತ್ಯ ಬೆಳೆದು ಬಂದ ರೀತಿ ಕುರಿತು ತಿಳಿಸಿದರು ಮಕ್ಕಳಿಗೆ ಸಾಹಿತ್ಯ ಕೌಶಲ್ಯ ಬರೆಯುವ ಅಭ್ಯಾಸವನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು.
ತರಕಸಪೇಠ ಗ್ರಾಮ ಮಟ್ಟದಲ್ಲಿ ಕನ್ನಡದ ಚಟುವಟಿಕೆಗಳನ್ನು ಆಯೋಜಿಸಲಾದ ಆಯಾ ತಾಲ್ಲೂಕು ಮತ್ತು ಹೋಬಳಿ ಘಟಕಗಳ ಅಡಿಯಲ್ಲಿ ಕಾರ್ಯಕಾರಿ ಸಮಿತಿಗಳನ್ನು ರಚಿಸಲಾಗುತ್ತದೆ. ಇದು ಹಳ್ಳಿಗಳಲ್ಲಿ ಸಾಹಿತ್ಯಿಕ ಅಭಿರುಚಿ ಮೂಡಿಸಲು ಮತ್ತು ಸ್ಥಳೀಯ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗಿದೆ ಎಂದರು‌.

ಪ್ರಾಥಮಿಕ ಶಾಲಾ ಮುಖ್ಯ ಗುರುಗಳು ಸೋಮಶೇಖರ್ ಹೂಗಾರ ತರಕಸಪೇಠ ಅವರು ಅಧ್ಯಕ್ಷತೆ ವಹಿಸಿದ್ದರು.
ನಿರೂಪಣೆ – ಶಶಿಕುಮಾರ ವಿಶ್ವಕರ್ಮ

ಅರುಣ ಸುಣಗಾರ ನಾಲವಾರ ವಲಯ ಘಟಕ ಕಸಾಪ ಕಾರ್ಯದರ್ಶಿ ಅವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಸೇವೆಯಲ್ಲಿ ಶಿಕ್ಷಕರ ಪಾತ್ರ ಹಿರಿದು ಜೊತೆಗೆ ರಾಜ್ಯದ ಮೂಲೆಮೂಲೆಗಳಲ್ಲೂ ಶಿಕ್ಷಣ ಸೇವೆಯ ಜೊತೆಗೆ ಕನ್ನಡನಾಡಿನ ಸೇವೆಯನ್ನು ಕೂಡ ಸಾಹಿತ್ಯ ಪರಿಷತ್ತಿನ ಮೂಲಕ ಮಾಡುತ್ತಿರುವುದು ಅಭಿನಂದನಾರ್ಹ ಎಂದರು. ಹಾಗೂ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ನಾಲವಾರ ವಲಯ ಘಟಕ ಕಸಾಪ ಸಂಘಟನಾ ಕಾರ್ಯದರ್ಶಿ ಮಹಿಳಾ ಪ್ರತಿನಿಧಿ ಶಿವಲೀಲಾ ತುನ್ನೂರು ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.
ಈ ಸಂಧರ್ಭದಲ್ಲಿ ಶಾಲಾ ಮಕ್ಕಳು ಪ್ರಬಂಧ ಸ್ಪರ್ಧೆ. ಮತ್ತು ರಂಗೋಲಿ ಸ್ಪರ್ಧೆ. ಭಾಷಣ ಸ್ಪರ್ಧೆ ಹಾಗೂ ಕುವೆಂಪು ಅವರ ಕವಿತೆ ವಾಚನ ಮಾಡಿದರು ಮತ್ತು ರಾಷ್ಟ್ರಕವಿ ಕುವೆಂಪು ಅವರ ಬದುಕು ಬರಹ ಬಗ್ಗೆ ವಿಶೇಷ ಉಪನ್ಯಾಸ ನಾಗೇಶ ಶಿಕ್ಷಕರು ವಿಶ್ವಕರ್ಮ ಅವರು ಶಾಲಾ ಮಕ್ಕಳಿಗೆ ಉಪನ್ಯಾಸ ಮಾಡುವುದರ ಜೊತೆಗೆ ಮಾತನಾಡಿ, ಯಾವುದು ಕನ್ನಡ ಜ್ಞಾನವನ್ನು ಯುವ ಜನತೆಯಲ್ಲಿ ಹೆಚ್ಚಿಸುವ ದೃಷ್ಟಿಯಿಂದ ನಾಡು-ನುಡಿಗಾಗಿ ಎಲ್ಲರನ್ನು ಕೂಡ ಒಟ್ಟಾಗಿ ಸೇರಿಸುವ ಪ್ರಯತ್ನವನ್ನ ಈ ನಾಲವಾರ ವಲಯ ಘಟಕ ಕನ್ನಡ ಸಾಹಿತ್ಯ ಪರಿಷತ್ ಪ್ರಾರಂಭಿಸಿದೆ ಎಂದರು. ಇದೇ ಸಂಧರ್ಭದಲ್ಲಿ ಶಾಲಾ ಮಕ್ಕಳಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು ದ್ವಿತೀಯ ಸ್ಥಾನ ಪಡೆದ ಮಕ್ಕಳಿಗೆ ನಾಲವಾರ ವಲಯ ಘಟಕ ಕಸಾಪ ವತಿಯಿಂದ ಪ್ರಮಾಣ ಪತ್ರ ನೀಡಲಾಯಿತು ಎಂದು ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ನಾಲವಾರ ವಲಯ ಘಟಕ ಕನ್ನಡ ಸಾಹಿತ್ಯ ಪರಿಷತ್ತು ಸಂಘಟನಾ ಕಾರ್ಯದರ್ಶಿ ಅವರು ತಿಳಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!