ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಸಿದ ಹೊಟ್ಟೆಯಲ್ಲಿ ಶಿವರಾತ್ರಿ ಆಚರಿಸದಿರಿ : ಇಷ್ಟಲಿಂಗ ಪೂಜೆ ನೆರವೇರಿಸಿ : ಗುರುಮಹಾಂತ ಶ್ರೀಗಳು

ಬಸವ ಮಂಟಪದಲ್ಲಿ ಶಿವರಾತ್ರಿ ಆಚರಣೆ : ಸಾಮೂಹಿಕ ವಚನ ಪಠಣ, ಇಷ್ಟ ಲಿಂಗಧಾರಣೆ

ಬಾಗಲಕೋಟೆ/ ಹುನಗುಂದ: ಹಸಿದ ಹೊಟ್ಟೆಯಲ್ಲಿ ಶಿವರಾತ್ರಿಯನ್ನು ಆಚರಿಸದೇ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಹಣ್ಣು ಪ್ರಸಾದ ಸೇವಿಸಿ ಶಿವರಾತ್ರಿ ಆಚರಿಸಬೇಕು ಎಂದು ಚಿತ್ತರಗಿ ಸಂಸ್ಥಾನ ಮಠ ಹುನಗುಂದದ ಗುರುಮಹಾಂತ ಶ್ರೀಗಳು ಹೇಳಿದರು.

ರವಿವಾರ ಪಟ್ಟಣದ ಬಸವ ಮಂಟಪದಲ್ಲಿ ಬಸವ ಕೇಂದ್ರ, ಅಕ್ಕನ ಬಳಗ ಮತ್ತು ವಿಜಯ ಮಹಾಂತೇಶ ತರುಣ ಸಂಘ ಹಾಗೂ ಶ್ರೀಶೈಲ ಪಾದಯಾತ್ರಾ ಸೇವಾ ಸಮಿತಿ ಸಹಯೋಗದಲ್ಲಿ ಶಿವರಾತ್ರಿ ನಿಮಿತ್ಯ ಸಾಮೂಹಿಕ ವಚನ ಪಠಣ, ಇಷ್ಟ ಲಿಂಗಪೂಜೆ,ಪ್ರಸಾದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಬಸವ ಭಕ್ತರಿಗೆ ಇಷ್ಟಲಿಂಗ ಧಾರಣೆ ಮಾಡಿ ಮಾತನಾಡಿದ ಅವರು, ವಿಶ್ವ ಗುರು ಬಸವಣ್ಣನವರು ಕೊಟ್ಟ ಇಷ್ಟ ಲಿಂಗವನ್ನು ಅಂಗದ ಮೇಲೆ ಧರಿಸಿಕೊಂಡು ಏಕ ದೃಷ್ಟಿ ಹರಿಸಿದಾಗ ಮಾತ್ರ ಪ್ರತಿಯೊಬ್ಬರಲ್ಲಿಯೂ ಸಕಾರಾತ್ಮಕ ವಿಚಾರಗಳು ನಮ್ಮಲ್ಲಿ ಮೂಡಲು ಸಾಧ್ಯವಾಗುತ್ತದೆ, ಮೂಢ ನಂಬಿಕೆ ಮತ್ತು ವಾಮಾಚಾರಕ್ಕೆ ಜನರು ಮಾರುಹೋಗಿ ದುಡ್ಡು ಮತ್ತು ಆಸ್ತಿ, ಜೀವ ಕಳೆದುಕೊಂಡ ಉದಾಹರಣೆಗಳು ಸಾಕಷ್ಟಿವೆ. ಯಾವುದಕ್ಕೂ ಅವುಗಳನ್ನು ನಂಬದೆ ಇಷ್ಟ ಲಿಂಗವನ್ನು ಪೂಜಿಸಿ ನಮ್ಮೊಳಗಿರುವ ಆತ್ಮವೆ ನಮಗೆ ಪರಮಾತ್ಮ ಎಂದರು.

ಪಟ್ಟಣದ ಪ್ರತಿಷ್ಟಿತ ವ್ಯಾಪಾರಿ ದೇವಶಟ್ಟಿ(ತುಪ್ಪದ ಶಟ್ರು) ಮನೆತನದ ಅವಿಭಕ್ತ ಕುಟುಂಬವು ಕಳೆದ ೪೮ವರ್ಷಗಳಿಂದ ಶಿವರಾತ್ರಿ ನಿಮಿತ್ಯ ಪ್ರತಿ ವರ್ಷದಂತೆ ಈ ವರ್ಷವೂ ಬಸವ ಮಂಟಪದಲ್ಲಿ ಶ್ರೀ ವಿಜಯ ಮಹಾಂತೇಶ ಸಂಸ್ಥಾನಮಠ ಚಿತ್ತರಗಿ ಪೂಜ್ಯರ ನೇತೃತ್ವದಲ್ಲಿ ಪ್ರಸಾದ, ಹಣ್ಣು ಹಂಫಲ ಸೇವೆಯನ್ನು ನೆರವೇರಿಸಿದರು.

ಶಿರೂರದ ಮಹಾಂತ ತೀರ್ಥದ ಡಾ. ಬಸವಲಿಂಗ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಸಂಗಣ್ಣ ಕೊಟ್ರಪ್ಪ ದೇವಶಟ್ಟಿ, ಬಸವರಾಜ ದೇವಶಟ್ಟಿ, ಘಜಕುಮಾರ ದೇವಶಟ್ಟಿ, ಬಸಮ್ಮ ದೇವಶಟ್ಟಿ, ದೀಪಾ ದೇವಶಟ್ಟಿ, ಶೈಲಾ ದೇವಶಟ್ಟಿ ಹಾಗೂ ಕುಟುಂಬದ ಸದಸ್ಯರು, ಕಿಡಿಯಪ್ಪ ಹೂಲಗೇರಿ, ಶಿವಪ್ಪ ನಾಗೂರ, ಪರಸಪ್ಪ ಪಲ್ಲೇದ, ಮಹಾಂತೇಶ ಹೊದ್ಲೂರ, ಸಂಗಣ್ಣ ಚಿನಿವಾಲರ, ಬಸವರಾಜ ಕಡಪಟ್ಟಿ, ಮುತ್ತಕ್ಕ ಬಾವಿಕಟ್ಟಿ, ವೀರೇಶ ಕುರ್ತಕೋಟಿ, ವೀರಣ್ಣ ಬಳೂಟಗಿ, ಬಸವರಾಜ ದರಗಾದ, ಮಲ್ಲಿಕಾರ್ಜುನ ದರಗಾದ, ಬಸವರಾಜ ಗದ್ದಿ, ಮಹಾಂತೇಶ ಅವಾರಿ, ಪ್ರಭು ನಾಗೂರ ಸೇರಿದಂತೆ ಅನೇಕರು ಇದ್ದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!