ಬಾಗಲಕೋಟೆ/ ಇಲಕಲ್ಲ : ವಿದ್ಯಾರ್ಥಿಗಳ ಉತ್ತಮ ವ್ಯಾಸಂಗಕ್ಕಾಗಿ ತಾಲೂಕಿನ ಕಂದಗಲ್ಲ ಗ್ರಾಮದ ಸಜ್ಜಲಶ್ರೀ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ವಿಭಾಗದ 1 ಹಾಗೂ 2 ನೆ ತರಗತಿಯ ವಿದ್ಯಾರ್ಥಿಗಳಿಗಾಗಿ ಅವರ ವಿದ್ಯಾರ್ಜನೆಗೆ ಪೂರಕವಾದ ವಿಶೇಷ ಕೊಠಡಿಯನ್ನು ಅತ್ಯಂತ ಅಚ್ಚು ಕಟ್ಟಾಗಿ, ಮಕ್ಕಳ ಉತ್ತಮವಾದ ಕಲಿಕೆಗೆ ಸರಳ ರೀತಿಯ ಅನುಕೂಲ ಕಲ್ಪಿಸಿ ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಕಠಿಬದ್ಧರಾಗಿ ನಿಂತು ಅಂದವಾದ ಕೊಠಡಿಗೆ ಕೈ ಜೋಡಿಸಿದ ಗುರುಗಳೇ ಕಂದಗಲ್ಲ ಗ್ರಾಮದ ಸಜ್ಜಲಶ್ರೀ ಶಿಕ್ಷಣ ಸಂಸ್ಥೆಯ ಹೆಮ್ಮೆಯ ಧೈಹಿಕ ಗುರುಗಳಾದ ಬಸವರಾಜ ಮಸ್ಕಿಮಠ ಗುರುಗಳರವರು.
ನಮ್ಮ ದೇಶದ ಪ್ರತಿಯೊಂದು ರಂಗಗಳಲ್ಲಿ ಗುರುತಿಸಿಕೊಂಡಿರುವ ಮಹಾನ್ ನಾಯಕರುಗಳ ಭಾವಚಿತ್ರಗಳು ,ಅಕ್ಷರಗಳ ಪಟಗಳು ಕೋಣೆಗೆ ಬಣ್ಣ ಸೇರಿದಂತೆ ತಮ್ಮ ಸ್ವಂತ ಖರ್ಚಿನಲ್ಲಿ ಸಾವಿರಾರು ರೂ. ಗಳನ್ನು ಖರ್ಚು ಮಾಡಿ ಒಂದು ಉತ್ತಮವಾದ ಕಲಿಕೆಗೆ ಪೂರಕವಾದ ಮಾದರಿ ಕೊಠಡಿಯನ್ನು ವಿದ್ಯಾರ್ಥಿಗಳ ಉತ್ತಮ ವ್ಯಾಸಂಗಕ್ಕಾಗಿ ಕಲ್ಪಿಸಿಕೊಟ್ಟಿದ್ದಾರೆ.
ಗುರುಗಳ ಈ ಸೇವೆಯನ್ನು ಸ್ಮರಿಸಿ ಮುಖ್ಯ ಗುರುಗಳಾದ ಎಸ್ ಎ ಉಪನಾಳ ಸೇರಿದಂತೆ ಎಲ್ಲಾ ಗುರುವೃಂದ ಮತ್ತು ಎಸ್ ಡಿ ಎಂ ಸಿ ಹಾಗೂ ಗ್ರಾಮಸ್ಥರು ಮಸ್ಕಿಮಠ ಗುರುಗಳನ್ನು ಅಭಿನಂದಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ



















