ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಫೆಬ್ರುವರಿ.24 ರಂದು ಸುಗೂರು (ಎನ್.) ಶ್ರೀ ಭೋಜಲಿಂಗೇಶ್ವರ ಜಾತ್ರಾ ಮಹೋತ್ಸವ ‌

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಕ್ಷೇತ್ರ ಸೂಗೂರು (ಎನ್.) ಗ್ರಾಮದ ಪವಾಡ ಪುರುಷ ಸಚ್ಚಿದಾನಂದ ನಿತ್ಯ ನಿರಂಜನ ಮೂರ್ತಿ, ಸ್ವಯಂಸಿದ್ಧ ಶರಣರಾದ ಸದ್ಗುರು ಶ್ರೀ ಭೋಜಲಿಂಗೇಶ್ವರ ಜಾತ್ರಾ ಮಹೋತ್ಸವ ಫೆಬ್ರುವರಿ ಮಂಗಳವಾರ 24-02-2026 ರಂದು ಸಾವಿರಾರು ಭಕ್ತರ ಮಧ್ಯೆ ಅದ್ಧೂರಿಯಾಗಿ ನಡೆಯಲಿದೆ ಎಂದು ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಶ್ರೀ ಹಿರಗಪ್ಪ ತಾತಾನವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಾಂಕ 20-02-2026 ಶುಕ್ರವಾರ ದಿನದಂದು ರಾತ್ರಿ 7.30ಕ್ಕೆ ಶಿವಕೀರ್ತನೆ ಪ್ರಾರಂಭವಾಗಲಿದ್ದು, ನಂತರ 10 ಗಂಟೆಗೆ ದಾವಲ್ ಮಲ್ಲಿಕ್ ದರ್ಗಾಕ್ಕೆ ಗಂಧ ಮೆರವಣಿಗೆ, ಫೆ. 22-02-2026ರಂದು ಶ್ರೀಭೋಜಲಿಂಗೇಶ್ವರರ 33ನೇ ಪುಣ್ಯಾರಾಧನೆ ಮತ್ತು ಫೆ.23 ರಂದು ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಲಿದೆ ಎಂದರು.
ಫೆ.24 ರಂದು ಬೆಳಿಗ್ಗೆ ಕರ್ತೃ ಗದ್ದುಗೆಗೆ ಮಹಾರುದ್ರಾ ಭಿಷೇಕ ಹಾಗೂ ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ನಂತರ ಸಂಜೆ 7-05ಕ್ಕೆ ಭವ್ಯ
ರಥೋತ್ಸವ ಹಾಗೂ ಮುಂಬೈ ಉದ್ಯಮಿ ಲಾಲಾಸೇಠ್ ಅವರಿಂದ ಮದ್ದು (ಪಟಾಕಿ) ಸುಡುವ ಕಾರ್ಯಕ್ರಮ ನಡೆಯಲಿದೆ ಎಂದರು.
ರಾತ್ರಿ 8ಕ್ಕೆ ಶ್ರೀ ಹಿರಗಪ್ಪ ತಾತಾನವರ ಅಧ್ಯಕ್ಷತೆಯಲ್ಲಿ ಧರ್ಮಸಭೆ ನಡೆಯಲಿದ್ದು.
ಸಾನಿಧ್ಯ ಶ್ರೀ.ಷ.ಬ್ರ.ಡಾ. ಶಿವಕುಮಾರ್ ಶಿವಾಚಾರ್ಯ ಮಹಾಸ್ವಾಮಿಗಳು -ಚರಂತಿಮಠ ಕೆರೂರ, ಹಾಗೂ ಉದ್ಘಾಟನೆ- ಶ್ರೀ.ಷ.ಬ್ರ.ಅಭಿನವ ಕಾಡಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮರಡಿಮಠ ಗುಳೇದಗುಡ್ಡ ಪೂಜ್ಯರು ಅವರು ಸಾನಿಧ್ಯ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಜನಪ್ರತಿ ನಿಧಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಇದೇ ಸಂಧರ್ಭದಲ್ಲಿ ಶಿವ ಕೀರ್ತನೆ – ಪ್ರವಚನಕಾರರು ಪಂಡಿತ ಪುಟ್ಟರಾಜ ಗುರುಗಳ ಹಾಗೂ ಶ್ರೀ ಕಲ್ಲಯ್ಯಜ್ಜನವರ ಶಿಷ್ಯಂದಿರಾದ ಯುವ ಪ್ರವಚನಕಾರ
ಶ್ರೀ ದೊಡ್ಡಬಸಯ್ಯ ಶಾಸ್ತ್ರಿಗಳು ಖರಾಬದಿನ್ನಿ ಮಾನ್ವಿ ತಾಲೂಕ, ಸಂಗೀತಗಾರರು ಗಾನಕೋಗಿಲೆ
ಶರಣಯ್ಯ ಗವಾಯಿಗಳು ಸಾ-ಸೋಮನಾಳ, ತಬಲಾವಾದಕಾರು ತಬಲಾ ಚತುರ ಶಂಕರಯ್ಯ ಸ್ವಾಮಿ ಮಠಮಾರಿ ಭಾಗವಹಿಸಲಿದ್ದಾರೆ.
ನಂತರ 11 ಗಂಟೆಗೆ ರಾತ್ರಿ ರಸ ಮಂಜರಿ ಹಾಸ್ಯ ಕಾರ್ಯಕ್ರಮದಲ್ಲಿ ಪ್ರಭಾ ಕಂಬಾರ ಎದೆ ತುಂಬಿ ಹಾಡುವೆನು ಗಾಯಕಿ ರಾಯಚೂರು ಮತ್ತು ದೇವರಾಜ್ ಯಲಿ ಹಾಸ್ಯಮಯ ಕಾಮಿಡಿ ಕಲಾವಿದರು ಗೊಬ್ಬೂರ‌. ಚನ್ನಬಸವ ಗಾಯಕರು ಸಿಂಧನೂರು. ರಾಜು ಜಾದುಗಾರ ವಿಜಯಪುರ. ದೀಪಿಕಾ ಮಂಗಳೂರು ಕಾಮಿಡಿ ಕಿಲಾಡಿ ಖ್ಯಾತಿಯ ಹಾಸ್ಯ ಕಲಾವಿದೆ. ಮತ್ತು ಪ್ರವೀಣ್ ಗಸ್ತಿ ಕಾಮಿಡಿ ಕಿಲಾಡಿಯ ಖ್ಯಾತಿ ಯ ಹಾಸ್ಯ ಕಲಾವಿದರ ಮನರಂಜನಾ ಕಾರ್ಯಕ್ರಮಗಳನ್ನು ನಡೆಯಲಿದೆ. ಫೆ.25ರಂದು ಸಾಯಂಕಾಲ 6 ಗಂಟೆಯಿಂದ ಗ್ರಾಮೀಣ ಕ್ರೀಡೆಯಾದಕ್ಕೆ ಕುಸ್ತಿ ಪಂದ್ಯಾವಳಿ ಕಾರ್ಯಕ್ರಮ ಜರುಗಲಿದ್ದು, ನೂರಾರು ಕುಸ್ತಿ ಪಟುಗಳು ತಮ್ಮ ಸಾಮರ್ಥ್ಯ ತೋರಲಿದ್ದಾರೆ. ಎಂದರು.
ಪತ್ರಿಕಾಗೋಷ್ಟಿಯಲ್ಲಿ ನಿವೃತ್ತ ಪ್ರಾಂಶುಪಾಲ ಎಸ್ ಎಸ್ ಜ್ಯುಗೇರಿ, ಮತ್ತು ಶ್ರೀ ಈರಣ್ಣ ಬಲಕಲ್ ಎಲ್ ಐ ಸಿ ಯಾದಗಿರ. ಶ್ರೀ ಶರಣಗೌಡ ಬೆನಕನಹಳ್ಳಿ.ಶ್ರೀ ಭೀಮರೆಡ್ಡಿ ಗೌಡ ಕುರಾಳ ಸುಗೂರ ಎನ್.ವಿಶ್ವನಾಥ ರೆಡ್ಡಿ ಪಾಟೀಲ ಸುಗೂರ ಎನ್‌.ಸಿದ್ರಾಮರೆಡ್ಡಿ ಗೌಡ ಬೆನಕನಹಳ್ಳಿ. ಶರಣಗೌಡ ತುಮಕೂರು.ಸಂಗಾರೆಡ್ಡಿ ಗೌಡ ಮಾಲಿ ಪಾಟೀಲ.ಮಹಿಪಾಲ ರೆಡ್ಡಿ ಕರಣಗಿ.ಮಹಾದೇವರೆಡ್ಡಿ ಗೌಡ ತುಮಕೂರು. ಪ್ರಭು ಹೂಗಾರ ಯಾದಗಿರ. ಮಲ್ಲಿಕಾರ್ಜುನ ಕಾರ್ಪೆಟರ್ ಯಾದಗಿರ. ಸುರೇಶ್ ಕೋಟಿ ಮನಿ ಯಾದಗಿರ. ಮಲ್ಲಪ್ಪ ಅರಿಕೇರಿ ಮಾಸ್ತರ, ಶಂಕರಗೌಡ ಮಾಸ್ತರ ಲಿಂಗಸುಗೂರ,ನರೇಂದ್ರ ಗುತ್ತಿ. ಮಹಾಂತೇಶ ಗೌಡರು ಹಿರೇಮಠ ಲಿಂಗಸುಗುರ, ಡಾ.ಸುರೇಶ ಮಾಘಾನೂರ‌.ಮಹಾದೇವಪ್ಪ ಸಾಹುಕಾರ್ ಕುರಕುಂದಿ. ಬಸವರಾಜ್ ಪಾಟೀಲ.ಮಲ್ಲಿನಾಥ ಚಿನ್ನಾಪೋಟೊ ಸ್ಟುಡಿಯೋ.ಭಾಬು ಪಾಟೀಲ ಸುಗೂರ ಎನ್. ಸಿದ್ದು ಗೌಡ ಕುರಾಳ. ಭೋಜು ಚಿಗರಳ್ಳಿ ಅವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು ಎಂದು ಪತ್ರಿಕೆ ಪ್ರಕಟಣೆಯ ಮೂಲಕ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ತಿಳಿಸಿದ್ದಾರೆ.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!