ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಜನರೊಂದಿಗೆ ಜನತಾದಳ ಸಮಾವೇಶ ಕಾರ್ಯಕ್ರಮದಲ್ಲಿ ಪಿರಿಯಾಪಟ್ಟಣದಲ್ಲಿ ಜೆಡಿಎಸ್ ಆಯ್ಕೆ ಶತಸಿದ್ಧ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿಯವರು ವಿಶ್ವಾಸ ವ್ಯಕ್ತಪಡಿಸಿದರು ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ 2028ರ ಆಯ್ಕೆ ಜನರು ತೀರ್ಮಾನ ಮಾಡಿರುತ್ತಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ ಮಹಾದೇವವರು ಮತ್ತು ಅವರ ಪುತ್ರ ಪಿಎಂ ಪ್ರಸನ್ನರವನ್ನು ವೇದಿಕೆಯಲ್ಲಿ ಕೈಜೋಡಿಸಿ ಕೈ ಮೇಲೆ ಎತ್ತುವ ಮೂಲಕ ಕಾರ್ಯಕರ್ತರಿಗೆ ಯಾವುದೇ ಗೊಂದಲವಿಲ್ಲವೆಂದು ತಿಳಿಸಿ ನಂತರ ಸಾರಾ ಮಹೇಶ್ ರವರು ಮಾತನಾಡಿ ಸಿಎಂ ಸಿದ್ದರಾಮಯ್ಯರವರು 5ಲಕ್ಷ ಕೋಟಿ ಸಾಲ ಮಾಡಿರೋದೇ ಅವರ ಸಾಧನೆ ಎಂದು ಹೇಳಿದರು ನಂತರ ಜಿಟಿ ಹರೀಶ್ ಗೌಡರವರು ಮಾತನಾಡಿ ಪಿರಿಯಾಪಟ್ಟಣ ತಾಲೂಕಿನ ಕಾರ್ಯಕರ್ತರು ಅಪ್ಪಟ ಚಿನ್ನವಿದ್ದಂತೆ ಅವರು ಯಾವುದೇ ಆಸೆ ಆಕಾಂಕ್ಷೆಗಳಿಗೆ ಪಡುವವರಲ್ಲ ಎಂದು ತಿಳಿಸಿದರು.
ಕೆ ಮಾದೇವವರು ಮಾತನಾಡಿ ನಾನು ಬದುಕಿರುವವರಿಗೆ ಕಾರ್ಯಕರ್ತರ ನಂಬಿಕೆ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದು ತಿಳಿಸಿದರು. ನಂತರ ಪ್ರಸನ್ನ ರವರು ಮಾತನಾಡಿ ನಾವು ಮತ್ತು ನಮ್ಮ ತಂದೆಯವರು ಕಾರ್ಯಕರ್ತರಿಗೋಸ್ಕರ ನಮ್ಮ ಜೀವನವನ್ನೇ ಮುಡುಪಾಗಿಡುತ್ತೇವೆ ಎಂದು ತಿಳಿಸಿದರು ನಾನು ಮೈಮುಲ್ ಅಧ್ಯಕ್ಷರಾದಾಗ ನಮ್ಮ ತಂದೆಯವರು ರೈತರಿಗೋಸ್ಕರ ಯಾವುದೇ ಆಸೆ ಪಡದೆ ಇರುವಂತೆ ತಿಳಿಸಿದರು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ , ಕೇಂದ್ರದ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಅವರ ಆಡಳಿತದಲ್ಲಿ ಜನರು ನೆಮ್ಮದಿಯಿಂದ ಇದ್ದರು. ಅದೇ ರೀತಿ ಮತ್ತೊಮ್ಮೆ ಅವರು ಮುಖ್ಯಮಂತ್ರಿಯಾಗುವುದು ಖಚಿತ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಘಟಕದ ಅಧ್ಯಕ್ಷರಾದ ನಿಖಿಲ್ ರವರು ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರಾದ ಅಶ್ವಿನ್ ಕುಮಾರ್ ರವರು ಹುಣಸೂರು ಶಾಸಕರಾದ ಜಿ ಟಿ ಹರೀಶ್ ಗೌಡರವರು ವಿಧಾನ ಪರಿಷತ್ ಸದಸ್ಯರಾದ ವಿವೇಕಾನಂದರವರು ಸಿಎಂ ಮಂಜೇಗೌಡರು ತಾಲೂಕು ಘಟಕದ ಅಧ್ಯಕ್ಷರಾದ ಅಣ್ಣಯ್ಯ ಶೆಟ್ಟಿ ರವರು ಮೈಸೂರು ಮಹಾನಗರ ಪಾಲಿಕೆ ಮಾಜಿ ಮೇರಾದ ರವಿಕುಮಾರ್ ರವರು ಗಗನ್ ರವರು ಎಸ್ ರಾಮರಾವ್ ಎ ಟಿ ರಂಗಸ್ವಾಮಿ ಹಾಗೂ ಜೆಡಿಎಸ್ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ ಹೆಚ್. ಆರ್. ಶಂಕರ್



















