ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪರೋಪಕಾರ ಜೀವನ ನಮ್ಮದಾಗಬೇಕು : ಶ್ರೀಗಳು

ಕೊಪ್ಪಳ/ ಕುಕನೂರ : ನಮ್ಮೆಲ್ಲರ ಜೀವನದ ಬದುಕು ಸಾರ್ಥಕವಾಗಬೇಕಾದರೆ ಮತ್ತೊಬ್ಬರ ಬದುಕಿನ ಬಾಳಿಗಾಗಿ ಪರೋಪಕಾರಿ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ರಾಜೂರಿನ ಬೃಹನ್ಮಠದ ಮ.ಘ.ಚ ಅಭಿನವ ಪಂಚಾಕ್ಷರ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಅವರು ತಾಲೂಕಿನ ರಾಜೂರ ಗ್ರಾಮದ ಶರಣಬಸವೇಶ್ವರ ಬೃಹನ್ಮಠದಲ್ಲಿ ೬೬ ನೇ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿದರು. ಮಠಗಳು ಭಕ್ತರಿಗೆ ಉತ್ತಮ ಸಂಸ್ಕಾರ ಸಂಸ್ಕೃತಿ ನೀಡುವಲ್ಲಿ ಶ್ರಮಿಸುತ್ತಿವೆ, ಮಠಗಳ ಪೂಜ್ಯರ ಕೊಡುಗೆ ಅಪಾರವಾದದು ಎಂದು ನಿವೃತ್ತ ಶಿಕ್ಷಕ ಅಶೋಕ ಮಾಲಿಪಾಟೀಲ್ ಅವರು ” ಜೀವನದ ಸಾರ್ಥಕ ಬದುಕು ಮತ್ತು ಪರೋಪಕಾರ ಚಿಂತನ ಗೋಷ್ಠಿಯಲ್ಲಿ ಉಪನ್ಯಾಸ ನೀಡಿದರು. ಶರಣ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಶರಣಬಸಪ್ಪ ದಾನಕೈ ಉಪಸ್ಥಿತಿ ಇದ್ದರು. ಸಂಗನಾಳ ಗ್ರಾಮದ ಶರಣಪ್ಪ ಕವಳಕೇರಿ,ಶರಣಪ್ಪ ಶಿವರಡ್ಡಿ ಸಂಗೀತ ಸೇವೆ ನೀಡಿದರು.ಶೇಖರಪ್ಪ ದೇ.ಮೂಲಿಮನಿ ಭಕ್ತಿಸೇವೆ ವಹಿಸಿಕೊಂಡಿದ್ದರು.
ವಿರುಪಾಕ್ಷಯ್ಯ ಬಡ್ಡಿಮಠ, ಶಿವಲಿಂಗಪ್ಪ ಕವಲೂರ ಭಾಗವಹಿಸಿದ್ದರು. ಜಗದೀಶ ಬಡಿಗೇರ ವಂದಿಸಿದರು. ಗ್ರಾಮದ ಗುರು ಹಿರಿಯರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!