ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜನತೆಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹುಟ್ಟು ಹಾಕಿದ ಸಂಘಟನೆ : ಕೆ. ಮಲ್ಲಿಕಾರ್ಜುನ

ಬಳ್ಳಾರಿ / ಕಂಪ್ಲಿ : ಬಡ ಹಾಗೂ ಮಧ್ಯಮ ವರ್ಗದ ಜನರ ಧ್ವನಿಯಾಗಿ ನಿಲ್ಲಲು ಹಾಗೂ ಸರ್ಕಾರದ ಸೌಲಭ್ಯಗಳನ್ನು ನೀಡುವ ಜೊತೆಗೆ ಜನರ ಸಂಕಷ್ಟವನ್ನು ಆಲಿಸಿ, ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪ್ರೋ.ಬಿ.ಕೃಷ್ಣಪ್ಪ ಇವರು ಸಂಘಟನೆ ಹುಟ್ಟು ಹಾಕಿದ್ದಾರೆ ಎಂದು ರಾಜ್ಯ ಸಂಘಟನಾ ಸಂಚಾಲಕ ಕೆ.ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಸಣಾಪುರ ರಸ್ತೆಯ ಶಾರದಾ ಶಾಲೆ ಆವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿತ)ಯ ನಗರ ಘಟಕ ಸಂಚಾಲಕ ಹೆಚ್. ಶ್ರೀನಿವಾಸ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಪ್ರತಿಯೊಂದು ಸೌಕರ್ಯಗಳನ್ನು ಪಡೆದು ನೆಮ್ಮದಿಯ ಬದುಕು ಸಾಗಿಸಬೇಕು ಎಂದರು.
ಕಂಪ್ಲಿ ತಾಲೂಕು ಸಂಚಾಲಕ ಹೆಚ್. ಗುಂಡಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, 72ನೇ ದಶಕದಲ್ಲಿ ಸಂಘಟನೆ ಹುಟ್ಟು ಹಾಕಿದರು. ದಲಿತ ಮೇಲಿನ ದೌರ್ಬಲ್ಯ ಸೇರಿದಂತೆ ಅನ್ಯಾಯದ ವಿರುದ್ಧ ಹೋರಾಟದ ಮೂಲಕ ಧ್ವನಿ ಎತ್ತುವ ದೃಷ್ಠಿಕೋನದಿಂದ ಸಂಘಟನೆ ಸ್ಥಾಪಿಸಿದ್ದಾರೆ. ಅಂಬೇಡ್ಕರ್ ಅವರ ಸಿದ್ಧಾಂತದೊಂದಿಗೆ ರಾಜ್ಯದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟದೊಂದಿಗೆ ತಡೆಗಟ್ಟಬೇಕಾಗಿದೆ ಎಂದರು.
ನಗರ ಘಟಕ ಸಂಚಾಲಕ ಹೆಚ್. ಶ್ರೀನಿವಾಸ ಮಾತನಾಡಿ, ಸಂಘಟನೆಯ ಧ್ಯೇಯ ಉದ್ದೇಶದೊಂದಿಗೆ ದಲಿತ ಹಾಗೂ ಹಿಂದುಳಿತ ಜನತೆಗೆ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನದ ಜೊತೆಗೆ ಸಂಘಟನೆಯ ಬಲವರ್ಧನೆಗೆ ಶ್ರಮಿಸಲಾಗುವುದು ಎಂದರು.
ಹಂಪಿ ಮಾತಂಗ ಪರ್ವತದ ಪೂರ್ಣನಂದ ಭಾರತಿ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿದ್ದರು.
ಉಪನ್ಯಾಸಕ ಜಡೆಪ್ಪ ಸಂವಿಧಾನದ ಪೀಠಿಕೆ ಪಠಿಸುವ ಜೊತೆಗೆ ಉಪನ್ಯಾಸ ನೀಡಿದರು.
ಪದಗ್ರಹಣ: ನಗರ ಘಟಕ ಸಂಚಾಲಕ ಹೆಚ್.ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿ ಎ.ದುರುಗೇಶ, ಉಪಾಧ್ಯಕ್ಷರಾದ ಶಂಭುಲಿಂಗ, ಹನುಮಂತ, ಬಾಬು ನೇತೃತ್ವದಲ್ಲಿ ಮಾರೇಶ, ಶರಣ, ಶೇಖರ್, ಮಂಜುನಾಥ, ಮಾರುತಿ, ರಾಘು, ಹುಲುಗಪ್ಪ, ಮೌಲಾಹುಸೇನ್, ರಾಜಶೇಖರ, ಸಾಬಣ್ಣ, ಹನುಮಂತ, ಹೊನ್ನೂರಪ್ಪ, ಸುಧಾಕರ ಸೇರಿದಂತೆ ಇತರರು ನೀಲಿ ಶಾಲಿನೊಂದಿಗೆ ಪದಗ್ರಹಣ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎ.ಲಕ್ಷ್ಮೀಪತಿ, ಪಕ್ಕೀರಪ್ಪ, ಮರಿಸ್ವಾಮಿ, ಹುಲುಗಪ್ಪ, ವಸಂತರಾಜ ಕಹಳೆ, ವಿಬಿ ನಾಗರಾಜ, ಸಣ್ಣ ಹುಲುಗಪ್ಪ, ತಾಯಪ್ಪ, ಜಂಬಣ್ಣ, ಪಂಪಾಪತಿ, ವಿಘ್ನೇಶ್ವರ, ಹುಸೇನಪ್ಪ, ಆರ್.ಪಿ.ಶಶಿಕುಮಾರ, ರಾಜಪ್ಪ, ಪರಶುರಾಮ, ಹೊನ್ನೂರಪ್ಪ, ಉಮೇಶ, ಬುಜ್ಜಿಕುಮಾರ, ಲಕ್ಷ್ಮಣ ಬಂಡಾರಿ ಸೇರಿದಂತೆ ಮಹಿಳೆಯರು, ಪದಾಧಿಕಾರಿಗಳು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!