ಹುನಗುಂದ: ತಾಲೂಕು ಸರ್ಕಾರಿ ನಿವೃತ್ತ ನೌಕರರ ಹಿತವರ್ಧಕ ಸಂಘದ ೨೭ ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ೭೦ ವರ್ಷ ಪೂರೈಸಿದ ಹಿರಿಯ ಚೇತನರ ಸನ್ಮಾನ ಕಾರ್ಯಕ್ರಮ ೨೫ ರಂದು ಬುಧವಾರ ಮುಂಜಾನೆ ೧೦-೩೦ ಕ್ಕೆ ಇಲ್ಲಿನ ಗುರುಭವನದಲ್ಲಿ ನಡೆಯುವುದು.
ಸಂಘದ ಅಧ್ಯಕ್ಷ ಎ.ಕೆ.ಉಪನಾಳ ಅಧ್ಯಕ್ಷತೆ ವಹಿಸುವರು. ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಉದ್ಘಾಟಿಸುವರು.
ಹಿರಿಯ ಲೇಖಕಿ ಡಾ.ಲಲಿತಾ ಹೊಸಪ್ಯಾಟಿ ಜ್ಯೋತಿ ಬೆಳಗಿಸುವರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ, ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಸಂಗಮೇಶ ಪಾಟೀಲ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಂ.ಟಿ.ನಡುವಿನಮನಿ ಮುಖ್ಯ ಅತಿಥಿಗಳಾಗಿರುವರು. ಸಂಘದ ಸರ್ವ ಸದಸ್ಯರು ಸಕಾಲಕ್ಕೆ ಬರಬೇಕೆಂದು ಪ್ರಧಾನ ಕಾರ್ಯದರ್ಶಿ ಬಿ.ವೈ.ಕೊಡಗಾನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ



















