ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕುತಂತ್ರದ ಜಾಲದಲ್ಲಿ ಆನಂದಾಶ್ರಮ? ಯಾನಾಗುಂದಿ ಟ್ರಸ್ಟಿಗಳಿಂದ ರಕ್ಷಿಸಲು ಭಕ್ತರಲ್ಲಿ ಮನವಿ ಮಾಡಿದ ಈಶ್ವರಿ ಮಾತಾ

ಗುರುಮಠಕಲ್ : ನಲ್ಗೊಂಡಾ ಜಿಲ್ಲೆಯ ಗಂಧಂವಾರಿಗೂಡೆಂನಲ್ಲಿರುವ ಶ್ರೀ ಮಾತಾಮಾಣಿಕೇಶ್ವರಿ ಆನಂದಾಶ್ರಮವನ್ನು ರಕ್ಷಿಸುವಂತೆ ಆಶ್ರಮದ ಮುಖ್ಯಸ್ಥೆ ಈಶ್ವರಿ ಮಾತಾ ಅವರು ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ ಹತ್ತು ವರ್ಷಗಳಿಂದ ಯಾನಾಗುಂದಿ ಆಶ್ರಮದ ವ್ಯವಸ್ಥಾಪಕ ಶಿವಯ್ಯಸ್ವಾಮಿ ಹಾಗೂ ಟ್ರಸ್ಟಿ ಜಗಜೀವನರೆಡ್ಡಿ ಅವರಿಂದ ಆಶ್ರಮದ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಯುತ್ತಿದೆ ಎಂದು ಆರೋಪಿಸಿದರು.
ಆಶ್ರಮದ ಇತರೆ ಟ್ರಸ್ಟಿಗಳು, ಭಕ್ತರು ಮತ್ತು ಅಮ್ಮನವರ ಅನುಯಾಯಿಗಳು ತಕ್ಷಣ ಮಧ್ಯಪ್ರವೇಶಿಸಿ ಅನ್ಯಾಯವನ್ನು ತಡೆಹಿಡಿಯಬೇಕು ಎಂದು ಅವರು ಆಗ್ರಹಿಸಿದರು.
1980ರಲ್ಲಿ ತಮ್ಮ ತಂದೆಯಾದ ನರಸಿಂಹರಾವ್ ಅವರು ಮಾತಾಜಿಯವರ ಆಜ್ಞೆಯಂತೆ ಆಗಿನ ನಲ್ಗೊಂಡಾ ಪ್ರದೇಶದಲ್ಲಿ ಸುಮಾರು 15 ಎಕರೆ ಜಮೀನಿನಲ್ಲಿ ಶ್ರೀ ಬಾಲಯೋಗಿನಿ ಮಾಣಿಕೇಶ್ವರಿ ಮಾತಾ ಆಶ್ರಮ, ಕಾಲೋನಿ ಹಾಗೂ ಈಶ್ವರ ಆಂಜನೇಯ ದೇವಸ್ಥಾನಗಳ ಸಂಘವನ್ನು ಸ್ಥಾಪಿಸಿದರು. ಅಮ್ಮನವರ ಆಶಯದಂತೆ ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳು ನಡೆಯುವಂತೆ ವ್ಯವಸ್ಥೆ ಮಾಡಲಾಗಿತ್ತು ಎಂದು ವಿವರಿಸಿದರು.
1990ರಲ್ಲಿ ತಂದೆಯವರ ಆಕಸ್ಮಿಕ ನಿಧನದ ಬಳಿಕ, ಶಿವಯ್ಯಸ್ವಾಮಿ ಮತ್ತು ಜಗಜೀವನರೆಡ್ಡಿ ಅವರು ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಗಂಗಾಧರ ಎಂಬುವವರೊಂದಿಗೆ ಕೈಜೋಡಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಶ್ರಮದ ಹಕ್ಕುದಾರರು ನಾವೇ ಎಂದು ಹೇಳಿಕೊಂಡು ಆನಂದಾಶ್ರಮವನ್ನು ತಮ್ಮ ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಆಶ್ರಮದ ಭಕ್ತರು ಹಾಗೂ ಕುಟುಂಬ ಸದಸ್ಯರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ವಿವಿಧ ಕೇಸುಗಳನ್ನು ದಾಖಲಿಸಿ, ಸುಮಾರು 200ಕ್ಕೂ ಹೆಚ್ಚು ಜನರನ್ನು ಕರೆದುಕೊಂಡು ಆಶ್ರಮದ ಮೇಲೆ ದಾಳಿ ನಡೆಸಿ, ಆಭರಣ, ನಗದು, ದಾಖಲೆಗಳು ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ವಯಂಸೇವಕರ ಎಲೆಕ್ಟ್ರಾನಿಕ್ ಉಪಕರಣಗಳನ್ನು ದೋಚಿಕೊಂಡು ಹೋಗಿದ್ದಾರೆ ಎಂದು ಹೇಳಿದರು.

ಈಗಲೂ ಸರಕಾರದ ನಿಯಮಾನುಸಾರ ಪ್ರತಿವರ್ಷ ಆಶ್ರಮದ ಆದಾಯ-ಖರ್ಚು ಸೇರಿದಂತೆ ಎಲ್ಲಾ ಲೆಕ್ಕಪತ್ರಗಳನ್ನು ಪಾರದರ್ಶಕವಾಗಿ ನಿರ್ವಹಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಎಲ್ಲಾ ಆಶ್ರಮಗಳಿಗೆ ಮೂಲ ಯಾನಾಗುಂದಿ ಆಶ್ರಮವಾಗಿದ್ದು, ಅಲ್ಲಿನ ಮುಖ್ಯಸ್ಥರ ಅಣತಿಯಂತೆ ಜಗಜೀವನರೆಡ್ಡಿ ಅವರಿಂದ ತಮ್ಮ ಕುಟುಂಬದ ಮೇಲೆ ಹಲ್ಲೆ ಮತ್ತು ಕಿರುಕುಳ ಮುಂದುವರಿದಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಮತ್ತು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಆರೋಪಿಸಿದರು.
ಆನಂದಾಶ್ರಮದಲ್ಲಿ ಅಮ್ಮನವರ ತತ್ವಚಿಂತನೆ, ಸತ್ಸಂಗ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ತಮ್ಮ ತಂದೆಯವರು ಹಾಕಿಕೊಟ್ಟ ಧಾರ್ಮಿಕ ನೆಲೆಗಟ್ಟಿನ ದಾರಿಯಲ್ಲೇ ನಾವು ಸಾಗುತ್ತಿದ್ದೇವೆ ಎಂದು ಅವರು ತಿಳಿಸಿದರು.
ಕೂಡಲೇ ಆಶ್ರಮದ ಇತರೆ ಟ್ರಸ್ಟಿಗಳು, ಭಕ್ತರು ಹಾಗೂ ಅನುಯಾಯಿಗಳು ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕು. ಆಶ್ರಮದ ಧಾರ್ಮಿಕ ಚಟುವಟಿಕೆಗಳು ಅಡಚಣೆಯಿಲ್ಲದೆ ಮುಂದುವರಿಯುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮಾತಾ ಮಾಣಿಕೇಶ್ವರಿ ಅಮ್ಮನವರ ಅಹಿಂಸಾ ತತ್ವಪ್ರಚಾರ ಮತ್ತು ಧರ್ಮಪರಿಪಾಲನೆಗೆ ಅವಕಾಶ ನೀಡಿ, ಮಾತಾಜಿಯವರ ಹೆಸರನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಗಮನ ಹರಿಸಬೇಕೆಂದು ಈಶ್ವರಿ ಮಾತಾ ಅವರು ಮನವಿ ಮಾಡಿದ್ದಾರೆ.

ವರದಿ ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!