ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಕ್ಕಿರಾಂಪುರ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಶ್ರೀಮತಿ ಶುಭ ಕಲ್ಯಾಣ್ ಭೇಟಿ

ಕೊರಟಗೆರೆ ತಾಲೂಕಿನ ಅಕ್ಕಿರಾಂಪುರ ರಾಗಿ ಕೇಂದ್ರಕ್ಕೆ ಭೇಟಿ ನೀಡಿದ ತುಮಕೂರು ಜಿಲ್ಲಾಧಿಕಾರಿ ರೈತರಿಗೆ ಅನ್ಯಾಯ ಆಗುವುದನ್ನು ತಪ್ಪಿಸಲು ಮತ್ತು ತೂಕದಲ್ಲಿ ರೈತರಿಗೆ ಅನ್ಯಾಯ ಮಾಡಬೇಡಿ ಎಂದು ರಾಗಿ ಕೇಂದ್ರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅಕ್ಕಿ ರಾಂಪುರ ರಾಗಿ ಕೇಂದ್ರವನ್ನು 2025 ನೇ ವರ್ಷದಲ್ಲಿ ನಮ್ಮ ಶಾಸಕರಾದ ಡಾಕ್ಟರ್ ಜಿ. ಪರಮೇಶ್ವರ್ ಅವರ ಸಲಹೆ ಮೇರೆಗೆ ಪ್ರಾರಂಭಿಸಿ ಇಂದು ರೈತರಿಗೆ ಅನುಕೂಲವಾಗಿದೆ. ರಾಗಿ ಕೇಂದ್ರಕ್ಕೆ ಬರುವ ರೈತರಿಗೆ ಯಾವುದೇ ಸಮಸ್ಯೆಗಳಾಗದಂತೆ ತೂಕದಲ್ಲಿ ವ್ಯತ್ಯಾಸ ಮಾಡಬಾರದು ಮತ್ತು ಮೂಲಭೂತ ಸೌಕರ್ಯಗಳನ್ನು ನೀಡಬೇಕು. ರಾಗಿ ಕೇಂದ್ರದಲ್ಲಿ ತೂಕದಲ್ಲಿ ವ್ಯತ್ಯಾಸ ಲೇಬರ್ ಗಳ ಸಮಸ್ಯೆ ಮತ್ತು ರೈತರಿಂದ ಹಣವನ್ನು ಪಡೆಯುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಇಂದು ತಾವು ಖುದ್ದಾಗಿ ಬಂದು ರೈತರ ಸಮ್ಮುಖದಲ್ಲಿ ತೂಕವನ್ನು ವೀಕ್ಷಿಸಿ ಅಧಿಕಾರಿಗಳಿಗೆ ತೂಕದಲ್ಲಿ ವ್ಯತ್ಯಾಸ ಮಾಡಬೇಡಿ ರೈತರಿಗೆ ಮೋಸ ಮಾಡಬೇಡಿ ಎಂದು ಹೇಳಿದರು. ನಿಗದಿಯದ ಪ್ರತಿ ಮೂಟೆಗೆ 50 ಕೆ.ಜಿ ಮಾತ್ರ ರಾಗಿಯನ್ನು ತೂಕ ಮಾಡಬೇಕು ಎಂದು ಹೇಳಿದರು. ಮಾರಾಟ ಕೇಂದ್ರದಲ್ಲಿ ಬಂದಿದ್ದ ರೈತರರಲ್ಲಿ ಡಿ.ಸಿ ಅವರು ನಿಮ್ಮಗಳಿಗೆ ಯಾವುದಾದರೂ ತೂಕದಲ್ಲಾಗಲಿ ಬೆಲೆಯಲಾಗಲಿ ವ್ಯತ್ಯಾಸವಾದರೆ ನಮಗೆ ತಿಳಿಸಿ ನಾವು ಸೂಕ್ತ ಕ್ರಮ ತೆಗೆದುಕೊಂಡು ರೈತರಿಗೆ ಅನುಕೂಲವಾಗುವಂತೆ ನಿಮ್ಮ ಜೊತೆ ನಾವು ಇರುತ್ತೇವೆ ಎಂದು ರೈತರಿಗೆ ಧೈರ್ಯ ಹೇಳಿದರು. ಮತ್ತು ಇನ್ನು ನೋಂದಣಿಯಾಗದ ರೈತರು ರಾಗಿ ಬೆಳೆಗಾರರು ನೋಂದಣಿ ಮಾಡಿಕೊಂಡು ಮಾರಾಟವಾದ ರಾಗಿಯ ಹಣವನ್ನು ತಮ್ಮ ಖಾತೆಗಳಿಗೆ ಜಮಾ ಮಾಡುವುದಾಗಿ ತಿಳಿಸಿ ಈ ರಾಗಿ ಕೇಂದ್ರವನ್ನು ಶಾಸಕರು ಅಕ್ಕಿರಾಂಪುರದಲ್ಲಿ ಪ್ರಾರಂಭಿಸಿದ್ದರಿಂದ ಈ ಭಾಗದ ಜನರಿಗೆ ರೈತರಿಗೆ ತುಂಬಾ ಅನುಕೂಲವಾಗಿದೆ ಎಂದು ಹೇಳಿದರು. ಜಿಲ್ಲಾಧಿಕಾರಿಯೊಂದಿಗೆ ಕೊರಟಗೆರೆ ತಹಶೀಲ್ದಾರ್ ಮಂಜುನಾಥ್ ಕೆ. ರವರು ಭಾಗಿಯಾಗಿ ರೈತರ ಸಮಸ್ಯೆಗಳನ್ನು ಆಲಿಸಿ ಯಾವುದೇ ತೊಂದರೆಯಾಗದಂತೆ ವಹಿವಾಟುವನ್ನು ಮಾಡುವುದಾಗಿ ಹೇಳಿದರು.

ವರದಿ ಪ್ರಸನ್ನ ಕುಮಾರ್ ಎಸ್. ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!