ಬಳ್ಳಾರಿ / ಕಂಪ್ಲಿ : ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾ ರಂಗವು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಂತೆ ಅತ್ಯಂತ ಪ್ರಮುಖವಾಗಿದೆ. ಸಮಾಜ ಮತ್ತು ಸರ್ಕಾರದ ನಡುವಿನ ಸೇತುವೆಯಾಗಿ, ಸಮಾಜದ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದು ಶಾಸಕ ಜೆ. ಎನ್. ಗಣೇಶ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಡಿಟೋರಿಯಂ ಸಭಾಂಗಣದಲ್ಲಿ ಡಾ. ಭೀಮರಾವ್ ಅಂಬೇಡ್ಕರ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ.) ಕಂಪ್ಲಿ, ಆರಾಧ್ಯ ಭೂಮಿ ಪಾಕ್ಷಿಕ ಪತ್ರಿಕೆ ಹಾಗೂ ಆರಾಧ್ಯ ಭೂಮಿ ಡಿಜಿಟಲ್ ನ್ಯೂಸ್ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ನೂತನವಾಗಿ ಆರಂಭವಾಗಿರುವ ಸೇವಾ ಟ್ರಸ್ಟ್ ಹಾಗೂ ಪತ್ರಿಕೆ ಸಮಾಜದ ಒಳಿತಿಗಾಗಿ ಬಡವರ, ದೀನ ದಲಿತರ ಧ್ವನಿಯಾಗಿ ಕೆಲಸ ನಿರ್ವಹಿಸಬೇಕು ಹಾಗೂ ಬುದ್ಧ ಬಸವ ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ಪಾಲಿಸಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಂ ಹೇಮಯ್ಯಸ್ವಾಮಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದಿವ್ಯ ಸಾನಿಧ್ಯ ವಹಿಸಿದ ಕಂಪ್ಲಿ ಕಲ್ಮಠ ಶ್ರೀಗಳಾದ ಪ್ರಭುಸ್ವಾಮಿ ಮಾತನಾಡಿ ಡಾ. ಭೀಮರಾವ್ ಅಂಬೇಡ್ಕರ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ.) ಕಂಪ್ಲಿ ಹಾಗೂ ಆರಾಧ್ಯ ಭೂಮಿ ಪತ್ರಿಕೆ ಡಿಜಿಟಲ್ ನ್ಯೂಸ್ ಬಿಡುಗಡೆ ಸಮಾರಂಭದ ಪ್ರಯುಕ್ತ ಬುದ್ಧ,ಬಸವ,ಅಂಬೇಡ್ಕರ ತತ್ವ ಸಿದ್ಧಾಂತಗಳಂತೆ ವಿವಿಧ ರಂಗಗಳಲ್ಲಿ ಸಾಧನೆಗೈದ ಪ್ರಥಮ ದರ್ಜೆ ಕಾಲೇಜಿನ 21 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್, ಪೆನ್ನು ಸಂವಿಧಾನದ ಪುಸ್ತಕ, ಹಾಗೂ ಸಸಿಗಳನ್ನು ನೀಡಿ ಸನ್ಮಾನಿಸಿ ಗೌರವಿಸುತ್ತಿರುವುದು ತುಂಬಾ ಸಂತೋಷಕರವದ ವಿಷಯ. ಶಿಕ್ಷಣಕ್ಕೆ ಮತ್ತು ಪರಿಸರಕ್ಕೆ ಹೆಚ್ಚಿನ ಆದ್ಯತೆ ನೀಡಿದಂತಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಸಿ ಆರ್ ಹನುಮಂತ, ಕೆ ಎಸ್ ಚಾಂದ್ ಭಾಷಾ, ಜಿ. ರಾಮಣ್ಣ, ಮುಖಂಡರಾದ ಮೂಕಯ್ಯ ಸ್ವಾಮಿ, ಮಾಜಿ ತಾ. ಪಂ. ಸದಸ್ಯರಾದ ಮಾನ್ವಿ ಶಿವರಾಜ್ ಜನೇಕಲ್, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಸಿ. ಯಂಕಪ್ಪ,ಎಂಸಿ ಮಾಯಪ್ಪ, ಭಾವೈಕ್ಯ ವೆಂಕಟೇಶ್, ಜನಾರ್ದನ ಗವಿಸಿದ್ದಪ್ಪ, ಶಿಕಾರಿ ರಾಮು ವಸಂತ್ ರಾಜ್ ಕಹಳೆ, ಅಕ್ಕಿ ಜಿಲಾನ್, ಮಂಗಳಮುಖಿ ರಾಜಮ್ಮ, ಕೆ.ಕರಿಯಪ್ಪ ನಾಯಕ, ಮಣ್ಣೂರು ಬಸವರಾಜ, ಆರಾಧ್ಯ ಭೂಮಿ ಪತ್ರಿಕೆ ಸಂಪಾದಕ ರವಿ ಮಣ್ಣೂರು, ಉಪ ಸಂಪಾದಕ ಕೆ. ಲಕ್ಷ್ಮಣ, ಸಹ ಸಂಪಾದಕ, ರಾಜಶೇಖರ್ ಬೆಂಗಳೂರು , ಉಷಾ, ಸರಸ್ವತಿ, ರೇಣುಕಾ ಕಾಳಿ ಉಪನ್ಯಾಸಕರಾದ ಸಿದ್ದಪ್ಪ, ರಮೇಶ್ ಸುಗ್ದೇನಹಳ್ಳಿ, ರೈತ ಮುಖಂಡ ರಮೇಶ್ ಕೊಟ್ಟೂರು, ಬಾಲೆ ಸಾಬ್, ದೇವಸಮುದ್ರ ಷಣ್ಮುಖಪ್ಪ, ಸಣಾಪುರ ಮರಿಯಪ್ಪ, ಕಾಳಿಂಗ ವರ್ಧನ, ಬಳೆ ಮಲ್ಲಿಕಾರ್ಜುನ, ನಬೀಸಾಬ್, ಶ್ರೀನಿವಾಸ, ಸಣ್ಣಪ್ಪ ತಳವಾರ್, ಹುಸೇನಪ್ಪ, ಸಿಕ್ಲಿ ಬಸವರಾಜ್, ಅರಣ್ಯ ಇಲಾಖೆ ಅಧಿಕಾರಿ ಪರಶುರಾಮ್, ಮೆಹಬೂಬ್ ಬಾಷಾ, ಹಾಗೂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ವಿದ್ಯಾರ್ಥಿಗಳು ಸಾರ್ವಜನಿಕರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















