ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಾದರ ಜನಾಂಗದ ಸಬಲೀಕರಣಕ್ಕಾಗಿ ಕೊರಟಗೆರೆ ತಾಲ್ಲೂಕು ಘಟಕದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆ

ಕೊರಟಗೆರೆ ತಾಲೂಕಿನಲ್ಲಿ ಮಾದರ ಜನಾಂಗದ ನೂತನ ಪದಾಧಿಕಾರಿಗಳ ನೇಮಕಾತಿಯಾಗಿರುವ ಸದಸ್ಯರ ಸಭೆಯನ್ನು ಜಿಲ್ಲಾಧ್ಯಕ್ಷರಾದ ವೈ ಹೆಚ್ ಹುಚ್ಚಯ್ಯನವರು ರವಾನಿಸಿರುವ ಪ್ರತಿಯೊಂದಿಗೆ ಕೊರಟಗೆರೆಯ ಪ್ರವಾಸಿ ಮಂದಿರದಲ್ಲಿ ಇಂದು ಸಭೆ ಮಾಡಲಾಯಿತು. ಕರ್ನಾಟಕ ರಾಜ್ಯದ ಮಾದರ ಜನಾಂಗದವರು ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಿಂದುಳಿದಿರುವ ಕಾರಣ ಈ ಕ್ಷೇತ್ರಗಳಲ್ಲಿ ಅವರು ಮುಂದುವರೆದು ಸಮಾಜದ ಮುಖ್ಯ ವಾಹಿನಿಗೆ ಬರಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಉದ್ದೇಶ ಹೊಂದಿರುತ್ತದೆ. ಕರ್ನಾಟಕ ಮಾದರ ಮಹಾಸಭಾ ನಿಯಮಾವಳಿಗಳ ಅನುಸೂಚಿತ ಕೊರಟಗೆರೆ ತಾಲ್ಲೂಕು ಘಟಕಕ್ಕೆ ನೇಮಿತವಾಗಿರುವ ಸಂಘಟನೆಯ ಸಿದ್ದೇಶ್ ಟಿಸಿ ರವರು ಮಾತನಾಡಿ ಮಾದರ ಮಹಾಸಭಾ ಪದಾಧಿಕಾರಿಗಳಾಗಿ ನೇಮಕವಾಗಿರುವವರು ಮಹಾಸಭಾ ನೀತಿ ನಿಯಮಗಳಿಗೆ ಅನುಸಾರವಾಗಿ ಸಮುದಾಯದ ಸಂಘಟನೆ ಮತ್ತು ಸದಸ್ಯತ್ವದ ನೋಂದಣಿ ಕಾರ್ಯವನ್ನು ಮಾಡಿ ಜನರನ್ನು ಒಗ್ಗೂಡಿಸಿಕೊಂಡು ಪ್ರಾಮಾಣಿಕವಾಗಿ ತಮ್ಮ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕೆಂದು ಸಭೆಯಲ್ಲಿ ಆಯ್ಕೆಯಾಗಿರುವ ಎಲ್ಲರಿಗೂ ತಿಳಿಸಿದರು. ರಾಜ್ಯಾದ್ಯಂತ ಒಗ್ಗಟ್ಟಿನಿಂದ ಸಂಘಟನೆಯನ್ನು ಬಲಪಡಿಸಲು ರಾಜ್ಯಾಧ್ಯಕ್ಷರಾದ ಕೆ.ಎಚ್ ಮುನಿಯಪ್ಪನವರು ಎಲ್ಲಾ ಜಿಲ್ಲಾಮಟ್ಟದ, ತಾಲೂಕು ಮಟ್ಟದ, ಹೋಬಳಿ ಮಟ್ಟದ ಸಂಘಟನೆಗಳನ್ನು ಬಲಪಡಿಸುವುದರಿಂದ ನಮ್ಮ ಕರ್ನಾಟಕ ಮಾದರ ಮಹಾಸಭಾದ ಮೂಲ ಉದ್ದೇಶ ಹಾಗೂ ಗ್ರಾಮೀಣ ಪ್ರದೇಶದ ನಮ್ಮ ಜನಾಂಗವನ್ನು ಗುರುತಿಸಿ ಅವರ ಶಕ್ತಿಯಲ್ಲಿ ನಾವು ಭಾಗಿಯಾಗಿ ಅವರನ್ನು ಸದೃಢರನ್ನಾಗಿ ಮಾಡಬೇಕು ಎಂದು ತಿಳಿಸಿದರು.
ಆಸಕ್ತಿ ವಹಿಸಿ ಮುಂದಿನ ಪೀಳಿಗೆಯ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಮಾದಿಗ ಸಮುದಾಯಕ್ಕೆ ಸಂಘಟನಾ ಶಕ್ತಿ ತುಂಬುವ ಉದ್ದೇಶದಿಂದ ಕರ್ನಾಟಕ ಮಾದರ ಮಹಾಸಭಾವನ್ನು ಪ್ರಾರಂಭಿಸಲು ಯೋಜಿಸಿ ಸಮುದಾಯದ ಎಲ್ಲಾ ಮುಖಂಡರುಗಳ ವಿಶ್ವಾಸದೊಂದಿಗೆ ಮಹಾಸಭಾವನ್ನು ನೊಂದಣಿ ಮಾಡಿಸಬೇಕು. ಮಾದಿಗ ಜನಾಂಗದವರು ಆರ್ಥಿಕವಾಗಿ ಸಮಾಜದಲ್ಲಿ , ರಾಜಕೀಯ ಕ್ಷೇತ್ರ ಮತ್ತು ವಿದ್ಯಾ ಕ್ಷೇತ್ರಗಳಲ್ಲಿ ಹಿಂದುಳಿದವರಾಗಿರುವ ಕಾರಣ. ಈ ಕ್ಷೇತ್ರಗಳಲ್ಲಿ ಅವರು ಮುಂದುವರೆದು ಅಭಿವೃದ್ಧಿ ಹೊಂದಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದು. ಸಮಾಜದ ಒಳಿತಿಗಾಗಿ ಕಾಲಕಾಲಕ್ಕೆ ಸರ್ವ ಸದಸ್ಯರ ಸಭೆಯಲ್ಲಿ ಕಾಲೋಚಿತವಾದ ಕಾರ್ಯಕ್ರಮಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಬೇಕು ಎಂದು ಜಿಲ್ಲಾ ಘಟಕದ ದಾಡಿ ವೆಂಕಟೇಶ್ ರವರು ತಿಳಿಸಿದರು.
ಸಭೆಯಲ್ಲಿಅಧ್ಯಕ್ಷರಾದ ಸಿದ್ದೇಶ್.ಟಿ ಸಿ, ಮಂಜುನಾಥ್ ಉಪಾಧ್ಯಕ್ಷರು, ವೀರಕ್ಯಾತರಾಯ ಖಜಾಂಚಿ ಸಿದ್ದೇಶ್, ಆರ್ ಲಕ್ಷ್ಮಿ ನರಸಯ್ಯ ಕಾರ್ಯದರ್ಶಿಗಳು,ದಾಡಿ ವೆಂಕಟೇಶ್, ಶಿವರಾಮ್.ಡಿಎಲ್,ಮಾರುತಿ ಎನ್ ಸಿ,ಶಿವ ದರ್ಶನ್, ಗೋಪಾಲ್ ಕೃಷ್ಣ ಹನುಮಂತರಾಯಪ್ಪ ಡಿ .ಹಾಗೂ ಸಂಘಟನೆಯ ಎಲ್ಲಾ ಸದಸ್ಯರು ಭಾಗಿಯಾಗಿದ್ದರು.

ವರದಿ. ಪ್ರಸನ್ನ ಕುಮಾರ್ ಎಸ್. ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!