ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ ಬೆಳವಣಿಗೆಗೆ ಭೀಮರೆಡ್ಡಿ ಗೌಡ ಕುರಾಳ ಸುಗೂರ ಎನ್ ಅಭಿಮತ.

ಚಿತ್ತಾಪುರ : ಸುಗೂರ ಎನ್ ಗ್ರಾಮದಲ್ಲಿ ನಾಲವಾರ ವಲಯ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶ್ರೀ ಹನುಮಾನ್ ದೇವಸ್ಥಾನದ ಆವರಣದಲ್ಲಿ ರಾಷ್ಟ್ರಕವಿ ದ.ರಾ.ಬೇಂದ್ರೆಯವರ ಸಾಹಿತ್ಯ ಸಿರಿ ಮತ್ತು ನಾಲವಾರ ವಲಯ ಘಟಕದ ತೆರವಾದ ಸ್ಥಾನಕ್ಕೆ ಪದಾಧಿಕಾರಿಗಳ ಆಯ್ಕೆ ಮಾಡುವುದರ ಮೂಲಕ ಕಾರ್ಯಕ್ರಮ ಉತ್ತಮವಾಗಿ ಜರುಗಿತು.
ಮೊಟ್ಟಮೊದಲ ಬಾರಿಗೆ ತಾಯಿ ಕನ್ನಡಾಂಭೆ ಭುವನೇಶ್ವರಿ ಭಾವಚಿತ್ರಕ್ಕೆ ಮತ್ತು ರಾಷ್ಟ್ರಕವಿ ದ.ರಾ.ಬೇಂದ್ರೆ. ಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹೂ ಮಾಲೆ ಹಾಕಿ ಪುಷ್ಪ ನಮನ ಸಲ್ಲಿಸಿದರು.
ಈ ಕಾರ್ಯಕ್ರಮಕ್ಕೆ ಶರಣಗೌಡ ಬೆನಕನಹಳ್ಳಿ ಸುಗೂರ ಎನ್ ಅವರು ಚಾಲನೆ ನೀಡಿದರು.
ಇದೇ ಸಂಧರ್ಭದಲ್ಲಿ ಪ್ರಾಸ್ತಾವಿಕ ನುಡಿ ನಾಲವಾರ ವಲಯ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅಂಜುನಾಥ ಎಸ್ ನಾಯ್ಕಲ್ ಅವರು ಮಕ್ಕಳಿಗೆ ಸಾಹಿತ್ಯ ಒಲವು ನೀಡಬೇಕು ಎಂದು ಪೋಷಕರಿಗೆ ಕಿವಿ ಮಾತು ತಿಳಿಸಿದರು.
ವೇದಿಕೆ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಭೀಮರೆಡ್ಡಿ ಗೌಡ ಕುರಾಳ ಸುಗೂರ ಎನ್ ಅವರು
ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಿ ಬೆಳೆಸುವ ಉದ್ದೇಶದಿಂದ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ತರ ಸುದೀರ್ಘ ಇತಿಹಾಸವನ್ನು ಹೊಂದಿದೆ.

ಇದರ ಪ್ರಮುಖ ಮೈಲಿಗಲ್ಲುಗಳು ಇಲ್ಲಿವೆ:
ಸ್ಥಾಪನೆ (1915):
ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶ್ರಯದಲ್ಲಿ ಮತ್ತು ಸರ್ ಎಂ. ವಿಶ್ವೇಶ್ವರಯ್ಯನವರ ಮಾರ್ಗದರ್ಶನದಲ್ಲಿ 1915ರ ಮೇ 3ರಂದು ಬೆಂಗಳೂರಿನಲ್ಲಿ ಸ್ಥಾಪನೆಯಾಯಿತು.
ಇದರ ಮೊದಲ ಹೆಸರು ‘ಕರ್ನಾಟಕ ಸಾಹಿತ್ಯ ಪರಿಷತ್ತು’ ಎಂದಿತ್ತು.
ಕನ್ನಡ ಸಾಹಿತ್ಯ ಪರಿಷತ್ತು (ಕ. ಸಾ. ಪ) ಒಂದು ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಇದರ ಸಂಘಟನಾ ಚತುರತೆ ಕೇವಲ ಸಾಹಿತ್ಯಕ್ಕೆ ಸೀಮಿತವಾಗದೆ, ನಾಡು-ನುಡಿ, ಸಂಸ್ಕೃತಿ ಮತ್ತು ಕನ್ನಡಿಗರನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು. ವೇದಿಕೆಯ ಮುಖ್ಯ ಅಥಿತಿಗಳಾದ ಸಂಗಾರೆಡ್ಡಿಗೌಡ ಪೋ.ಪಾಟೀಲ. ಮಹೇಶ್ ಪಾಟೀಲ ಸುಗೂರ ಎನ್. ಸಂಗಾರೆಡ್ಡಿ ಗೌಡ ಮಾಲಿ ಪಾಟೀಲ. ವಿಶ್ವನಾಥ ರೆಡ್ಡಿಗೌಡ ಪಾಟೀಲ ಸುಗೂರ ಎನ್. ಶರಣಗೌಡ ವಕೀಲರು. ಮಹಿಪಾಲ್ ರೆಡ್ಡಿ ಗೌಡ ಕರಣಗಿ. ಮಹಾದೇವ ರೆಡ್ಡಿ ಗೌಡ ತುಮಕೂರು. ಬಸ್ಸುಗೌಡ ಸರಪಂಚ್. ಮಲ್ಲಿನಾಥ ಚಿನ್ನಾಪೋಟೊ ಸ್ಟುಡಿಯೋ. ಬಸ್ಸುಗೌಡ ಮಾಲಿ ಪಾಟೀಲ. ಕರಬಸಪ್ಪ ಸಾಹು ದಂಡಗಿ. ಬಸವರಾಜ ಹಡಪದ ಸುಗೂರ ಎನ್.ಶರಣಪ್ಪ ಕುಂಬಾರ. ರಾಜಕುಮಾರ ಕುಂಬಾರ. ಮಲ್ಲಿಕಾರ್ಜುನ ನಾನಾಕಳ್ಳಿ. ಬಸವರಾಜ ಕುಂಬಾರ ಶಿಕ್ಷಕರು ತರಕಸಪೇಠ. ಶಿವುಗೌಡ ಮಾರಡಗಿ. ಶರಣು ಹೊಳಮಾರಡಗಿ. ಶ್ರೀಮಂತ ಭಾವಿ. ಸಿದ್ದಪ್ಪ ಪೂಜಾರಿ. ಹಣಮಂತ ನಾಯ್ಕೊಡಿ. ಶೇಖಪ್ಪ ವಾಲಿಕಾರ.ಈರಪ್ಪ ಗೋಗಿ. ಅನಿಲ ಚವ್ಹಾಣ. ಮಲ್ಲಿಕಾರ್ಜುನ ತಳವಾರ ಪ.ಪಂ ಪ್ರತಿನಿಧಿ. ಹಾಗೂ ರಾಷ್ಟ್ರಕವಿ ದ.ರಾ.ಬೇಂದ್ರೆ ಯವರ ಸಾಹಿತ್ಯ ಸಿರಿ ಕುರಿತು ವಿಶೇಷ ಉಪನ್ಯಾಸ ಅರುಣ ಕುಮಾರ ಬಿ ಸುಣಗಾರ ನಾಲವಾರ ಅವರು ವರಕವಿ ದ.ರಾ. ಬೇಂದ್ರೆ (ಅಂಬಿಕಾತನಯದತ್ತ) ಅವರು ಕನ್ನಡ ನವೋದಯ ಸಾಹಿತ್ಯದ ಅಗ್ರಗಣ್ಯ ಕವಿಗಳಲ್ಲಿ ಒಬ್ಬರು ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು. ‘ನಾಕುತಂತಿ’ ಕವನ ಸಂಕಲನದ ಮೂಲಕ ಕನ್ನಡ ಕಾವ್ಯ ಲೋಕಕ್ಕೆ ಆಧ್ಯಾತ್ಮಿಕ ಮತ್ತು ಜಾನಪದ ಸೊಗಡಿನ ಅಭೂತಪೂರ್ವ ಕೊಡುಗೆ ನೀಡಿದ ಇವರ ಸಾಹಿತ್ಯ ಸಿರಿ ಅಪಾರವಾದುದು ದ.ರಾ ಬೇಂದ್ರೆಯವರ ಸಾಹಿತ್ಯ ಸಿರಿ ಕುರಿತು ವರಕವಿ ದ.ರಾ. ಬೇಂದ್ರೆ (ಅಂಬಿಕಾತನಯದತ್ತ) ಅವರು ಕನ್ನಡ ನವೋದಯ ಸಾಹಿತ್ಯದ ಅಗ್ರಗಣ್ಯ ಕವಿಗಳಲ್ಲಿ ಒಬ್ಬರು ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು. ‘ನಾಕುತಂತಿ’ ಕವನ ಸಂಕಲನದ ಮೂಲಕ ಕನ್ನಡ ಕಾವ್ಯ ಲೋಕಕ್ಕೆ ಆಧ್ಯಾತ್ಮಿಕ ಮತ್ತು ಜಾನಪದ ಸೊಗಡಿನ ಅಭೂತಪೂರ್ವ ಕೊಡುಗೆ ನೀಡಿದ ಇವರ ಸಾಹಿತ್ಯ ಸಿರಿ ಅಪಾರವಾದುದು ನಾಕುತಂತಿ (ಜ್ಞಾನಪೀಠ)
ಗರಿ (೧೯೩೨)
ಅರಳು ಮರಳು
ನಾದಲೀಲೆ ಸಖೀಗೀತ
ಅಂಬಿಕಾತನಯದತ್ತ: ಸಾಹಿತ್ಯ ವ್ಯಕ್ತಿತ್ವ
ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ತಮ್ಮ ಕುಲದೇವತೆಯ ಹೆಸರಾದ ‘ಅಂಬಿಕಾತನಯದತ್ತ’ ಎಂಬ ಕಾವ್ಯನಾಮದಲ್ಲಿ ಸಾಹಿತ್ಯ ಕೃಷಿ ಮಾಡಿದರು. ಇವರ ಕಾವ್ಯವು ಜಾನಪದ ಶೈಲಿಯ ಲಯ ಮತ್ತು ವೇದ-ಉಪನಿಷತ್ತುಗಳ ಗಹನವಾದ ತತ್ವಗಳ ಸಂಗಮವಾಗಿದೆ.

ಪ್ರಮುಖ ಕವನ ಸಂಕಲನಗಳು

ಬೇಂದ್ರೆಯವರ ಸಾಹಿತ್ಯ ಭಂಡಾರದಲ್ಲಿ ಸುಮಾರು ೨೬ಕ್ಕೂ ಹೆಚ್ಚು ಕವನ ಸಂಕಲನಗಳಿವೆ. ಅವುಗಳಲ್ಲಿ ಪ್ರಮುಖವಾದವು
ಆರಂಭಿಕ ಕೃತಿಗಳು: ‘ಗರಿ’, ‘ಕೃಷ್ಣಾಕುಮಾರಿ’, ‘ಮೂರ್ತಿ ಮತ್ತು ಕಾಮಕಸ್ತೂರಿ’ – ಇವುಗಳಲ್ಲಿ ನವೋದಯದ ಪ್ರಣಯ ಮತ್ತು ದೇಶಭಕ್ತಿಯ ಛಾಯೆಯಿದೆ.
ಪ್ರೌಢ ಕಾವ್ಯಗಳು: ‘ನಾದಲೀಲೆ’, ‘ಸಖೀಗೀತ’, ‘ಉಯ್ಯಾಲೆ’, ‘ಗಂಗಾವತರಣ’ – ಇಲ್ಲಿ ಬದುಕಿನ ನೋವು ಮತ್ತು ತಾತ್ವಿಕ ಚಿಂತನೆಗಳು ಮುಂಚೂಣಿಯಲ್ಲಿವೆ.

ದಾರ್ಶನಿಕ ಕಾವ್ಯ: ‘ನಾಕುತಂತಿ’ – ಇದು ವಿಶ್ವದ ಸೃಷ್ಟಿ ರಹಸ್ಯವನ್ನು ‘ನಾನು, ನೀನು, ಆನು, ತಾನು’ ಎಂಬ ನಾಲ್ಕು ತತ್ವಗಳ ಮೂಲಕ ವಿವರಿಸುವ ಮೇರುಕೃತಿ.
ಸಾಹಿತ್ಯದ ವೈಶಿಷ್ಟ್ಯ ಮತ್ತು ಮನ್ನಣೆ
ಕಾವ್ಯ ಶೈಲಿ (ಗಾರುಡಿಗ)
ಬೇಂದ್ರೆಯವರನ್ನು “ಕಾವ್ಯ ಗಾರುಡಿಗ” ಎಂದು ಕರೆಯಲಾಗುತ್ತದೆ. ಅವರ ಕವಿತೆಗಳಲ್ಲಿ ‘ನಾದ’ ಪ್ರಧಾನವಾಗಿದೆ. “ಕುಣಿಯೋಣು ಬಾರಾ ಕುಣಿಯೋಣು ಬಾ”, “ಇಳಿದು ಬಾ ತಾಯಿ ಇಳಿದು ಬಾ” ಮುಂತಾದ ಕವಿತೆಗಳು ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ನೆಲೆಸಿವೆ. ಅವರ ಸಾಹಿತ್ಯದಲ್ಲಿ ಉತ್ತರ ಕರ್ನಾಟಕದ ಆಡುಭಾಷೆಯ ಸೊಗಡು ಎದ್ದು ಕಾಣುತ್ತದೆ.

ಪ್ರಶಸ್ತಿ ಮತ್ತು ಗೌರವಗಳು :
ಜ್ಞಾನಪೀಠ ಪ್ರಶಸ್ತಿ (೧೯೭೩): ‘ನಾಕುತಂತಿ’ ಕವನ ಸಂಕಲನಕ್ಕಾಗಿ.
ಪದ್ಮಶ್ರೀ (೧೯೬೮): ಭಾರತ ಸರ್ಕಾರದಿಂದ ಗೌರವ.
ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೫೮): ‘ಅರಳು ಮರಳು’ ಕೃತಿಗೆ.
ವರಕವಿ: ಕರ್ನಾಟಕದ ಜನತೆ ಪ್ರೀತಿಯಿಂದ ನೀಡಿದ ಬಿರುದು.
ನಿಮಗಿದು ತಿಳಿದಿರಲಿ: ಬೇಂದ್ರೆಯವರು ಕೇವಲ ಕವಿ ಮಾತ್ರವಲ್ಲ, ಅವರು ನಾಟಕಕಾರರು ಮತ್ತು ಶ್ರೇಷ್ಠ ವಿಮರ್ಶಕರೂ ಆಗಿದ್ದರು. “ಸಾಯೋ ಆಟ”, “ದೇವ್ವದ ಮನೆ” ಮುಂತಾದ ಏಕಾಂಕ ನಾಟಕಗಳನ್ನೂ ರಚಿಸಿದ್ದಾರೆ ಎಂದು ಸುಣಗಾರ ಅವರು ಉಪನ್ಯಾಸ ಮಾಡುವುದರ ಮೂಲಕ ಕನ್ನಡಾಂಭಿಮಾನಿಗಳಿಗೆ ತಿಳಿಸಿದರು. ಶಿವಲೀಲಾ ತುನ್ನೂರು ಹಾಗೂ ಸಿದ್ದಮ್ಮ ಕುಂಬಾರ ಪ್ರಾರ್ಥನೆ ಗೀತೆ ಹಾಡಿದರು.
ಇದೇ ಸಂಧರ್ಭದಲ್ಲಿ ನಾಲವಾರ ವಲಯ ಘಟಕದ ಕಸಾಪ ತೆರವಾದ ಸ್ಥಾನಕ್ಕೆ ಸಿದ್ದು ಗೌಡ ಕುರಾಳ ಅವರು ಗೌರವ ಕಾರ್ಯದರ್ಶಿಯಾಗಿ ಮತ್ತು ನಾಗೇಶ ಶಿಕ್ಷಕರು ವಿಶ್ವಕರ್ಮ ತರಕಸಪೇಠ ಅವರಿಗೆ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಸ್ವಾಗತ ಭಾಷಣ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ನಾಲವಾರ ವಲಯ ಘಟಕ ಸಂಘಟನಾ ಕಾರ್ಯದರ್ಶಿ ಮಾಡಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!