ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಾಹ್ಯ ಪೂಜೆಗಿಂತ ಮಾನಸಿಕ ಪೂಜೆ ಶ್ರೇಷ್ಠ – ಅಮರೇಶ್ ಜಿ ಕೆ

ವಿಜಯನಗರ : ಕೊಟ್ಟೂರು ತಾಲೂಕು ಕಛೇರಿಯಲ್ಲಿ ಇಂದು ಶ್ರೀ ಯೋಗಿನಾರಾಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ತಹಶೀಲ್ದಾರಾದ ಅಮರೇಶ್ ಜಿ ಕೆ ಇವರು ಕೈವಾರ ತಾತಯ್ಯನವರ ಭಾವಚಿತ್ರಕ್ಕೆ ಪುಪ್ಪಾರ್ಚನೆಯನ್ನು ಮಾಡುತ್ತಾ, ಚಿಕ್ಕಬಳ್ಳಾಪುರ ತಾಲೂಕಿನ ಕೈವಾರದಲ್ಲಿ ಜನಿಸಿದ ನಾರಾಯಣಪ್ಪನವರು ಶ್ರೀಮನ್ ನಾರಾಯಣನ ಕುರಿತು ತಪಸ್ಸನ್ನು ಮಾಡಿ ಸಾಧಕರಾದ್ದರಿಂದ ಶ್ರೀ ಯೋಗಿ ನಾರಾಯಣ ಯತೀಂದ್ರರಾಗಿ ಪ್ರಸಿದ್ದಿಯನ್ನು ಪಡೆದಿದ್ದಾರೆ. “ಗುರುಸ್ಮರಣೆ ಮಾಡುತಿದ್ದರೆ ನಮ್ಮೊಳಗೆ ಚಿಂತನೆ ಆರಂಭವಾಗುತ್ತದೆ. ಮನುಷ್ಯನ ದೊಡ್ಡ ಶತ್ರು ಅಹಂಕಾರ, ಈ ಅಹಂಕಾರ ಕಳೆದುಕೊಂಡರೆ ಸಾಧಕನಾಗುತ್ತಾನೆ. ಜನರಿಗೆ ಕಾಣುವಂತೆ ತೋರಿಕೆಯ ಬಾಹ್ಯ ಪೂಜೆಗಿಂತ ಮಾನಸಿಕ ಪೂಜೆ ಶ್ರೇಷ್ಠ ” ಎನ್ನುವ ಸಂದೇಶವನ್ನು ಕೈವಾರ ತಾತಯ್ಯನವರು ತಮ್ಮ ಭೋದನೆಯ ಮೂಲಕ ತಿಳಿಸಿದ್ದಾರೆ. ಜಗತ್ತಿನಲ್ಲಿ ಮುಂದೆ ಜರುಗಬಹುದಾದ ಘಟನೆಗಳ ಕುರಿತು ಮುನ್ನೆಚ್ಚರಿಕೆ ಸಂದೇಶವನ್ನು ನೀಡಿದ “ಕಾಲಜ್ಞಾನ” ಕೃತಿಯನ್ನು ರಚಿಸಿದ್ದು ಈ ಕೃತಿ ಇಂದಿಗೂ ಪ್ರಸಿದ್ದಿಯನ್ನು ಹೊಂದಿದೆ. ಇಂತಹ ಮಹಾನ್ ಚೇತನರು ನೀಡಿದ ಸಂದೇಶವನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಂಡರೆ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಬಲಿಜ ಸಮಾಜದ ಅಧ್ಯಕ್ಷರಾದ ಹರೀಶ್, ಮುಖಂಡರಾದ ಪಿ ಬಾಬಯ್ಯ, ನಾರಾಯಣಪ್ಪ, ಪಿ ಕೊಟ್ರೇಶ್, ಗೋಪಾಲ, ಮುರಳಿ, ಪ್ರಶಾಂತ, ಪ್ರವೀಣ ಕುಮಾರ್, ಕಿರಣ್ ಕುಮಾರ್, ಶಿರಸ್ತೇದಾರರಾದ ಅನ್ನದಾನೇಶ ಬಿ ಪತ್ತಾರ್, ಹೆಚ್ ಎಂ ಕೊಟ್ರಮ್ಮ, ಚಂದ್ರನಾಯ್ಕ, ಕಂದಾಯ ನಿರೀಕ್ಷಕ ಡಿ ಶಿವಕುಮಾರ್, ಸಿಬ್ಬಂದಿ ಮಂಜುನಾಥ, ದೇವರಾಜ ಅರಸು, ಮಂಜಮ್ಮ, ಗೌರಮ್ಮ, ಗ್ರಾಮ ಆಡಳಿತ ಅಧಿಕಾರಿ ರಮೇಶ್, ಜ್ಯೋತಿಬಾಯಿ ಮುಂತಾದವರಿದ್ದರು. ಸಿ ಮ ಗುರುಬಸವರಾಜ ಸ್ವಾಗತಿಸಿ ನಿರ್ವಹಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!