ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದ ಪೋಲಿಸ್ ಅಧಿಕಾರಿಗಳನ್ನು ತಕ್ಷಣವೇ ಅಮಾನತ್ತು ಮಾಡಿ,: ಗುಡಿಗಿದ ಗುಡಿಮನಿ ಕರಿಯಪ್ಪ ಗುಡಿಮನಿ

ಬಳ್ಳಾರಿ / ಕಂಪ್ಲಿ : ತಾಲೂಕಿನ ನಂ.10 ಮುದ್ದಾಪುರ ಗ್ರಾಮದ ದಲಿತರ ವಿರುದ್ಧ ಕೌಂಟರ್ ಕೇಸ್ ನಲ್ಲಿ ಶಾಮಿಲಾದ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡುವಂತೆ ಆಕ್ರೋಶಗೊಂಡು ದಲಿತರ ಮೇಲೆ ದೌರ್ಜನ್ಯ ಕೆಎಂಆರ್ ವಿ, ಕರ್ನಾಟಕ ಜನಶಕ್ತಿ, ದಲಿತ ಸಂಘಟನೆಗಳಿಂದ ತೀವ್ರ ಪ್ರತಿಭಟನೆ ನಡೆಸಿದರು.

ದಲಿತ ಮತ್ತು ಭೂಮಿ ಹಕ್ಕು ಹೋರಾಟಗಾರ ಕರಿಯಪ್ಪ ಗುಡಿಮನಿ ಮಾತನಾಡಿ ಕೆಲವು ದಿನಗಳ ಹಿಂದೆ ನಂ 10. ಮುದ್ದಾಪುರ ಗ್ರಾಮದ ದಲಿತ ಸಮುದಾಯದ 8 ಯುವಕರ ವಿರುದ್ಧ ಕೌಂಟರ್ ಕೇಸ್ ಹಾಕುವಂತೆ ಒತ್ತಾಯಿಸಿ ದಲಿತರ ವಿರುದ್ಧ ಸಂವಿಧಾನದಲ್ಲಿ ಅನ್ಯಾಯ ಮಾಡಿದ ದ್ರೋಹಿ ಪೊಲೀಸ್ ಇಲಾಖೆಯ ಮೂವರು ದುಷ್ಟ ಅಧಿಕಾರಿಗಳನ್ನು ಈ ಕೂಡಲೇ ಅಮಾನತ್ತು ಮಾಡಬೇಕೆಂದು ಸಮುದಾಯದ ಜೊತೆಗೂಡಿ ಈ ಧರಣಿಯನ್ನ ನಡೆಸಲಾಯಿತು. ಈ ಧರಣಿ ನಂ. 10 ಮುದ್ದಾಪುರದಿಂದ ಕಂಪ್ಲಿ ಪೊಲೀಸ್ ಠಾಣೆವರೆಗೂ ನಡೆಸಿ ಮುಂದೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳದಿದ್ದರೆ ಕಂಪ್ಲಿಯಿಂದ ಬಳ್ಳಾರಿ ಎಸ್ ಪಿ ಕಚೇರಿವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು, ಎಲ್ಲಾ ದಲಿತ ಸಮುದಾಯದ ಸಂಘಟನೆಗಳು ಸೇರಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು.

ಪೊಲೀಸ್ ಅಧಿಕಾರ ಸ್ವೀಕಾರ ಮಾಡುವಾಗ ಸಂವಿಧಾನದ ಅಡಿಯಲ್ಲಿ ಸಂವಿಧಾನವನ್ನು ಕಾಪಾಡುತ್ತೇವೆ ಜನರ ಪರ ಇರುತ್ತೇವೆ ಮೇಲ್ವರ್ಗ ಕೆಲವರಿಗೆ ಎನ್ನದೆ ಸರ್ವರಿಗೆ ಸಮಾನವಾಗಿ ಕೆಲಸವನ್ನು ಮಾಡುತ್ತೇವೆ ಎಂದು ಪ್ರಮಾಣ ಸ್ವೀಕಾರ ಮಾಡಿದ ಪೋಲಿಸ್ ಅಧಿಕಾರಿಗಳೇ ದಲಿತ ಕುಟುಂಬಕ್ಕೆ ಅನ್ಯಾಯ ಮಾಡಿರುವುದು ಬಹಳ ಸೋಜಿಗವಾದ ಸಂಗತಿಯಾಗಿದೆ ಇಂಥ ಧಾರಣ ಕೃತ್ಯ ನಡೆದಂತ ಕಂಪ್ಲಿ ಪೊಲೀಸ್ ಠಾಣೆಗೆ ಕಪ್ಪು ಕಳಂಕ, ಇಂತಹ ಘಟನೆಗಳು ಇನ್ನುಮುಂದೆ ನಮ್ಮ ಕಂಪ್ಲಿ ತಾಲೂಕಿನಲ್ಲಿ ಇಡೀ ಕರ್ನಾಟಕದಲ್ಲಿ ಭಾರತ ದೇಶದಲ್ಲಿ ಯಾವುದೇ ಅಧಿಕಾರಿಗಳು ಇಂಥ ಧೋರಣೆ ಮಾಡಿದರೆ ಅದಕ್ಕೆ ಶಿಕ್ಷೆ ಆಗಲೇಬೇಕು ಎಂದು ಸಂಘಟನೆರವರು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಡಿ ವೈ ಎಸ್ ಪಿ ಪ್ರಸಾದ್‌ ಗೋಖಲೆ ಮಾತನಾಡಿ ಸಂವಿಧಾನದ ಅಡಿಯಲ್ಲಿ ದಲಿತ ಆಗಿರುವ ಅನ್ಯಾಯವನ್ನು ಕಾನೂನು ಮೂಲಕ ನ್ಯಾಯ ದೊರಕಿಸಿ ಕೊಡುಲಾಗುವುದು. ಪೊಲೀಸ್ ಅಧಿಕಾರಿಗಳು ಪ್ರತಿದಿನ 24*7 ಕೆಲಸ ಮಾಡಲು ಸಿದ್ದರಿದ್ದೇವೆ. ನಮ್ಮ ಮೇಲೆ ಭರವಸೆ ಇಡಿ ಇದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದು ತಪ್ಪಿತಸ್ಥರಿಗೆ ಕಾನೂನಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗೋಪಾಲ ಗುಡಿಮನಿ ಕರಿಯಪ್ಪ, ವಸಂತ್ ರಾಜ್ ಕಹಳೆ, ನೀಲಪ್ಪ, ಮೂರ್ತಿ, ಧನಂಜಯ ಹಾಗೂ ದಲಿತ ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!