ಸಿರುಗುಪ್ಪ:ಹಜರತ್ ಚತನ್ ಷಾ ವಲಿ ದರ್ಗಾ ಆಸ್ಥಾನದಲ್ಲಿ ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ವಾರ್ಷಿಕ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ.
ಸಿರುಗುಪ್ಪ-ನಗರದ ಹಜರತ್ ಸೈಯದ್ ಚತನ್ ಷಾ ವಲಿ ದರ್ಗಾ ಆಸ್ಥಾನದಲ್ಲಿ ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ಸಿರುಗುಪ್ಪ ತಾಲೂಕು ಟೈಲರ್ಸ್ ವಾರ್ಷಿಕ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಜಿ.ಎಂ. ಮೆಹಬೂಬ್ ಸಾಬ್ ಅವರ ಅಧ್ಯಕ್ಷತೆಯಲ್ಲಿ ಎಲ್.ಬಿ. ರಶೀದ್ ಅಧ್ಯಕ್ಷರು, ಎನ್.ಶ್ರೀನಿವಾಸ, ಸಿ.ಎಸ್. ಜಯ ಕವಿತಾ ಉಪಾಧ್ಯಕ್ಷರು, ವೈ.ಶಫೀವುಲ್ಲಾ ಪ್ರಧಾನ ಕಾರ್ಯದರ್ಶಿ, ಜಿ. ಖಾಜಾ ಹುಸೇನ್ ಖಜಾಂಚಿ, ಯು.ಶಾಶಾವಲಿ, ಎಸ್.ಶರೀಫ್ ಸಹ ಕಾರ್ಯದರ್ಶಿಗಳು, ಟಿ. ಅಯೂಬ್, ಎಂ.ಪೀರ, ಬಿ. ವೀರೇಶ್, ಟೈಲರ್ ಅಲಿ ಸಂಘಟನಾ ಕಾರ್ಯದರ್ಶಿಗಳು, ಎಂ.ವೀರಭದ್ರಯ್ಯ ಸ್ವಾಮಿ, ಕೆ.ರಹಿಮ್, ತಂಟಾಲ್ ಭಕ್ಷಿಸಾಬ್, ಅನ್ಸರ್ ಬಾಷಾ,ಟಿ.ಭಾಷಾ, ನಬಿ ಸಾಬ್, ಪಿ.ಶಾಂತ, ಬೀಬೀ ಸುಗುರ, ಎ.ಮೊಹಮ್ಮದ್ ಹಾಜಿ ಸಲಹಾ ಸಮಿತಿ ಸದಸ್ಯರಾಗಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸೌದಾಗರ್ ಮೊಹಲ್ಲಾ ಖತೀಬ್ ಜೈರುದ್ದೀನ್ ಬಾಬು, ಈದ್ಗಾ ಮತ್ತು ಖಬರ್ ಸ್ಥಾನ್ ಕಮೀಟಿಯ ಮಾಜಿ ಅಧ್ಯಕ್ಷರು ಹಂಡಿ ಹಾಷೀಂ, ಲತ್ತಿಬಾಯಿ ಮೊಹಮ್ಮದ್ ಆಜಂ, ಸೌದಾಗರ್ ಮಸೀದಿ ಅಧ್ಯಕ್ಷರು ಎಂ. ಮೆಹಬೂಬ್ ಬಾಷಾ, ಸಾಮಾಜಿಕ ಕಾರ್ಯಕರ್ತ ಎ.ಮೊಹಮ್ಮದ್ ನೌಷಾದ್ ಅಲಿ ನೂತನ ಪದಾಧಿಕಾರಿಗಳಿಗೆ ಗೌರವಿಸಿ ಅಭಿನಂದಿಸಿದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ



















