ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಅಂಬಳಿ ಗ್ರಾಮ ಪಂಚಾಯತಿ ವತಿಯಿಂದ ಶ್ರೀ ಹೊಳಲಮ್ಮ ಹನುಮಂತಪ್ಪ ಇವರ ಅಧ್ಯಕ್ಷತೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ದಿನಾಂಕ 9 ಮಾರ್ಚ್ ಸೋಮವಾರದಂದು ಅತ್ಯಂತ ಸಂಭ್ರಮದಿಂದ ಆಚರಿಸಿದರು.
ಅಂಬಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹಳ್ಳಿಯ ಮಹಿಳೆಯರಿಗೆ ಮನೋರಂಜನಾ ಆಟಗಳನ್ನು ಆಡಿ ಗೆದ್ದಂತವರಿಗೆ ಪ್ರಶಸ್ತಿ ನೀಡಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮಾತನಾಡಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಮಹಿಳೆಯರಿಗೆ ರಾಜಕೀಯವಾಗಿ ಮೀಸಲಾತಿ ಕೊಟ್ಟಿರುವುದರಿಂದ ಇಂದು ನಾವು ಅಂಬಳಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರಾಗಿದ್ದೇವೆ ಮಹಿಳೆಯರಿಗೆ ತಾಳ್ಮೆ ಗುಣ ಇರಬೇಕು ಸಾಧಿಸುವ ಛಲವಿರಬೇಕು ಹಾಗೂ ಮೊದಲು ಒಬ್ಬ ಮಹಿಳೆಯರಿಗೆ ಮಹಿಳೆಯರಿಂದ ಸಹಕರ ಇರಬೇಕು ಎಂದು ಹೇಳಿದರು.
ಡಾ.ಬಿ ಆರ್ ಅಂಬೇಡ್ಕರ್ ಕೊಟ್ಟಂತಹ ಮಹಿಳಾ ಮೀಸಲಾತಿ ಉಪಯೋಗ ಪಡೆದುಕೊಂಡಿದ್ದೇವೆ. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಕೊಟ್ರಮ್ಮ ಸದಸ್ಯರಾದ ಗಂಗಮ್ಮ, ಅನುಸೂಯಮ್ಮ, ಲಲಿತಾ, ಕೊಟ್ರೇಶ ಹೆಚ್, ಸಣ್ಣ ಬಸವರಾಜ, ವಿರುಪಾಕ್ಷಪ್ಪ, ಟಿ ಶಿವಪ್ಪ, ಸಿ ನಾಗರಾಜ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಮಾಧವಿ ಕೆ ವೈ ಹಾಗೂ ಒಕ್ಕೂಟದ ಅಧ್ಯಕ್ಷರಾದ ರೋಹಿಣಿ, ಗೌರಮ್ಮ ಎಸ್ ಐ ಡಿ, ಮಮತಾ, ಶಾಲಾ ಶಿಕ್ಷಕರು,ಆರೋಗ್ಯ ಸಹಾಯಕರು,ಅಂಗನವಾಡಿ ಕಾರ್ಯಕರ್ತರು, ಮತ್ತು ಗ್ರಾಮ ಪಂಚಾಯತಿಯ ಸಿಬ್ಬಂದಿ ವರ್ಗದವರು ಇನ್ನು ಹಲವರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: R H ಕೊಟ್ರೇಶ ಕರುನಾಡ ಕಂದ ಪತ್ರಿಕೆ ಕೊಟ್ಟೂರು ತಾಲೂಕು.




















