ಬಳ್ಳಾರಿ / ಕಂಪ್ಲಿ : ಕಂಪ್ಲಿ ಪಟ್ಟಣದ ಸಕ್ಕರೆ ಕಾರ್ಖಾನೆಯ ನಿವಾಸಿಯಾಗಿದ್ದು, ವೀರಶೈವ ಜಂಗಮ ಸಮಾಜದ ಪ್ರಮುಖರು, ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರು ಲಿಂ.ಶ್ರೀ ಶ್ರೀ ಶ್ರೀ 1008 ಮರುಳಸಿದ್ಧ ಶಿವಾಚಾರ್ಯರ ಪೂರ್ವಾಶ್ರಮದ ಹಿರಿಯ ಸಹೋದರಿ, ಶ್ರೀಮತಿ ವಿಶಾಲಾಕ್ಷಮ್ಮ ಹಿರೇಮಠ (85) ಅನಾರೋಗ್ಯದಿಂದ ಮಂಗಳವಾರ ನಿಧನರಾದರು.
ಬಳ್ಳಾರಿಯ ವಿಮ್ಸ್ ನ ನಿತ್ಯಜ್ಯೋತಿ ನೇತ್ರ ಭಂಡಾರಕ್ಕೆ ಮರಣೋತ್ತರ ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದು ಮಾದರಿಯಾಗಿದ್ದಾರೆ.
ಮೃತರಿಗೆ ಸಚ್ಚಿದಾನಂದ ಹಿರೇಮಠ ದೃಶ್ಯ ಮಾಧ್ಯಮ ವರದಿಗಾರ ಸೇರಿದಂತೆ ಮೂವರು ಪುತ್ರರು, ಒಬ್ಬ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ವೀರಶೈವ ಜಂಗಮ ವಿಧಿ ವಿಧಾನಗಳೊಂದಿಗೆ 11-03-2026 ರಂದು ಬುದವಾರ ಮಧ್ಯಾಹ್ನ 12 ಗಂಟೆಗೆ ಕಂಪ್ಲಿ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕಾರ್ಯ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















