ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಮೃದ್ಧ ಕರ್ನಾಟಕಕ್ಕಾಗಿ ಜೆ ಡಿ ಎಸ್ ಕಾರ್ಯಕರ್ತರ ತಾಲ್ಲೂಕು ಘಟಕದ ವತಿಯಿಂದ (ಎಸ್ ಐ ಆರ್ ) ಕಾರ್ಯಕ್ರಮ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ವಿಧಾನಸಭಾ ಕ್ಷೇತ್ರದ ಜೆ ಡಿ ಎಸ್ ಬೂತ್ ಮಟ್ಟದ ಏಜೆಂಟರ ಬಿ ಎಲ್ ಎ ಕಾರ್ಯಗಾರ ಕಾರ್ಯಕ್ರಮ ಯಶಸ್ವಿಯಾಯಿತು.
ತಾಲೂಕಿನ ಸಾದರ ಭವನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ವತಿಯಿಂದ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಎಸ್ಐಆರ್ ಕುರಿತಾದ ಬೂತ್ ಮಟ್ಟದ ಏಜೆಂಟರ್ ಗಳನ್ನು ಆಯ್ಕೆ ಮಾಡಿ ತಳಮಟ್ಟದಿಂದ ಜೆ ಡಿ ಎಸ್ ಬಲಪಡಿಸಲು ಮತ್ತು ಮತದಾರರಿಗೆ ಸಹಾಯವಾಗಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವನ್ನು ಕೊರಟಗೆರೆ ಕ್ಷೇತ್ರದ ಮತದಾರರ ಮನಸ್ಸಿನಲ್ಲಿ ಮನೆ ಮಾಡಿರುವ ಮನೆ ಮಗ ಜೆಡಿಎಸ್ ಮಾಜಿ ಶಾಸಕ ಪಿಆರ್ ಸುಧಾಕರ್ ಲಾಲ್ ರವರುಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿ ಮಾತನಾಡಿದ ಅವರು ಎಲ್ಲರನ್ನೂ ಒಗ್ಗೂಡಿಸಿ ಪಕ್ಷ ಸಂಘಟಿಸಬೇಕು ಬೂತ್ ಮಟ್ಟದ ಸಮಿತಿ ರಚಿಸಿ ಅರ್ಹ ಮತದಾರರನ್ನು ಗುರುತಿಸಿ ನೇರವಾಗಿ ಅರ್ಜಿಗಳನ್ನು ಪಡೆದು ಪರಿಷ್ಕರಣೆ ಮಾಡಿ ಅಧಿಕಾರಿಗಳಿಗೆ ನೀಡಬೇಕು.
ಬಿ ಎಲ್ ಎ ಗಳು ನಿರಂತರ ಪರಿಶ್ರಮದಿಂದ ಮತದಾರರ ಪರಿಷ್ಕರಣ ಮಾಡಿಸಿ ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸಲು ಇಂದಿನಿಂದಲೇ ಕ್ರಿಯಾಶೀಲರಾಗಿ ಎಂದು ಸಲಹೆ ನೀಡಿದರು.
ಇನ್ನು ಜೆಡಿಎಸ್ ತಾಲೂಕು ಅಧ್ಯಕ್ಷರಾದ ಕಾಮರಾಜಣ್ಣನವರು ಮಾತನಾಡಿ ಪ್ರತಿಯೊಬ್ಬ ಬಿಎಲ್ಎ ಏಜೆಂಟ್ ಗಳ ಮತದಾರರ ಪರಿಷ್ಕರಣೆ ಮತದಾರರ ಪಟ್ಟಿ ತಿದ್ದುಪಡಿ ಮತ್ತು ಹೊಸದಾಗಿ ಸೇರಿಸುವುದರ ಬಗ್ಗೆ ಗಮನ ಹರಿಸಬೇಕು ಒಂದೊಂದು ಮತ ಬಹು ಮುಖ್ಯವಾದದ್ದು ಎಂದರು.

ಇದೇ ಸಂದರ್ಭದಲ್ಲಿ ಡ್ರೈವರ್ ಸಿದ್ದಣ್ಣ.ಎಲ್ ವಿ ಪ್ರಕಾಶ್,ರೇಣುಕಾ ಪ್ರಸಾದ್, ಓಬಳಪ್ಪ, ಪ್ರಹ್ಲಾದ್ ರಾಜು ಗೊಲ್ಲಹಳ್ಳಿ ಹಾಗೂವಿಧಾನಸಭಾ ಕ್ಷೇತ್ರದ ಆರು ಹೋಬಳಿಯ ಜೆಡಿಎಸ್ ನ ಸದಸ್ಯರುಗಳು ಭಾಗಿಯಾಗಿದ್ದರು.

ವರದಿ ಪ್ರಸನ್ನ ಕುಮಾರ್ ಎಸ್, ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!