ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಜೆಟ್ ಎಲ್ಲರಿಗೂ ಸ್ಪೂರ್ತಿ ಮತ್ತು ಪ್ರೇರಣೆ ನೀಡುತ್ತದೆ: ಎಚ್. ಎಂ. ಗುಡಿ ಹಿಂದಿನ

ಕೊಪ್ಪಳ : ಬಜೆಟ್ ಎಲ್ಲರಿಗೂ ಸ್ಫೂರ್ತಿ ಮತ್ತು ಪ್ರೇರಣೆ ನೀಡುತ್ತದೆ ಎಂದು ಇರಕಲ್ಲಗಡ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಎಚ್. ಎಂ. ಗುಡಿಹಿಂದಿನ ಅವರು ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಕೇಂದ್ರ ಬಜೆಟ್ 2026-27 ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಜೆಟ್ ಬಗ್ಗೆ ತಿಳಿದು ನಿಮ್ಮ ಕುಟುಂಬ ಮತ್ತು ಸಮಾಜದಲ್ಲಿನ ವ್ಯಕ್ತಿಗೆ ನೀವು ಅರ್ಥೈಹಿಸಿಬೇಕು ಕುಟುಂಬದಲ್ಲಿ ಕೂಡ ಮುಂಚಿತವಾಗಿ ಬಜೆಟ್ ಮಂಡನೆ ಮಾಡಿಕೊಳ್ಳುತ್ತೇವೆ. ಅದೇ ರೀತಿ ಸರ್ಕಾರವು ಕೂಡ ಬಜೆಟ್ ಸಿದ್ಧಪಡಿಸುವ ನೀತಿಯಿದೆ. ಇದರಿಂದ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ಮತ್ತು ಪ್ರೇರಣೆ ನೀಡುತ್ತದೆ. ಜೊತೆಗೆ ಅಭಿವೃದ್ಧಿ ಸಾಧ್ಯ. ತೆರಿಗೆಗಳಿಂದ ಕೈಗಾರಿಕಾ ಪ್ರಗತಿಗೆ ಅವಶ್ಯಕವಿದೆ ಎಂದು ಹೇಳುತ್ತಾ ಖಾದಿ ಗ್ರಾಮೋದ್ಯೋಗಕ್ಕೆ ಪ್ರೇರಣೆ ನೀಡುತ್ತಿದೆ ಎಂದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶುಭ ಅವರು ಮಾತನಾಡುತ್ತಾ ಬಜೆಟ್ ನಮ್ಮ ದೇಶದ ಅಭಿವೃದ್ಧಿಯ ಪಥ. ಇದು ದೇಶದ ಖರ್ಚು ವೇಚ್ಚಗಳ ಕುರಿತು ಸಮಗ್ರ ವಿಶ್ಲೇಷಣೆ ಆಗಿದೆ. ಬಜೆಟ್ ಕುರಿತು ಎಲ್ಲಾ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ಮತ್ತು ಆರ್ಥಿಕ ಶಿಸ್ತು ಇರಬೇಕು ಎಂಬ ಉದ್ದೇಶದಿಂದ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾಲೇಜಿನ ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಡಾ. ಹುಲಿಗೆಮ್ಮ ಅವರು ಮುಖ್ಯ ಅತಿಥಿಗಳ ಕುರಿತು ಪರಿಚಯ ಮಾಡಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಗಣಪತಿ ಲಮಾಣಿ ಅವರು ಮಾತನಾಡುತ್ತಾ ಸಮಾಜದಲ್ಲಿ ನಾಗರಿಕ ಬೇಡಿಕೆಗಳು ಹೆಚ್ಚಾದಂತೆ ಬಜೆಟನ ಗ್ರಾತ ಹೆಚ್ಚುತ್ತದೆ.ಅಬಿವೃದಿಗಾಗಿ ಸಾಲ ಮಾಡಬೇಕು ಹೊರೆಯುವ ವೈಭವ ಜೀವನಕ್ಕೆ ಅಲ್ಲ. ಬಜೆಟ್ ಸರಿಯಾಗಿ ಮಂಡಿಸಬೇಕಾದರೆ ಎಲ್ಲಾರು ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿದರೆ ನಮ್ಮ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳುತ್ತಾ ನಮ್ಮ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಬಜೆಟ್ ಮಂಡನೆ ಮಾಡುವ ಅವಕಾಶ ದೊರೆಯುವಂತೆ ವ್ಯಾಸಂಗ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿ. ಎ. ಅಂತಿಮ ವರ್ಷದ ವಿದ್ಯಾರ್ಥಿನಿಯರಾದ ದುರಗಮ್ಮ, ನೇತ್ರಾವತಿ, ಶಾಂತಾ ಚೆಳ್ಳಿಕೇರಿ, ಕಹೆ ಶಾ ಜಾನ್, ರೇಖಾ, ಭೀಮವ್ವ, ಸಾವಿತ್ರಿ, ರಾಜೇಶ್ವರಿ, ಹುಲಿಗೆಮ್ಮ, ಕಮಲ, ಕಾವ್ಯಾ, ಲಕ್ಷ್ಮೀ, ಶ್ರೀದೇವಿ, ವೈಷ್ಣವಿ, ಸಮಿಯ ಬಾನು, ಹನುಮಂತವ್ವ, ಸುಸ್ಮಿತಾ, ದೇವಮ್ಮ, ಕಾವ್ಯ ಎಸ್., ಲಕ್ಷ್ಮವ್ವ ಭೋವಿ, ಸುಮತಿ, ಕಲ್ಪನಾ ಹಾಗೂ ಇತರರು ಕೇಂದ್ರ ಬಜೆಟ್ -2026-27 ರ ಕುರಿತು ಬಜೆಟ್ ಗಾತ್ರ, ಆದಾಯ, ವೆಚ್ಚ ಕೃಷಿ, ಶಿಕ್ಷಣ, ಕೈಗಾರಿಕೆ, ಗ್ರಾಮೀಣ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಸೇವಾ ವಲಯ ಹಾಗೂ ಇನ್ನಿತರ ವಿಷಯಗಳ ಕುರಿತು ಬಜೆಟ್ ಮಂಡಿಸಿ ವಿಶ್ಲೇಷಣೆ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀ ಮತಿ ಸುಮಯ್ಯ, ಡಾ. ರುದ್ರಾಕ್ಷಿ, ಡಾ. ನಾಗಭೂಶಾನಮ್ಮ, ಡಾ. ನರಸಿಂಹ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾವಿತ್ರಿ ಪ್ರಾರ್ಥನೆ ಗೀತೆ ಹಾಡಿದರು. ಸಾಹಿರ ಸ್ವಾಗತ ಮಾಡಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!