ಕಲಬುರಗಿ :ಕವಿವಾಣಿ ಸಾಹಿತ್ಯ ಪರಿಷತ್ತು ರಾಜ್ಯ ಘಟಕ, ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ, ಉತ್ತಮ ಕೃತಿಗೆ ಪ್ರತಿ ವರ್ಷ ಕೊಡಮಾಡುವ ರಾಜ್ಯ ಮಟ್ಟದ “ಸ್ವರ್ಣ ಕೃತಿ” ಪ್ರಶಸ್ತಿಗೆ ಸಾಹಿತಿ ಡಾ|| ಶಿವಕುಮಾರ. ಲಾ. ಸೂರ್ಯವಂಶ, ಅವರು ರಚಿಸಿರುವ ಭಾರತ ರತ್ನ ಡಾ|| ಬಿ. ಆರ್. ಅಂಬೇಡ್ಕರ್, ಅವರ ಕುರಿತಾದ “ಅರಳಿ ಬಾ ಮರಳಿ” ಕವನ ಸಂಕಲನ ಆಯ್ಕೆಯಾಗಿದ್ದು, ದಿ: ೧೫.೦೩.೨೦೨೬ ರಂದು ಜರುಗಿದ ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಡಾ|| ಶಿಲಾಸೂ ಕಲಬುರಗಿ ಅವರಿಗೆ “ಸ್ವರ್ಣ ಕೃತಿ” ರಾಜ್ಯ ಪ್ರಶಸ್ತಿ ನೀಡಿ ಗಭರವಿಸಲಾಗಿದೆ ಎಂದು, ಕವಿವಾಣಿ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀ, ಕೆ. ಎನ್. ಅಕ್ರಂಪಾಷ, ಸಾಹಿತಿ ಹಾಗೂ ಶಿಕ್ಷಕರು ತಿಳಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ

















