ಕೊಪ್ಪಳ/ ಯಲಬುರ್ಗಾ: ಯುಗಾದಿ ಅಮಾವಾಸ್ಯೆ ಚತುರ್ದಶಿ ನಿಮಿತ್ತವಾಗಿ ತಾಲೂಕಿನ ದಮ್ಮೂರ ಗ್ರಾಮದಲ್ಲಿ ಮಾ.17 ರಂದು 384 ನೇ ಶಿವಾನುಭವ ಗೋಷ್ಠಿ ಜರುಗಿತು. ಹರ ಮುನಿದರು ಗುರು ಕಾಯುವನು, ಗುರುಮುನಿದರೆ ಯಾರು ಕಾಯುವವರು..? ಎಂಬುದು ಪರಮ ಸತ್ಯವಾದ ಉಕ್ತಿ, ದೇವರು ಕೋಪಿಸಿಕೊಂಡರು ಗುರುಗಳು ನಮ್ಮನ್ನು ರಕ್ಷಿಸುತ್ತಾರೆ ಎಂದು ಕೃಷಿ ಶ್ರೇಷ್ಠ ಪಂಡಿತ ವಿಜೇತರಾದ ಯರೆಹಂಚಿನಾಳದ ಶ್ರೀಮತಿ ಸವಿತಾ ನಾಗರಡ್ಡಿ ಅವರು ಮಾತನಾಡಿದರು. ಶಿಕ್ಷಣದಿಂದ ಸ್ವಾಭಿಮಾನದ ಬದುಕು ಸಾಧ್ಯ
ಪ್ರತಿಯೊಬ್ಬರೂ ಶಿಕ್ಷಣ ಪಡೆದುಕೊಳ್ಳಬೇಕು ಮಕ್ಕಳಿಗೆ ಒಳ್ಳೆ ಶಿಕ್ಷಣ ಮತ್ತು ಸಂಸ್ಕಾರ ಕೊಡಬೇಕು ಎಂದು ಗಜೇಂದ್ರಗಡದ ಉಪನ್ಯಾಸಕ ಶರಣು ಕಟ್ಟಿಮನಿ ಮಾತನಾಡಿ ,ಹರಮುನಿದರೆ ಗುರು ಕಾಯುವನು ಎಂಬ ಚಿಂತನ ಮಂಥನ ಗೋಷ್ಠಿಯಲ್ಲಿ ಮಾತನಾಡಿದರು. ಸಾವಯವ ಕೃಷಿಯಲ್ಲಿ ಯರೆಹಂಚಿನಾಳದ ಮಹಿಳೆ ಸವಿತಾ ನಾರಡ್ಡಿ ಅವರು ಅಪಾರವಾದ ಸಾಧನೆ ಮಾಡಿ ,ಮೆಣಸಿನಕಾಯಿ ಬೆಳೆಗೆ ಒಂದು ಕ್ವಿಂಟಲ್ ಗೆ 73 ಸಾವಿರ ಪಡೆದುಕೊಂಡು ರಾಜ್ಯಕ್ಕೆ ಮಾದರಿಯಾಗಿದ್ದಾರೆ , ಅವರಂತೆ ಯುವ ಸಮುದಾಯ ಕೃಷಿಯಲ್ಲಿ ಶ್ರಮವಹಿಸಿದಾಗ ಜಯಸಾಧಿಸಲು ಸಾದ್ಯ ಎಂದು ರೈತ ಸಂಘದ ಉಪಾಧ್ಯಕ್ಷ ಅಂದಪ್ಪ ಕೊಳೂರು ಅವರು ಮಾತನಾಡಿದರು.
ಈ ವೇಳೆ ಯರೇಹಂಚಿನಾಳ ಚಿತ್ರ ನಟಿ ಶಿವಮ್ಮ ಯರೆಹಂಚಿನಾಳ, ರಕ್ತ ಭಂಡಾರ ಕೇಂದ್ರದ ಸರೋಜಾ ಪತ್ತಾರ, ಸಮಾಜ ಸೇವಕರಾದ ಕಲ್ಲೂರಿನ ಮಂಜುನಾಥ ಕುರಿ, ರಾಂಪೂರಿನ ಕಳಕನಗೌಡ ಭೀ.ಪಾಟೀಲ್ ಮಾತನಾಡಿದರು. ಮಠದ ಒಡೆಯರಾದ ಹನುಮಂತಪ್ಪಜ್ಜ ಧರ್ಮರಮಠ, ಹಾಗೂ ಶರಣಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು. ಪ್ರಾಸ್ತಾವಿಕವಾಗಿ ಗುರುಮೂರ್ತಿ ಬಡಿಗೇರ ಮಾತನಾಡಿದರು.
ಶ್ರೀ ಭೀಮಾಂಭಿಕಾದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಗುರುವಿಗೆ ಅಪಾರವಾದ ಶಕ್ತಿಯಿದೆ ,ಗುರುವಿನಿಂದ ವಿದ್ಯೆ ಕಲಿತರೆ ಮುಖ್ಯಮಂತ್ರಿ ,ಪ್ರಧಾನ ಮಂತ್ರಿ ಆಗಲು ಸಾದ್ಯ ಗುರುವಿನಲ್ಲಿ ಬಾಗುವ ಸಂಸ್ಕೃತಿ ನಮ್ಮದಾಗಬೇಕು ಎಂದರು.
ಈ ವೇಳೆ ವೀರಪ್ಪ ರಾವಣಕಿ,ರಿಜ್ವಾನ ಹಳ್ಳಿಕೇರಿ ಮುತ್ತಪ್ಪ ಕುರಿ,ಉಮೇಶ ನಾಗರಡ್ಡಿ, ಪ್ರಕಾಶ ರಾವಣಕಿ, ದ್ಯಾಮಕ್ಕ ಜರಕುಂಟಿ ಸೇರಿದಂತೆ ಇತರರು ಇದ್ದರು.
- ಕರುನಾಡ ಕಂದ ಪತ್ರಿಕೆ

















