ಬೆಂಗಳೂರು: ಏಪ್ರಿಲ್ ತಿಂಗಳ ಎರಡನೇ ಶನಿವಾರ 11-4-2026 ರಂದು ಆನಂದರಾವ್ ವೃತ್ತದ ಬಳಿ ಇರುವ ಕೆ ಪಿ ತಿ ಸಿ ಎಲ್ ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ಬೆಳಗ್ಗೆ 10.30 ಕ್ಕೆ ಯೋಗ ಶಿಕ್ಷಕ, ನಿವೃತ್ತ ಹಿರಿಯ ಸಹಾಯಕ ಶ್ರೀ ರಾಮು ಅವರಿಂದ ಪರಿಪೂರ್ಣ ವ್ಯಕ್ತಿತ್ವ ವಿಕಾಸದ ಅಡಿಯಲ್ಲಿ ಯೋಗದ ಪಾತ್ರ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಉಪನ್ಯಾಸ ಮತ್ತು ಡಾ. ಟಿ ಎಂ ಗಿರಿಧರ ಉಪಾಧ್ಯಾಯರವರಿಂದ ವಿಶ್ವಗುರು ಭಾರತದ ಕಡೆಗೆ: ನಮ್ಮ ಕುಟುಂಬ, ನಮ್ಮ ಸಮಾಜ, ನಮ್ಮ ಕೊಡುಗೆ ಕುರಿತು ಉಪನ್ಯಾಸ ಏರ್ಪಡಿಸಲಾಗುವುದು.
ಬೆಂಗಳೂರಿನ ಶಿವಗಂಗಾ ಡ್ಯಾನ್ಸ್ ಅಕಾಡೆಮಿಯ ವಿದುಷಿ ಆಶಾ ಕುಮಾರ್ ಅವರ ಹಾಗೂ ಅವರ ಶಿಷ್ಯೆಯರಿಂದ ಭರತನಾಟ್ಯ ಕಾರ್ಯಕ್ರಮ ಕೂಡಾ ಇದೇ ಸಂಧರ್ಭದಲ್ಲಿ ಆಯೋಜಿಸಿದೆ ಎಂದು ಶ್ರೀ ವಿಶ್ವೇಶ್ವರ ಗಾಯತ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















