
ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗುಡ್ಡದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ರೈತರ ಕಲ್ಯಾಣಕ್ಕಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸುತ್ತಮುತ್ತಲಿನ ಹಳ್ಳಿಗಳ ನೂರಾರು ರೈತರು ಮತ್ತು ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ರೇವಣಸಿದ್ದೇಶ್ವರರ ಕೃಪೆಗೆ ಪಾತ್ರರಾದರು.
ಈ ಕಾರ್ಯಕ್ರಮದ ಧಾರ್ಮಿಕ ವಿಧಿ ವಿಧಾನಗಳನ್ನು
ನಾಡಿನ ರೈತರಿಗೆ ಉತ್ತಮ ಮಳೆ-ಬೆಳೆ ಸಿಗಲಿ ಮತ್ತು ಬೆಳೆದ ಬೆಳೆಗೆ ಯೋಗ್ಯ ಬೆಲೆ ಲಭಿಸಲಿ ಎಂದು ಸಂಕಲ್ಪಿಸಿ ಮಹಾಪೂಜೆ ಹಾಗೂ ರುದ್ರಾಭಿಷೇಕ ರೈತ ಮುಖಂಡರಾದ ಶ್ರೀ ಶಿವರಾಜ ಪಾಟೀಲ್ ಗೋಣಗಿ, ವೀರಣ್ಣ ಗಂಗಾಣಿ ನೇತೃತ್ವದಲ್ಲಿ ನೆರವೇರಿಸಲಾಯಿತು.
ಯುಗಾದಿ ಹಬ್ಬವು ರೈತರಿಗೆ ಕೇವಲ ಹಬ್ಬವಲ್ಲ, ಅದು ಹೊಸ ಕೃಷಿ ವರ್ಷದ ಸಂಕಲ್ಪದ ದಿನ. ಭೂಮಿಯನ್ನು ನಂಬಿದ ಜನರಿಗೆ ಈ ದಿನವು ಸಮೃದ್ಧಿಯ ಮುನ್ಸೂಚನೆಯಾಗಿರುತ್ತದೆ. ರೈತರ ಬದುಕಿನಲ್ಲಿ ಕಹಿ ಮರೆಯಾಗಿ ಸಮೃದ್ಧಿಯ ಸಿಹಿ ದೊರೆಯುವಂತಾಗಲಿ ಎಂದು ಆರಾಧ್ಯ ದೈವ ಶ್ರೀ ರೇವಣಸಿದೇಶ್ವರರಲ್ಲಿ ಪ್ರಾರ್ಥಿಸಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಆಶೀರ್ವಚನ: ರಟಕಲ್ ನಡುವಿನ ಮಠದ ಪೂಜ್ಯಶ್ರೀ ರೇವಣಸಿದ್ಧ ಶಿವಾಚಾರ್ಯರು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ. ರೈತ ಬೆಳೆಯದಿದ್ದರೆ ಜಗತ್ತಿನ ಗತಿ ಅಧೋಗತಿಯಾದೀತು. ಭೂಮಿಯ ಮೇಲಿನ ಸಕಲ ಜೀವರಾಶಿಗಳಿಗೆ ಅನ್ನ ನೀಡುವ ರೈತನ ಒಳಿತಿಗಾಗಿ ಇಂತಹ ಪ್ರಾರ್ಥನಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಎಂದು ಪೂಜ್ಯಶ್ರೀ ರೇವಣಸಿದ್ಧ ಶಿವಾಚಾರ್ಯರು ಈ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಅನೇಕ ಮಠಾಧೀಶರು, ದೇವಸ್ಥಾನದ ಪದಾಧಿಕಾರಿಗಳು ಹಾಗೂ ಪ್ರಗತಿಪರ ರೈತ ಮುಖಂಡರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಮುಖರು ಪೂಜ್ಯಶ್ರೀ ಷ, ಬ್ರ, ಸಿದ್ದಲಿಂಗ ಶಿವಾಚಾರ್ಯರ ಹೊಸಳ್ಳಿ,ಪೂಜ್ಯಶ್ರೀ ನೀಲಕಂಠ ದೇವರು (ವಿರಕ್ತಮಠ), ಪೂಜ್ಯಶ್ರೀ ರೇವಣಸಿದ್ದ ಶರಣರು (ಗೌರಿಗುಡ್ಡ) ದೇವಸ್ಥಾನದ ಮಂಡಳಿ ಸದಾಶಿವ ವಗ್ಗೆ (ಕಾರ್ಯದರ್ಶಿ), ಅರ್ಚಕರಾದ ಶಾಂತಯ್ಯ ಸ್ವಾಮಿ, ಸೋಮಶೇಖರಯ್ಯ ಸ್ವಾಮಿ, ಓಂಕಾರ್ ಸ್ವಾಮಿ, ಸಿದ್ದಯ್ಯ ಸ್ವಾಮಿ ಪ್ರಗತಿಪರ ರೈತರು , ರುದ್ರಶೆಟ್ಟಿ ಗುರುಮಿಟ್ಕಲ್, ಶಾಂತಪ್ಪ ಪಾಟೀಲ್, ಸುಭಾಷ್ ಪಾಟೀಲ್, ರಾಜುಗೌಡ ಪಾಟೀಲ್ ದಯಾಸಾಗರ ಪಾಟೀಲ್, ಚನ್ನಪ್ಪ ಗೌಡ ಪಾಟೀಲ್, ಮಂಜು ಗೌಡ ಪಾಟೀಲ್, ನೀಲಕಂಠಗೌಡ ಪಾಟೀಲ್, ಸಿದ್ದನಗೌಡ ಗುಳೇದ, ಕಾಶಿನಾಥ್ ಗೋಗಿ, ರೇವಪ್ಪ ಪಾಟೀಲ್,ಶಂಕರಾವ್ ಪಾಟೀಲ್, ಕಾಶಿನಾಥ್ ಚೋಕಾ, ಚಂದ್ರಕಾಂತ್ ಭೀಮಳ್ಳಿ, ಬಸವರಾಜ್ ಹೊಸಮನಿ, ಮಲ್ಲು ಹೂಗಾರ್,ಬಾಬುರಾವ್ ನಿಂಗಶೆಟ್ಟಿ, ಸದಾಶಿವ ಪಾಟೀಲ್, ಮುರುಗೇಶ್ ನಾಗುರ್, ವೈಜನಾಥ್ ಕುರಕೋಟಿ, ಮಾಂತು ರೇವಗಿ, ಶರಣಗೌಡ ಬಿರಾದರ್, ಸಿದ್ದನಗೌಡ ಪಾಟೀಲ್, ಮಲ್ಲಿನಾಥ್ ತಳಮನಿ, ಗಂಗಾಧರ ವೀರನಗುಡಿ, ರಜನಿಕಾಂತ್ ಗುರುಮಿಟ್ಕಲ್, ಮಲ್ಲು ಮಂಟಾಳ, ಆಕಾಶ್ ಸಿಗಿ, ಸಚಿನ್ ಭೀಮಳ್ಳಿ, ಸಿದ್ದು ನಾಗುರ, ನಾಗಬಸು ಗುಳಗೇರಾ, ಸುಧಾಕರ್ ಗೋಣಗಿ, ಪ್ರದೀಪ್ ಗುತ್ತೇದಾರ, ಮುರುಗಪ್ಪ ಏರಿ , ಶರಣಗೌಡ ಮಾಲಿನಸುರ್,ಸೋಮಣ್ಣ ಡೊಣ್ಣುರ, ಪ್ರಭುರಾವ ಬಿರಾದಾರ, ಮಲ್ಲು ರೇವಗಿ ಗುರುಸ್ವಾಮಿ ಕಂಠಿ ಅರುಣ್ ಕುಮಾರ್ ಚೌಹಾಣ್ ಹಾಗೂ ರೈತ ಮಹಿಳೆಯರು ಇತರರು ಇದ್ದರು.
ಈ ಕಾರ್ಯಕ್ರಮದ ಕೊನೆಯಲ್ಲಿ ದೇವಸ್ಥಾನದ ಅಧಿಕಾರಿಗಳಿಗೆ, ಅರ್ಚಕರಿಗೆ ಮತ್ತು ಪಾಲ್ಗೊಂಡ ಎಲ್ಲಾ ಭಕ್ತಾದಿಗಳಿಗೆ ಶ್ರೀ ರೇವಣಸಿದ್ದೇಶ್ವರನ ಆಶೀರ್ವಾದ ಸದಾ ಇರಲಿ ಎಂದು ಹರಸಿ ಸಿಹಿ ವಿತರಣೆ ಮಾಡಲಾಯಿತು.
ರೈತ ಸಮುದಾಯದ ಏಳಿಗೆಗಾಗಿ ನಡೆದ ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.
ವರದಿ : ಚಂದ್ರಶೇಖರ್ ಆರ್. ಪಾಟೀಲ್




















