
ಬಳ್ಳಾರಿ / ಕಂಪ್ಲಿ : ಭಾರತ ದೇಶ ಪ್ರಜಾಪ್ರಭುತ್ವದ ದೇಶವಾಗಿದೆ. ಈ ದೇಶದಲ್ಲಿ ಹಿಂದೂ, ಮುಸ್ಲಿಂ ಸೇರಿದಂತೆ ನಾನಾ ಜನಾಂಗದವರು ಸಮಾನತೆಯ ಜೊತೆಗೆ ಪ್ರೀತಿ, ಬಾಂಧವ್ಯದೊಂದಿಗೆ ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಜೀವನ ನಡೆಸುತ್ತಿರುವುದು ದೇಶದ ಬದಲಾವಣೆಗೆ ಸಾಕ್ಷಿಯಾಗಿದೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು. ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯ ಈದ್ಗಾ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಂಜಾನ್ ಹಬ್ಬದ ಅಲ್ಲಾನ ಪ್ರಾರ್ಥನೆಯಲ್ಲಿ ಭಾಗವಹಿಸಿದ ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚಾಗಿ ಕಂಪ್ಲಿ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಯೋಜನೆಯಡಿ ಸಾಕಷ್ಟು ಅನುದಾನದೊಂದಿಗೆ ಅಭಿವೃದ್ಧಿ ಜೊತೆಗೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹೀಗೆ ಮುಸ್ಲಿಂ ಬಾಂಧವರ ಸಹಕಾರದೊಂದಿಗೆ ಮುಂದಿನ ದಿನದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು. ರಂಜಾನ್ ಹಬ್ಬದ ಪ್ರಯುಕ್ತ ಒಂದು ತಿಂಗಳು ಉಪವಾಸ ವ್ರತದೊಂದಿಗೆ ಮುಸ್ಲಿಂ ಬಾಂಧವರು ರಂಜಾನ್ ಆಚರಣೆ ಜೊತೆಗೆ ಅಲ್ಲಾನ ಪ್ರಾರ್ಥನೆ ಸಲ್ಲಿಸಿದ್ದು, ಆ ದೇವರು ಮುಸ್ಲಿಂ ಬಾಂಧವರಿಗೆ ಸು:ಖ, ನೆಮ್ಮದಿ, ಸಂಪತ್ತು ನೀಡಲಿ ಎಂದರು. ಗುರುಗಳಾದ ಮಹ್ಮದ್ ಸಿರಾಜುದ್ದೀನ್ ಖಲಂದರಿ, ಹಾಜಿ ಮಹ್ಮದ್ ಜೀಯಾವುದ್ದೀನ್ ರಜ್ವೀ ಇವರು ರಂಜಾನ್ ಪ್ರಯುಕ್ತ ಅಲ್ಲಾನ ಪ್ರಾರ್ಥನೆ ಬೋಧಿಸಿದರು.
ಈ ಸಂದರ್ಭದಲ್ಲಿ ಸೈಯದ್ ಮೈನುದ್ದೀನ್ ಖಾದ್ರಿ, ಸೈಯದ್ ಅಶ್ಫಕ್ ಸಾಹೇಬ್, ಡಾ.ನೂರ್ ಮಹ್ಮದ್ ಖಾದ್ರಿ, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಬ್ಲಾಕ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಮುಖಂಡರಾದ ಭಟ್ಟ ಪ್ರಸಾದ್, ಕೆ.ಎಸ್.ಚಾಂದ್‌ಬಾಷಾ, ಎಂ.ಉಸ್ಮಾನ್, ಯಾಳ್ಪಿ ಅಬ್ದುಲ್ ಮುನಾಫ್, ಎ. ಅಹಮ್ಮದ್, ನೌಶಾದಸಾಬ್, ಅಬ್ದುಲ್ ಕರೀಂಸಾಬ್, ಅಕ್ಕಿ ಜಿಲಾನ್, ನವಬ್ ಸಾಬ್, ಎಸ್. ಖರಿಂ ಸಾಬ್, ರಿಯಾಜ್ ಅಹಮ್ಮದ್, ಖಾಜಾವಲಿ, ಬಡಿಗೇರ್ ವಲಿಸಬ್ ಎಲ್ಲಾ ಜಾಮಿಯಾ ಮಸೀದಿಯ ಮುಖ್ಯಸ್ಥರು ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















