ಕೊಟ್ಟೂರು: ತಾಲೂಕಿನ ಹ್ಯಾಳ್ಯಾ ಗ್ರಾಮದ ಮಳೆ ಮಲ್ಲೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿ ಭರದಿಂದ ಸಾಗುತ್ತಿದ್ದು ನಿರ್ಮಾಣಕ್ಕಾಗಿ ಹಣದ ಕೊರತೆ ಮನಗಂಡ ಸಮಿತಿಯವರು ಪೂಜ್ಯನೀಯ ಶ್ರೀ ಡಾ. ವೀರೇಂದ್ರ ಹೆಗಡೆ ಹಾಗೂ ಸ್ಥಳೀಯ ಧರ್ಮಸ್ಥಳ ಸಂಘದ ಪ್ರತಿನಿಧಿಗಳು ಮತ್ತು ಯೋಜನಾಧಿಕಾರಿಗಳ ಸಂಪರ್ಕ ಮಾಡಿ ಸಹಾಯಧನ ನೀಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು ಮನವಿಗೆ ಸ್ಪಂದಿಸಿ ಫೆ. 18 ರಂದು ನಿರ್ಮಾಣಗೊಳ್ಳುತ್ತಿರುವುದು ದೇವಸ್ಥಾನದ ಮುಂಭಾಗದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ರೂ 1.50 ಲಕ್ಷ ರೂಪಾಯಿ ಡಿ.ಡಿ. ನೀಡಿದ್ದಾಗಿ ಸಮಿತಿ ಅಧ್ಯಕ್ಷರು ತಿಳಿಸಿದರು.
ಧರ್ಮಸ್ಥಳ ಸಂಘದ ಸದಸ್ಯರು ಕಟ್ಟುವ ಬಡ್ಡಿ ಹಣ ಮನುಕುಲದ ಏಳಿಗೆಗಾಗಿ ವಿವಿಧ ಯೋಜನಾ ರೂಪಗಳಲ್ಲಿ ಪುನಃ ಜನರಿಗೆ “ವಾತ್ಸಲ್ಯ ಯೋಜನೆ” ಅಡಿಯಲ್ಲಿ ಅತ್ಯಂತ ಬಡವರಿಗೆ ಮನೆ ನಿರ್ಮಾಣ, ಜ್ಞಾನ ವಿಕಾಸ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಸ್ವಾವಲಂಬನೆ ಬದುಕಿಗಾಗಿ ತರಬೇತಿ, ಸಂಘದ ಸದಸ್ಯರ ಮಕ್ಕಳಿಗೆ ವೃತ್ತಿ ತರಬೇತಿ ಕೋರ್ಸ್ ಸ್ಕಾಲರ್ಶಿಪ್, ವಿಕಲಚೇತನರ ಮಕ್ಕಳಿಗೆ ಮಾಸಿಕ ಪಿಂಚನೆ ಹೀಗೆ ಅನೇಕ ಯೋಜನೆಗಳ ಮೂಲಕ ಪುರಂದರ ದಾಸರ ಮಾತಿನಂತೆ “ಕೆರೆಯ ನೀರು ಕೆರೆಗೆ ಚೆಲ್ಲಿ ವರವ ಪಡೆಯಿರೋ” ಎಂಬಂತೆ ಪೂಜ್ಯನೀಯ ಶ್ರೀ ಡಾ.ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಶ್ರೀಮತಿ ಹೇಮಾವತಿ ಅವರು ನೀಡಿದ ದೇಣಿಗೆಗಾಗಿ ಹ್ಯಾಳ್ಯಾ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.
ಪೂಜ್ಯ ಮಾತೃಶ್ರೀ ಅವರ ಕನಸಿನ ಕೂಸು ಶ್ರೀಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನಾ ಸಂಸ್ಥೆ ಪರವಾಗಿ ಶ್ರೀ ಸತೀಶ್ ಶೆಟ್ಟಿ ವಿಜಯನಗರ ಜಿಲ್ಲಾ ನಿರ್ದೇಶಕರು. ಕೊಟ್ಟೂರು ತಾಲೂಕಿನ ಯೋಜನಾಧಿಕಾರಿಗಳು ಶ್ರೀ ನವೀನ್ ಕುಮಾರ್ , ವಲಯ ಅಧಿಕಾರಿಗಳಾದ ಮಂಜುನಾಥ್ ಗ್ರಾಮ ಸಹಾಯಕರಾದ ಮಂಗಳ ಗೌರಮ್ಮ. ರೇಖಾ. ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಕೆ. ಶಾರದಾ
ಕೆ.ಗಿರಿಜಮ್ಮ ,ಕೆ. ಸುಧಾ. ಕೆ.ಎಂ. ಕೊಟ್ರಮ್ಮ. ಕೆ ಸಾವಿತ್ರಮ್ಮ. ಕೆ ಲಕ್ಷ್ಮಿ. ಬಿ ನಾಗವೇಣಿ. ಶ್ರೀ ಮಳೆ ಮಲ್ಲೇಶ್ವರ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಎಚ್.ವೀರಬಸಪ್ಪ ಉಪಾಧ್ಯಕ್ಷರು ಜಿ. ವಿಜಯಕುಮಾರ, ಗೌರವಾಧ್ಯಕ್ಷರು, ಎಸ್ ವಿರೂಪಾಕ್ಷಪ್ಪ, ಕಾರ್ಯದರ್ಶಿ ಕೋಗಳಿ ಕೊಟ್ರೇಶ್. ಎಸ್.ಬಸವರಾಜ , ಕೆ ಚಿಕ್ಕಿರಪ್ಪ. ಕೆ. ಬಸವರಾಜ,
ಕೆ. ವೃಷ ಬೇಂದ್ರ , ಕೆ. ಕೊಟ್ರೇಶ್ ಶಾಂತೇಶ್ ಸುರಪುರ.
ಬಿ ಮರಳುಸಿದ್ದಪ್ಪ ,ಎಸ್. ಕರಿಬಸಪ್ಪ ,ಬಿ. ಕೊಟ್ರೇಶ್.
ಕೆ.ಚನ್ನಬಸಪ್ಪ ಯು.ರಾಮಪ್ಪ,
ಡಿ.ಮಂಜುನಾಥ ,ಶಿವು ಎನ್ ಕೊಟ್ರೇಶ್.
ಜಿ. ಕೊಟ್ರೇಶ್ , ಎಂ.ಕೊಟ್ರಯ್ಯ ಕೆ.ಎಂ ಶಿವಶಂಕ್ರಯ್ಯ
ಯು. ನಾಗರಾಜ
ಜಿ. ಪಾರ್ವತಿ ಹಾಗೂ ಶ್ರೀ ಮಳೆ ಮಲ್ಲೇಶ್ವರ ಸೇವಾ ಟ್ರಸ್ಟ್ ಸರ್ವ ಸದಸ್ಯರು ಮತ್ತು ಹ್ಯಾಳ್ಯಾ ಗ್ರಾಮಸ್ಥರು ಹಾಜರಿದ್ದರು.
- ಕರುನಾಡ ಕಂದ ಪತ್ರಿಕೆ




















