
ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದ ಪ್ರಥಮ CBSE ಕ್ರಿಸ್ತ ಜ್ಯೋತಿ ಶಾಲೆಯಲ್ಲಿ ಪ್ರಥಮವಾಗಿ ಭಾರತೀಯ ಸೈನ್ಯದ ಒಂದು ಭಾಗವಾಗಿ ಕಾರ್ಯ ನಿರ್ವಹಿಸುವ NCC ಯ 15th KAR BN NCC Hassan ಈ ಘಟಕವನ್ನು COL, M, S, Sekhon ಕಮಾಂಡಿಂಗ್ ಆಫೀಸರ್ ಉದ್ಘಾಟಿಸಿ ಮಾತನಾಡಿದರು.
NCC ಭಾರತೀಯ ಸೈನ್ಯದ ಒಂದು ಭಾಗವಾಗಿ ಕಾರ್ಯ ನಿರ್ವಹಿಸುತ್ತದೆ, ವಿದ್ಯಾರ್ಥಿಗಳಿಗೆ ಸಮಯ ಪಾಲನೆ, ಶಿಸ್ತು, ದೇಶ ಪ್ರೇಮ ಮೂಡಿಸುವ ಮಹತ್ವದ ಕೆಲಸವನ್ನು NCC ಯಲ್ಲಿ ಮಾಡಲಾಗುತ್ತದೆ.
ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡಬೇಕು, ಆಸ್ತಿ ಗಳಿಸಬೇಕು, ಸರ್ಕಾರಿ ಹುದ್ದೆಯಲ್ಲಿರಬೇಕು ಎನ್ನುವವರು NCCಯಲ್ಲಿ ನೀಡುವ ತರಬೇತಿಯನ್ನು ಶಿಸ್ತಿನಿಂದ ಕಲಿತರೆ ಮುಂದೊಂದು ದಿನ ನೀವು ದೇಶದ ಆಸ್ತಿಯಾಗುತ್ತೀರಿ ನಿಮ್ಮ ಕುಟುಂಬ ಅಷ್ಟೇ ಅಲ್ಲದೆ ಸಮಾಜ ನಿಮ್ಮನ್ನು ಗೌರವಿಸುವ ಹುದ್ದೆಯನ್ನು ನೀವು ಅಲಂಕರಿಸುತ್ತೀರಿ ಎಂದು ಆತ್ಮವಿಶ್ವಾಸ ತುಂಬಿದರು.
NCC ಯಲ್ಲಿ ನೀಡುವ ಡ್ರೆಸ್ ಕ್ಯಾಪ್, ಬೆಲ್ಟ್, ಬ್ಯಾಡ್ಜ್ ಎಲ್ಲರಿಗೂ ದೊರೆಯುವುದಿಲ್ಲ ಅದನ್ನು ಪಡೆದುಕೊಳ್ಳಬೇಕಾದರೆ ಶ್ರಮ ಪಡಬೇಕು, ಅರ್ಹತೆ ಇದ್ದರಷ್ಟೇ NCC ಕ್ಯಾಂಪ್ ನಲ್ಲಿ ತರಬೇತಿ ಪಡೆಯಲು ಸಾಧ್ಯವಾಗಲಿದೆ ಈ ಅವಕಾಶವನ್ನು ಎಲ್ಲಾ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕ್ರಿಸ್ತ ಜ್ಯೋತಿ ಶಾಲೆಯ ಮುಖ್ಯ ಶಿಕ್ಷಕರಾದ ಸೆಬಾಸ್ಟಿಯನ್ ಪಿ. ಜೆ. ತಿಳಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಫಾದರ್ ಜೈಸನ್, ಫಾದರ್ ಥಾಮಸ್ ದೈಹಿಕ ಶಿಕ್ಷಕರಾದ ಬೀಜು ಸೇರಿದಂತೆ ಎಲ್ಲಾ ಶಿಕ್ಷಕರುಗಳು ಭಾಗವಹಿಸಿದ್ದರು.
ವರದಿ. ಸುಧೀಂದ್ರ ಡಿ. ಅರಕಲಗೂಡು




















