ಬಾಗಲಕೋಟೆ : ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಇದೆ ಮಾರ್ಚ್ ರವಿವಾರ ದಿ.29 ರಂದು ಮುಂಜಾನೆ 10.30 ಕ್ಕೆ ಅದ್ವೈತ ಸಾವ೯ಭೌಮ ಜಾತ್ಯಾತೀತ ಜಗದ್ಗುರು ಶಿವಾವತಾರಿ ಶ್ರೀ ಸಿದ್ಧಾರೂಢರ 190 ನೇ ಜಯಂತೋತ್ಸವ ಸಮಾರಂಭ ಜರುಗಲಿದೆ ಎಂದು ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಸೇವಾ ಪ್ರತಿನಿಧಿ ಎಲ್ ಶ್ರೀನಿವಾಸಪ್ರಸಾದ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಬೆಳಗ್ಗೆ 141 ನೇ ರವಿವಾರದ ಆರೂಢರ ಅಭಿಷೇಕ, ಸಹಸ್ರ ಬಿಲ್ವಾರ್ಚನೆ.ನಾಮಜಪಯಜ್ಞ. ಜರುಗುವುದು ನಂತರ ಜಗದ್ಗುರು ಶ್ರೀ ಸಿದ್ಧಾರೂಢರ ನಾಮಕರಣ. ಜೋಗುಳಪದಗಳ ಕಾರ್ಯಕ್ರಮ.ನಂತರ ಪ್ರವಚನ.ಆಮೇಲೆ ವಿವಿಧ ಭಾಗಗಳಿಂದ ಬಂದ ಕಲಾವಿದರಿಂದ ಶಿವಭಜನೆ. ಸಂಗೀತ. ವಿವಿಧ ಮಹಿಳಾ ಕಲಾವಿದರಿಂದ ತತ್ವಪದಗಳು. ಡೊಳ್ಳಿನಪದಗಳು ಜರುಗುವವು. ಇದೆ ಸಂದರ್ಭದಲ್ಲಿ ಕುಳಲಿಯ ಯುವ ಪ್ರತಿಭಾವಂತ ಕಲಾವಿದ ಮಹಾಂತಯ್ಯ ಹಿರೇಮಠ ಹಾಗೂ ಮೆಳ್ಳಿಗೇರಿಯ ಹಿರಿಯ ಕಲಾವಿದರಾದ ಮಲ್ಲಪ್ಪ ಇಚಲಾಳ ಅವರನ್ನು ಗೌರವಿಸಲಾಗುವುದು. ಭಾಗವಹಿಸಿದ ಕಲಾವಿದರಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು.ಈ ಎಲ್ಲಾ ಕಾರ್ಯಕ್ರಮಗಳು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ ಜರುಗುವುದು. ಆಯ್.ಎಸ್. ಮಂಟೂರ ಗ್ರಾಮೀಣಾಭಿವೃದ್ಧಿ ಜನಸೇವಾ ಸಂಸ್ಥೆಯ ಮುಖಂಡ ಕೃಷ್ಣೇಗೌಡ ಮಂಟೂರ ಉಪಸ್ಥಿತರಿರುವರು ಎಂದು ಶ್ರೀನಿವಾಸ ಪ್ರಸಾದ್ ತಿಳಿಸಿದರು.
ಶ್ರೀಮಹಾಳಿಂಗರಾಯ ದೇವರ ಅಚ೯ಕ ಪೂಜ್ಯರಾದ ಕುಮಾರ್ ಗುರುಪ್ರಸಾದ್ ಸ್ವಾಮೀಜಿ ಅವರು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ




















