ಕೊರಟಗೆರೆ ತಾಲ್ಲೂಕು ಪ್ರವಾಸಿ ಮಂದಿರದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಕೊರಟಗೆರೆಯ ಗ್ಯಾರೆಂಟಿ ಯೋಜನಾ ಸದಸ್ಯರಾದ ಗೋಪಾಲಕೃಷ್ಣರವರು
ಕನ್ನಡಪರ ಹಾಗೂ ದಲಿತಪರ ಸಂಘಟನೆಗಳ ಪರವಾಗಿ ಸಾಮಾಜಿಕವಾಗಿ ಹೋರಾಟ ಮಾಡುತ್ತಾ ಬಂದಿರುವುದರಿಂದ ಇಂದು ದೇಶದಲ್ಲೇ ಮುಂಚೂಣೆಯಲ್ಲಿರುವ ಸಂಘಟನೆ ಭೀಮ್ ಆರ್ಮಿ ಸಂಘಟನೆಯ ತುಮಕೂರು ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಿ ಜವಾಬ್ದಾರಿ ನೀಡಿರುತ್ತಾರೆ. ಈ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತಸದ ವಿಷಯವಾಗಿದ್ದು ಎಲ್ಲರೂ ಒಗ್ಗಟ್ಟಿನಿಂದ ಸಂಘಟನೆಯನ್ನು ಬಲಪಡಿಸಿ ಸಮಾಜದಲ್ಲಿನ ಹಿಂದುಳಿದ ವರ್ಗಗಳ ದಲಿತರ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲರೂ ಅಧ್ಯಕ್ಷರಂತೆ ಕಾರ್ಯ ನಿರ್ವಹಿಸಿ ಸಂಘಟನೆಯನ್ನು ಅತಿ ಹೆಚ್ಚು ಬೆಳವಣಿಗೆ ಮಾಡಬೇಕೆಂದು ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಅಧ್ಯಕ್ಷರುಗಳಿಗೆ ಸಂಘಟನೆಯ ಪದಾಧಿಕಾರಿಗಳಿಗೆ ಗೋಪಾಲ್ ಕೃಷ್ಣರವರು ಹೇಳಿದರು. ಇಂದು ತುಮಕೂರು ಜಿಲ್ಲಾ ಭೀಮ ಆರ್ಮಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸಂತಸದ ವಿಷಯ ಮತ್ತು ನನ್ನ ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ ಇದರಿಂದ ಇನ್ನೂ ಹೆಚ್ಚು ನಿಮ್ಮಗಳ ಸೇವೆ ಮಾಡಲು ಅವಕಾಶ ಸಿಕ್ಕಿದೆ ಎಲ್ಲರೂ ಒಗ್ಗಟ್ಟಿನಿಂದ ದುಡಿದು ಬಡವರು ದಲಿತರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಹೆಚ್ಚು ಸಹಾಯ ಮಾಡುವುದಾಗಿ ತಿಳಿಸಿದರು ಇತ್ತೀಚೆಗೆ ಹೋರಾಟ ಪ್ರತಿಭಟನೆಗಳಲ್ಲಿ ಜನಪರವಾದ ನೊಂದವರ ದೀನ ದಲಿತರ ಪರವಾಗಿ ಹೋರಾಟ ಮಾಡುವುದು ನಮ್ಮೆಲ್ಲರ ಗುರಿ ಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.
ಸಂಘಟನೆಯ ಎಲ್ಲಾ ಕಾರ್ಯಕರ್ತರು ನಮ್ಮ ಸ್ನೇಹಿತರಾದ ಗೋಪಾಲಕೃಷ್ಣರವರು ತುಮಕೂರು ಭೀಮ್ ಆರ್ಮಿ ಜಿಲ್ಲಾಧ್ಯಕ್ಷರಾಗಿರುವುದು ನಮಗೆಲ್ಲಾ ಹೆಮ್ಮೆ ಹಾಗೂ ಅವರ ರೀತಿ ನಾವು ಕಾರ್ಯ ನಿರ್ವಹಿಸುವುದಾಗಿ ಎಲ್ಲರೂ ತಿಳಿಸಿದರು.
ಇದೇ ಸಂದರ್ಭದಲ್ಲಿ ಭಾಗಿಯಾದ ಮಧುಗಿರಿಯ ಶಂಕರ್, ನವೀನ್ ಕುಮಾರ್ ಕೆಂಗಯ್ಯನಪಾಳ್ಯ ಹರ್ಷ, ಚಿರಂಜೀವಿ,ಮಂಜು, ಧ್ವನಿ ಸಂಘಟನೆಯ ಸುರೇಶ್ ಎನ್ ಯು, ಭರತ್ ಕೆ ನರಸಿಂಹಯ್ಯ ಸೇರಿದಂತೆ ಇನ್ನೂ ಅನೇಕ ಸಂಘಟನಾ ಕಾರ್ಯಕರ್ತರು ಅಭಿನಂದನೆಗಳನ್ನು ತಿಳಿಸಿದರು.
ವರದಿ. ಪ್ರಸನ್ನಕುಮಾರ್ ಎಸ್ ಕೊರಟಗೆರೆ




















