ಜ್ಞಾನದಿಂದ ಅಜ್ಞಾನ ದೂಡುವವನಾಗು
ಸನ್ಮಾರ್ಗದಿಂದ ಕಾಯಕ ಮಾಡುವವನಾಗು
ಅಂತರಂಗದಿಂದ ಪರಿಶುದ್ಧನಾಗು
ಅಂತ:ಕರಣದಿಂದ
ಅರಿಯುವಂತವನಾಗು.
ಜ್ಞಾನದಲ್ಲಿ ಅಂಬೇಡ್ಕರ್ ನಂತಾಗು
ಕ್ರಾಂತಿಯಲ್ಲಿ ಬಸವಣ್ಣನಂತಾಗು
ಶಾಂತಿಯಲ್ಲಿ ಬುದ್ಧನಂತಾಗು
ಹೋರಾಟದಲ್ಲಿ ಭೀಮನಂತಾಗು.
ಹಿರಿಯರನ್ನು ಗೌರವಿಸುವವನಾಗು
ಸರ್ವರನ್ನು ಪ್ರೀತಿಸುವವನಾಗು
ಪ್ರೀತಿಯಲ್ಲಿ ಪರ್ವತ ನಾಗು ಕೋಪದಲ್ಲಿ ತಾಳ್ಮೆಂದಿರುವವನಾಗು.
ಪರರಿಗೆ ನೆರಳಾಗು
ಕಷ್ಟಗಳಿಗೆ ಹೆಗಲಾಗು
ಹೆತ್ತವರಿಗೆ ಕೀರ್ತಿಯಾಗು
ಸಮಾಜಕ್ಕೆ ಒಳಿತಾಗು.
ಹಸಿವಿಗೆ ಅನ್ನವಾಗು
ಜ್ಞಾನಕ್ಕೆ ಹೆಸರಾಗು
ಜಾತಿಗೆ ನಂಜಾಗು
ಪ್ರೀತಿಗೆ ಜೇನಾಗು.
ಸತ್ಯಕ್ಕೆ ತಲೆಬಾಗು
ನ್ಯಾಯಕ್ಕೆ ಬದ್ಧನಾಗು
ಮಮತೆಗೆ ಮಡಿಲಾಗು
ಕರುಣೆಗೆ ಕಡಲಾಗು.
ದಾರಿಗೆ ಬೆಳಕಾಗು
ಬದುಕಿಗೆ ಚೇತನವಾಗು
ಹಣದಲ್ಲಿ ಬಡವನಾಗು
ಗುಣದಲ್ಲಿ ಸಿರಿವಂತನಾಗು.
ಸಂತರ ಒಡನಾಡಿಯಾಗು
ಶರಣರ ಜೊತೆಯಾಗು
ದ್ವೇಷಕ್ಕೆ ಅಗ್ನಿಯಾಗು
ಪ್ರೇಮಕ್ಕೆ ಗಂಧವಾಗು.
ಸೋಮಾರಿಗಳಿಗೆ ಮಾದರಿಯಾಗು
ಕೈಲಾಗದ ವರಿಗೆ ಕೋಲಾಗು
ಸೋತವರಿಗೆ ಭರವಸೆಯಾಗು
ಗೆದ್ದವರಿಗೆ ಚಪ್ಪಾಳೆಯಾಗು.
ಒಡಹುಟ್ಟಿದವರಿಗೆ ಒಡಲಾಗು
ಹೆತ್ತವರಿಗೆ ಋಣಿಯಾಗು
ದೀನರಿಗೆ ಬಂಧುವಾಗು
ಮರಣಕ್ಕೆ ಶರಣಾಗು.
ರಚನೆ ಶ್ರೀಮತಿ ಜ್ಯೋತಿ ಸಂಜು ಮುರಾಳೆ. ✍🏻




















