ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಎದುರು ರೈತರ ಜೋಳ ಖರೀದಿ ಕೇಂದ್ರ ಉದ್ಘಾಟನೆ : ಚೊಕ್ಕ ಬಸವನ ಗೌಡ

ಸಿರುಗುಪ್ಪ – ಜೋಳ ಖರೀದಿ ಕೇಂದ್ರದಿಂದ ರೈತರಿಗೆ ಅನುಕೂಲವಾಗುವ ಜೊತೆಗೆ ಸರ್ಕಾರದ ಅಡಿಯಲ್ಲಿ ಸಿಗುವ ಬೆಂಬಲ ಬೆಲೆಯಿಂದ ರೈತರ ಬದುಕು ಆರ್ಥಿಕವಾಗಿ ವೃದ್ಧಿಯಾಗಲು ಕಾರಣವಾಗಿದೆ ಎಂದು ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡ ಹೇಳಿದರು.
ನಗರದ ಎಪಿಎಂಸಿ ಎದುರುಗಡೆ ಜೋಳ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ತಾಲೂಕಿನಲ್ಲಿ ಅತಿ ಹೆಚ್ಚಾಗಿ ಜೋಳ ಬೆಳೆ ಬೆಳೆಯುತ್ತಿದ್ದು ರೈತರಿಗೆ ಸಮರ್ಪಕವಾಗಿ ಬೆಂಬಲ ಬೆಲೆ ದೊರಕಬೇಕೆಂಬ ದೃಷ್ಟಿಯಿಂದ ಜೋಳ ಖರೀದಿ ಕೇಂದ್ರ ಆರಂಭಿಸಲಾಗಿದೆ ಇದರಿಂದ ರೈತರು ಖರೀದಿ ಕೇಂದ್ರಕ್ಕೆ ತಾವು ಬೆಳೆದಂತಹ ಗುಣಮಟ್ಟದ ಜೋಳವನ್ನು ನೀಡುವ ಮೂಲಕ ಬೆಂಬಲ ಬೆಲೆ ಪಡೆದುಕೊಳ್ಳಲು ಮುಂದಾಗಬೇಕು ಮಾರುಕಟ್ಟೆಯಲ್ಲಿ ಬೆಲೆ ಕುಸಿದಾಗ ರೈತರಿಗೆ ಬೆಂಬಲ ಬೆಲೆ ಒದಗಿಸಿ ನಷ್ಟ ತಪ್ಪಿಸುವುದು ಜೋಳ ಖರೀದಿ ಕೇಂದ್ರದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. ಖರೀದಿ ಕೇಂದ್ರ ಅಧಿಕಾರಿ ವೈಜ್ಯನಾಥ್ ಪಾಟೀಲ್ ಮಾತನಾಡಿ ಕೆ ಬೆಳಗಲ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸೊಸೈಟಿ ವ್ಯಾಪ್ತಿಯಲ್ಲಿ ಬರುವ ಒಂದು ಜೋಳ ಖರೀದಿ ಕೇಂದ್ರವನ್ನು ಸಿರುಗುಪ್ಪ ನಗರದ ಎಪಿಎಂಸಿ ಎದುರುಗಡೆ ಸ್ಥಾಪಿಸಲಾಗಿದೆ ನಮ್ಮ ಜೋಳ ಖರೀದಿ ಕೇಂದ್ರಕ್ಕೆ ಮುಂಗಾರು ಬೆಳೆಯ 40,493 ಕ್ವಿಂಟಲ್ ಹಿಂಗಾರು ಬೆಳೆಯ 20,243 ಕ್ವಿಂಟಾಲ್ ಜೋಳ ನೊಂದಾಣೆಯಾಗಿವೆ ಎಂದು ಹೇಳಿದರು.
ಫುಡ್ ಗ್ರೇಡರ್ ಕಿರಣ್ ಕುಮಾರ್ ಆಹಾರ ನಿರೀಕ್ಷಕ ಮಹಾರುದ್ರಗೌಡ ಕೆ ಬೆಳಗಲ್ ಸೊಸೈಟಿ ಅಧ್ಯಕ್ಷ ಪಾಲಾಕ್ಷಿ ಗೌಡ ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ ಆಹಾರ ಮತ್ತು ನಾಗರಿಕ ಸರಬರಾಜು ಸಮಿತಿ ಸದಸ್ಯರು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಸಿರುಗುಪ್ಪ ನಂ-2 ಸೊಸೈಟಿ ಅಧ್ಯಕ್ಷ ಟಿ.ನಾಂಚರಯ್ಯ ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಹೆರಕಲ್ ಜಡೆಸ್ವಾಮಿ ಇನ್ನಿತರರು ಇದ್ದರು.

ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!