
ಬಳ್ಳಾರಿ / ಸಂಡೂರು : ಪ್ರತಿ ಒಂಬತ್ತು ವರ್ಷಕ್ಕೊಮ್ಮೆ ನಡೆಯುವ ಗ್ರಾಮ ದೇವತೆಯ ಮಾರಿಕಾಂಬಾ, ಉಡಸಲಮ್ಮ ದೇವರಿಗೆ ಅದ್ದೂರಿಯ ಜಾತ್ರೆ ತಾಲ್ಲೂಕಿನ ತೋರಣಗಲ್ಲು ಬಳಿಯ ಎಸ್. ಬಸಾಪುರ ಗ್ರಾಮದಲ್ಲಿ ಬುಧವಾರ ಮಾರಿಕಾಂಬಾ, ಉಡಸಲಮ್ಮದೇವಿಯ ಜಾತ್ರೆಯ ಭಕ್ತರ ಸಮ್ಮುಖದಲ್ಲಿ ಜಾತ್ರೆ ನಡೆಯಿತು. ಜಾತ್ರೆಯ ಪ್ರಯುಕ್ತ ಗ್ರಾಮದ ಎಲ್ಲಾ ದೇವಸ್ಥಾನಗಳಿಗೆ, ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು.
ಮಾರಿಕಾಂಬಾ, ಉಡಸಲಮ್ಮ ದೇವರಿಗೆ ವಿಶೇಷ ಹೂವಿನ, ಆಭರಣಗಳಿಂದ ಅಲಂಕಾರ ಮಾಡಲಾಗಿತ್ತು. ಬುಧವಾರ ಬೆಳಿಗ್ಗೆ ಗ್ರಾಮದ ಜನರು ದೇವರಿಗೆ ಕುಂಭ ಹೊತ್ತು ಭಕ್ತಿ ಸಮರ್ಪಿಸಿದರು.
ಸಂಡೂರು ಮಾತ್ರವಲ್ಲದೆ, ನೆರೆಹೊರೆಯ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿದರು.
ದೇವಿಯ ಕೃಪೆಗಾಗಿ ಹರಕೆಗಳನ್ನು ತೀರಿಸುವುದು ಮತ್ತು ವಿಶೇಷ ಪೂಜೆಗಳನ್ನು ಮಾಡುವುದು ಭಕ್ತಿಯ ಪರಕಾಷ್ಟೆ ಜೋರಾಗಿತ್ತು.
ಭಾರೀ ಜನಸ್ತೋಮ ಸೇರಿದ್ದರಿಂದ ಗ್ರಾಮದ ಪ್ರಮುಖ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು.
ಪೊಲೀಸ್ ಬೀಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ವರದಿ : ಜಿಲಾನಸಾಬ್ ಬಡಿಗೇರ್




















