ಬೆಂಗಳೂರು: ನಗರದ ನರಸಿಂಹರಾಜ ಕಾಲೋನಿಯಲ್ಲಿರುವ ಎಂ ವಿ ಸಿ ಸಭಾಂಗಣದ ಬಿ ಎಂ ಶ್ರೀ ಕಲಾಭವನದಲ್ಲಿ ಲೇಖಿಕಾ ಸಾಹಿತ್ಯ ವೇದಿಕೆ ಮತ್ತು ಬಿ ಎಂ ಶ್ರೀ ಪ್ರತಿಷ್ಠಾನ ಇವರುಗಳ ಪ್ರಾಯೋಜಕತ್ವದಲ್ಲಿ ಸಾಧಕಿಯರೊಡನೆ ಸಂವಾದ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿದ್ದು, ಸಭಾಂಗಣದ ತುಂಬಾ ಆಸಕ್ತ ಸಾಹಿತ್ಯ ಪ್ರೇಮಿಗಳಿಂದ ಲವಲವಿಕೆ ಏರ್ಪಟ್ಟಿತ್ತು.
ಕಾರ್ಯಕ್ರಮವನ್ನು ಲೇಖಕಿ ,ಸಂಪಾದಕಿ ಹಾಗೂ ಕಾರ್ಯಕ್ರಮ ಸಂಚಾಲಕಿ ಶ್ರೀಮತಿ ಶೈಲಜಾ ಸುರೇಶ ಅವರು ಶ್ರೀ ವೈ. ಕೆ. ಸಂಧ್ಯಾ ಶರ್ಮ ಅವರ ಜೊತೆ ಜಂಟಿಯಾಗಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೇಷಾದ್ರಿಪುರಂ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ರಾಮಲಿಂಗೇಶ್ವರ (ಸಿ ಸಿ ರಾ ) ಅವರು ವಹಿಸಿದ್ದರು.
ಬಿ ಎಂ ಶ್ರೀ ಪ್ರತಿಷ್ಠಾನ ಸಂವಾದದಲ್ಲಿ ಮಾತನಾಡಿದ ಹಿರಿಯ ಲೇಖಕಿಯರಾದ ಲಲಿತಮ್ಮ ಡಾ ಚಂದ್ರಶೇಖರ್ ಮತ್ತು ವೈ ಕೆ ಸಂಧ್ಯಾ ಶರ್ಮಾ ಅವರು ತಮ್ಮಲ್ಲಿರುವ ಆಳವಾದ ಪ್ರತಿಭೆಯನ್ನು ಎಳೆ ಎಳೆಯಾಗಿ ಬಿತ್ತರಿಸಿ ನೆರೆದಿದ್ದ ಸಾಹಿತ್ಯ ಅಭಿಮಾನಿಗಳ ನಿರೀಕ್ಷೆಯನ್ನು ಪರಿಪೂರ್ಣಗೊಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಮುಕುಂದ ಗಂಗೂರ್ ಮತ್ತು ಶ್ರೀಮತಿ ಗೌರಿ , ಶ್ರೀಮತಿ ಮಧುರಾ ಕರ್ಣಂ, ಶ್ರೀಮತಿ ವಿದ್ಯಾ ಶಿರಹಟ್ಟಿ, ಶ್ರೀಮತಿ ಲೋಲಾಕ್ಷಿ ಮೇಡಂ, ಶ್ರೀಮತಿ ಸುಶೀಲಾ, ಶ್ರೀಮತಿ ವನಜಾ ಮುಂತಾದ ಲೇಖಿಕಾ ಸಖಿಯ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.




















