ಸಿರುಗುಪ್ಪ – ಕವಿ ಗೋಷ್ಠಿಯು ಕವಿಗಳು ಒಂದೆಡೆ ಸೇರಿ ತಮ್ಮ ಹೊಸ ಕವನಗಳನ್ನು ವಾಚಿಸುವ ಮತ್ತು ಚರ್ಚಿಸುವ ಸಾಹಿತ್ಯಿಕ ಕಾರ್ಯಕ್ರಮವಾಗಿದೆ ಇದು ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದಲ್ಲದೆ ಸಾಹಿತ್ಯ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ ಎಂದು ಜ್ಞಾನಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷರು ದಮ್ಮೂರು ಮಲ್ಲಿಕಾರ್ಜುನ ಹೇಳಿದರು. ಸಿರುಗುಪ್ಪ ನಗರದ ಜ್ಞಾನಭಾರತಿ ಪದವಿ ಕಾಲೇಜು ಸಭಾಂಗಣದಲ್ಲಿ ನೇತ್ರ ಕಲಾ ಸಂಘದಿಂದ ಹೊಸ ವರ್ಷ ಯುಗಾದಿ ಕವಿ ಗೋಷ್ಠಿ ಹಾಗೂ ಗಾನ ಸಿಂಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಜಿಲ್ಲಾ ಸಾಹಿತ್ಯ ಪರಿಷತ್ತುಗಳ ದಸರಾ ಹಾಗೂ ಇತರ ವಿಶೇಷ ಸಂದರ್ಭಗಳಲ್ಲಿ ಇಂತಹ ಗೋಷ್ಠಿಗಳನ್ನು ಆಯೋಜಿಸುತ್ತಾರೆ ಇಂತಹ ಕಾರ್ಯಕ್ರಮಗಳು ಯುವಕರಿಗೆ ಮತ್ತು ಹಿರಿಯ ಸಾಹಿತಿಗಳಿಗೆ ಸಂವಾದಕ್ಕೆ ಅವಕಾಶ ನೀಡುತ್ತದೆ ಎಂದರು ಯುವ ಕವಿಗಳು ವಿಶಿಷ್ಟವಾದ ರೀತಿಯಲ್ಲಿ ಪ್ರಸ್ತಾಪಿಸಿದರು ಇಂತಹ ಕಾರ್ಯಕ್ರಮ ಹೆಚ್ಚಾಗಿ ನಮ್ಮ ತಾಲೂಕಿನಲ್ಲಿ ಆಯೋಜನೆ ಆಗಬೇಕು ಸಾಹಿತ್ಯದಿಂದ ಸೃಜನಶೀಲತೆ ಉಂಟಾಗುತ್ತದೆ ವಿದ್ಯಾರ್ಥಿಗಳು ಸಾಹಿತ್ಯ ಪುಸ್ತಕಗಳನ್ನು ಓದುವ ಮೂಲಕ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ಬಾಬು ಕನ್ನಡದಲ್ಲಿ ಕವನ ವಚನ ಮಾಡಿ ಎಲ್ಲರ ಗಮನ ಸೆಳೆದರು. ಕರ್ನಾಟಕ ರಾಜ್ಯ ಬಯಲಾಟ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ವಿಶ್ವನಾಥ ಸಾಹುಕಾರ ಭಾರತೀಯ ಸಾಹಿತ್ಯ ಅಕಾಡೆಮಿ ಸಂಘದ ಅಧ್ಯಕ್ಷ ಡಾ ಜಯಸಿಂಗ್ ಅಲ್ಲರಿ ಸ. ಪ್ರ.ದ ಕಾಲೇಜು ಸಹಾಯಕ ಪ್ರಾಧ್ಯಾಪಕ ಚಂದ್ರಕಾಂತ ಹಿರಿಯ ಸಾಹಿತಿಗಳಾದ ಸಾಧುರಾಯಪ್ಪ ಜೆ ನರಸಿಂಹಮೂರ್ತಿ ನೇತ್ರ ಕಲಾಸಂಗದ ಅಧ್ಯಕ್ಷ ದಳವಾಯಿ ಈರಣ್ಣ ಕಾರ್ಯದರ್ಶಿ ವೀರೇಶ ದಳವಾಯಿ ಜಾನಪದ ಕಲಾರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಹೆಚ್ ಎಸ್ ನಾಗರಾಜ ಹಿರಿಯ ಸಾಹಿತಿ ಭಾರತ ವಿಕಾಸ ರತ್ನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಅಬ್ದುಲ್ ನಬಿ ಸಿ ಲಕ್ಷ್ಮಣ ಕಾಲೇಜು ಪ್ರಾಚರ್ಯ ಅಯ್ಯಣ್ಣ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳು ವಿದ್ಯಾರ್ಥಿಗಳು ಮತ್ತಿತರರು ಇದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















