
ಬಳ್ಳಾರಿ / ಕಂಪ್ಲಿ : ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಗುರುವಾರ ರಂದು ಕಾಲೇಜಿನ ವಿದ್ಯಾರ್ಥಿಗಳಿಂದ ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶ್ರೀನಿವಾಸರೆಡ್ಡಿ ರವರು ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ನಿತ್ಯವೂ ನಡೆಯುವ ವ್ಯವಹಾರವನ್ನು ಅವಲೋಕನ ಮಾಡಿದರೆ ಆಹಾರ ಉತ್ಪಾದನೆ, ಬಳಕೆ ಕುರಿತು ಅರಿವು ಹೊಂದಬಹುದು. ಅನ್ನದಾತನ ಶ್ರಮದ ಅರಿವು ಮುಖ್ಯ. ಆಹಾರ ಸೇವನೆಗೆ ಮುನ್ನ ಅನ್ನದಾತನ ಶ್ರಮ ನೆನಪುಮಾಡಿಕೊಳ್ಳಬೇಕು’ ಎಂದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ರಾಜ್ಮಾ ಟಿ ಎಂ ಆರ್ ರವರು ಆಯೋಜಿಸಿದ ಈ ಆಹಾರ ಮೇಳದಲ್ಲಿ ಹಿರಿಯ ಸಹ ಪ್ರಾಧ್ಯಪಕರಾದ ಡಾ. ಮಹೇಶ್ ಕೆ, ಡಾ. ಚಂದ್ರಶೇಖರ್ ಡಾ.ಬಾಲಾಜಿ, ಡಾ.ಅನ್ನಪೂರ್ಣ,ಡಾ. ಸುರೇಶ್ ಎಸ್.ವಡಗಲಪುರ ,ಗ್ರಂಥಪಾಲಕರಾದ ವೀರಭದ್ರಪ್ಪ, ಕಲೀಲ್ ರವರು ಮತ್ತು ಎಲ್ಲಾ ವಿಭಾಗದ ಅತಿಥಿ ಉಪನ್ಯಾಸಕರು ಸೇರಿ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಾಗಿ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಸ್ವಾದಿಷ್ಟಕರ ಭಕ್ಷ್ಯ ತಿನಿಸುಗಳನ್ನು ವಿದ್ಯಾರ್ಥಿಗಳ ಜೊತೆ ಸಡಗರದಿಂದ ಸಂಭ್ರ ಮಿಸಿ ಸವಿದರು. ಆಹಾರ ಮೇಳವು ಭೋಜನಪ್ರಿಯರನ್ನು ಆಕರ್ಷಿಸಿತು. 41 ವಿದ್ಯಾರ್ಥಿಗಳು ಭಾಗಿಯಾಗಿ 13 ವಿದ್ಯಾರ್ಥಿಗಳ ತಂಡಗಳು ಭಾಗವಹಿಸಿದವು. ಸುಮಾರು 57 ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಸ್ವತಃ ತಯಾರಿಸಿ ಮೇಳದಲ್ಲಿ ಲವಲವಿಕೆಯಿಂದ ಕೈಗೆಟುವ ದರದಲ್ಲಿ ನೈಜ ಹೋಟೆಲ್ ಮಾಲಿಕರಂತೆ ಗ್ರಾಹಕರನ್ನು (ಸಿಬ್ಬಂದಿ ವರ್ಗ) ಸೆಳೆದರು. ಆಹಾರ ಮೇಳದಲ್ಲಿ ಅನ್ನಪೂರ್ಣೇಶ್ವರಿ ಸ್ಟಾಲ್, ದೇಸಿ ಸ್ಪೈಸ್ ಡಿಲೈಟ್, ಸೋಮೇಶ್ವರ ಸ್ಟಾಲ್, ಕೃಷ್ಣಸ್ಟಾಲ್ ,ಕೀರ್ತಿ ಮತ್ತು ಸಿಂಧೂ ಸ್ಟಾಲ್, ಉಮ್ರಾಜ್ ಫಾತಿಮಾ ಸ್ಟಾಲ್, ವಿನಯ್ ಸ್ಟಾಲ್, ಮನೆ ಊಟ, ಆರ್ಸಿಬಿ ಸ್ಟಾಲ್ ಹೀಗೆ ವಿವಿಧ ಹೆಸರುಗಳಿಂದ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಫುಡ್ ಸ್ಟ್ರೀಟ್ ಅನ್ನೇ ಸೃಷ್ಟಿಸಿದರು, ಮೇಳದಲ್ಲಿ ಮಸಾಲೆರೊಟ್ಟಿ ಅನೇಕರನ್ನು ಆಕರ್ಷಿಸಿತು. ಮೇಳದಲ್ಲಿ ಕೊಬ್ಬರಿ ಬರ್ಫಿ, ಮೆಂತ್ಯಕಡುಬು, ಕರದಂಟು, ಸ್ವೀಟ್ ಪುರಿ, ರೂ ಆಬ್,ಜಾ ಕಲ್ಲಂಗಡಿ ಜ್ಯೂಸ್ ಸವಿದವರ ಬಾಯಾ ರಿಕೆಯನ್ನು ನೀಗಿಸಿತು, ಚಪಾತಿ, ಪನ್ನೀರ್ ಪಲಾವ್, ಬೇವು (ಸಿಹಿ) ಪಾಯಸ ಸವಿದವರಿಗೆ ಸವಿರುಚಿಯನ್ನೆ ತೋರಿಸಿತು, ಕ್ಯಾರೆಟ್ ಹಲ್ವಾ, ಪಾನಿಪುರಿ, ಆರೆಂಜ್ ಜ್ಯೂಸ್, ವೆಜ್ ಪಪ್ಸ್ ಎಣ್ಣೆ ಗಾಯಿ, ಹೆಸರು ಕಾಳು, ಮೆಂತ್ಯರೈಸ್, ಕ್ಯಾಬೇಜ್ ರೈಸ್ ಮಸಾಲೆ ಮಜ್ಜಿಗೆ, ಕಾರ್ ಮಂಡಾಳ್ , ಕ್ಯಾಬೇಜ್ ರೈಸ್, ರವೆ ಉಂಡೆ, ಪೊಂಗಲ್, ಪಾಸ್ತಾ,ಕರದಂಟು, ಮೆಂತ್ಯಕಡಬು, ಚಿತ್ರಾನ್ನ, ಪುಳಿಯೋ ಗರೆ ಹೊಸ ಬಗೆಯ ರುಚಿ ನೀಡಿತು, ಕೇಸರಿ ಬಾತ್ ಚುರುಮುರಿ ಮತ್ತು ಪಾನಿಪುರಿ ಹೆಚ್ಚು ವಿದ್ಯಾರ್ಥಿನಿ ಯರನ್ನು ಸೆಳೆಯಿತು, ಹೀಗೆ ವಿವಿಧ ಬಗೆಯ ತಿನಿಸುಗಳನ್ನು ವಿದ್ಯಾರ್ಥಿಗಳು, ಉಪನ್ಯಾಸಕರು ಸಿಬ್ಬಂದಿ ವರ್ಗದವರು ಬಾಯಿ ಚಪ್ಪರಿಸಿ ಸವಿದರು, ಮೇಳದಲ್ಲಿ ಹಬ್ಬದ ಸಡಗರ ಆವರಿಸಿತ್ತು, ವಿದ್ಯಾರ್ಥಿನಿಯರು ರಂಗುರಂಗಿನ ಸಾಂಪ್ರ ದಾಯಿಕ ಉಡುಪು ಗಳನ್ನು ಧರಿಸಿ ಮಧು ವಣಗಿತ್ತಿರಂತೆ ಮೈದುಬಿ ಆಹಾರ ಮೇಳವನ್ನು ಸಂಭ್ರ ಮಿಸಿದರು. ಇಂತಹ ಆಯೋಜನೆಗಳು ವಿಧ್ಯಾರ್ಥಿಗಳಿಗೆ ಮುಂದಿನ ದಿನಮಾನ ಗಳಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರಯೋಗಾತ್ಮಕ ಶಿಕ್ಷಣವಾಗಿತ್ತು.
ವರದಿ : ಜಿಲಾನಸಾಬ್ ಬಡಿಗೇರ್




















