
ಬಳ್ಳಾರಿ / ಕುರುಗೋಡು : ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆರ್ ಸಿ ಹೆಚ್.ಅಧಿಕಾರಿಗಳ ಕಾರ್ಯಾಲಯ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಕುರುಗೋಡು, ಪ್ರಾಥಮಿಕ ಆರೋಗ್ಯ ಕೇಂದ್ರ ಓರ್ವಾಯಿ ವತಿಯಿಂದ ವಿಶೇಷ ಅಭಿಯಾನವನ್ನು
ಪ್ರಾಥಮಿಕ ಆರೋಗ್ಯ ಕೇಂದ್ರ ಓರ್ವಾಯಿ ಗ್ರಾಮದ ಆರೋಗ್ಯ ಸಭಾಂಗಣದಲ್ಲಿ ಎಚ್ ಪಿ ವಿ ಲಸಿಕಾ ಅಭಿಯಾನ ಚಾಲನೆ ಕಾರ್ಯಕ್ರಮಕ್ಕೆ
ಡಾ. ಗುರು ಬಸವರಾಜ ಚಾಲನೆಯನ್ನು ನೀಡಿ ಎಚ್ ಪಿ ವಿ ವ್ಯಾಕ್ಸಿನ್ ಮಹತ್ವದ ಬಗ್ಗೆ
ತಂದೆ-ತಾಯಿಂದಿರಿಗೆ ಮಕ್ಕಳಿಗೆ ಲಸಿಕೆ ಬಗ್ಗೆ ಮಾಹಿತಿ ನೀಡಿ ನಮ್ಮ ಹೆಣ್ಣು ಮಕ್ಕಳ ಆರೋಗ್ಯ -ನಾಡಿನ ಸುಭದ್ರ ಭವಿಷ್ಯ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಇಂದೇ ಹೆಜ್ಜೆ ಇಡಿ 14 ವರ್ಷದ ಎಲ್ಲಾ ಹೆಣ್ಣು ಮಕ್ಕಳಿಗೆ. ಜಿಲ್ಲೆಯ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳು ಮತ್ತು ಆಸ್ಪತ್ರೆಗಳಲ್ಲಿ. ಗರ್ಭಕಂಠದ ಕ್ಯಾನ್ಸರ್ (Cervical Cancer) ನಿಂದ ರಕ್ಷಣೆ ಪಡೆಯಲು
ಸೂಕ್ತ ಗುರುತಿನ ಚೀಟಿ ಅಥವಾ ದಾಖಲೆಗಳೊಂದಿಗೆ ಭೇಟಿ ನೀಡಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಶುಶ್ರೂಷಣಾಧಿಕಾರಿಗಳು
ಡಾಟಾ ಎಂಟ್ರಿ ಆಪರೇಟರ್
ಆಶಾ ಕಾರ್ಯಕರ್ತರು ಶಾಲೆಯ ವಿದ್ಯಾರ್ಥಿನಿಯರು ಪಾಲಕ- ಪೋಷಕರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















