
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದಲ್ಲಿ ಗುನ್ನಾಳ ಪ್ರೀಮಿಯರ್ ಲೀಗ್ ಸೀಸನ್ 09 (ಜಿ.ಪಿ.ಎಲ್) ಕ್ರಿಕೆಟ್ ಪಂದ್ಯಾವಳಿಯನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಕೊಪ್ಪಳ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಅರವಿಂದಗೌಡ ಶಿವಶರಣಪ್ಪಗೌಡ ಪಾಟೀಲ ಅವರು ಉದ್ಘಾಟಿಸಿ ಮಾತನಾಡಿ, ಕ್ರೀಡಾಪಟುಗಳ ಜೊತೆಗೆ ಒಂದಷ್ಟು ಕಾಲ ತಾವೂ ಆಟವಾಡಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಶ್ರೀ ಕಳಕಪ್ಪ ಕಂಬಳಿ, ಈರಪ್ಪ ಗುಡಗುಂಟಿ ಸೇರಿದಂತೆ ಇನ್ನಿತರ ಮುಖಂಡರು, ಗುನ್ನಾಳ ಗ್ರಾಮದ ಗುರುಹಿರಿಯರು, ಯುವಕ ಮಿತ್ರರು ಹಾಗೂ ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ




















