ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕು ಕೌಠಾ (ಬಿ.) ಗ್ರಾಮದ ಸಿ ಆರ್ ಪಿ ಎಫ್ ಯೋಧ ಜಾರ್ಖಂಡ್ ರಾಜ್ಯದಲ್ಲಿ ಮಂಗಳವಾರ ಮೃತ ಪಟ್ಟಿದ್ದಾರೆ ಆನಂದ್ ತಂದೆ ಭೀಮಣ್ಣ ವಡ್ಡೆ (32) ಮೃತಪಟ್ಟ ಜಿ ಆರ್ ಎಫ್ ಯೋಧ ಆನಂದ್ ಅವರು ಸಿ ಆರ್ ಪಿಎಫ್ ನಲ್ಲಿ 10 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು ಸೋಮವಾರ ರಾತ್ರಿ ಕುಟುಂಬದವರ ಜೊತೆ ಮಾತನಾಡಿದರು ಆದರೆ ಮಂಗಳವಾರ ನಸುಕಿನ ಜಾವ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರಿಗೆ ಮಾಹಿತಿ ಬಂದಿದೆ ಸಾವಿಗೆ ನಿಖರವಾಗಿ ಮಾಹಿತಿ ತಿಳಿದು ಬಂದಿಲ್ಲ ಆನಂದ್ ಅವರ ಮತ ದೇಹ ಬುಧವಾರ ನಸುಕಿನ ಜಾವ 3 ಗಂಟೆಗೆ ಗ್ರಾಮಕ್ಕೆ ಕೌಠ (ಬಿ ) ತಲುಪಲಿದೆ ಬುಧವಾರ ಬೆಳಗ್ಗೆ ಅಂತ ಸಂಸ್ಕಾರ ನಡೆಯುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ ಸಂಗಮೇಶ್ ಚಿದ್ರೆ




















