ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಏ.6ರಂದು ದಲಿತಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ತಾಳಿಕೋಟೆ: ಪಟ್ಟಣದಲ್ಲಿ ನಿರ್ಮಾಣವಾಗಬೇಕಿದ್ದ ಪ್ರಜಾಸೌಧ ಕೇಂದ್ರವನ್ನು ದೂರದ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸುವ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ತಾಳಿಕೋಟೆ ತಾಲೂಕು ಹೋರಾಟ ಸಮಿತಿ ವತಿಯಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ಏಪ್ರಿಲ್ 6 ರಂದು ಬೃಹತ್ ಪ್ರತಿಭಟನೆ ನಡೆಸಲು ವಿವಿಧ ದಲಿತ ಸಂಘಟನೆಗಳ ಮುಖಂಡರು ನಿರ್ಧಾರ ತೆಗೆದುಕೊಂಡರು. ಬುಧವಾರ ಪಟ್ಟಣದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವರದಿಗಾರರೊಂದಿಗೆ ಮಾಹಿತಿ ಹಂಚಿಕೊಂಡರು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ದಲಿತ ಮುಖಂಡರಾದ ದೇವೇಂದ್ರ ಹಾದಿಮನಿ, ಮಹೇಶ ಚಲವಾದಿ ಹಾಗೂ ಸಿದ್ದು ಬಾರಿಗಿಡದ ಅವರು ಮಾತನಾಡಿ ಪಟ್ಟಣದಲ್ಲಿ ಆರಂಭಗೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಇಂದು 36 ದಿನಗಳು ಪೂರ್ಣಗೊಂಡಿವೆ. ಪ್ರಜಾಸೌಧವನ್ನು ಪಟ್ಟಣದಿಂದ ಸುಮಾರು 4–5 ಕಿ.ಮೀ ದೂರದಲ್ಲಿರುವ ಮೈಲೇಶ್ವರ ಗ್ರಾಮದ ಸಮೀಪದ ನಿರ್ಜನ ಪ್ರದೇಶದಲ್ಲಿ ನಿರ್ಮಾಣಕ್ಕೆ ಸ್ಥಳ ನಿಗದಿಪಡಿಸಿರುವುದು ಸಾರ್ವಜನಿಕರಿಗೆ, ವಿಶೇಷವಾಗಿ ರೈತರು ಮತ್ತು ವೃದ್ಧರಿಗೆ ತೀವ್ರ ಅನಾನುಕೂಲ ಉಂಟುಮಾಡಲಿದೆ ಈ ಕುರಿತು ಕಳೆದ ಒಂದು ತಿಂಗಳಿನಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಸ್ಥಳೀಯ ಶಾಸಕರು ಅಥವಾ ತಾಲೂಕು ಆಡಳಿತದ ಅಧಿಕಾರಿಗಳು ಸಮಸ್ಯೆ ಆಲಿಸಲು ಮುಂದೆ ಬಂದಿಲ್ಲ. ಇದರಿಂದ ಜನರಲ್ಲಿ ಅಸಮಾಧಾನ ಹೆಚ್ಚಾಗಿದೆ ಎಂದು ಅವರು ತಿಳಿಸಿದರು.
ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ದೂರದ ಸ್ಥಳದ ನಿರ್ಧಾರವನ್ನು ಹಿಂತೆಗೆದು, ಪಟ್ಟಣದ ವ್ಯಾಪ್ತಿಯಲ್ಲೇ ಪ್ರಜಾಸೌಧ ಕೇಂದ್ರವನ್ನು ನಿರ್ಮಿಸಬೇಕು ಎಂದು ಆಗ್ರಸಿದರು.ಏಪ್ರಿಲ್ 6ರಂದು ಶಾಸಕರ ಹಾಗೂ ಅಧಿಕಾರಿಗಳ ಈ ಕೆಟ್ಟ ಧೋರಣೆಯನ್ನು ವಿರೋಧಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿ ಶ್ರೀ ಬಸವೇಶ್ವರ ವೃತ್ತದ ಹತ್ತಿರದ ರಸ್ತೆಯಲ್ಲಿ 2ರಿಂದ 3 ಗಂಟೆಗಳ ಕಾಲ ಬೃಹತ್ ರಸ್ತೆ ತಡೆ (ರಾಸ್ತಾ ರೋಕೋ) ನಡೆಸಲಾಗುವುದು ವಿವಿಧ ದಲಿತಪರ ಸಂಘಟನೆಗಳ ನೇತೃತ್ವ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ನಡೆಯಲಿರುವ ಈ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಎಲ್ಲರೂ ಸಹಕರಿಸಬೇಕು ಎಂದು ಕೇಳಿಕೊಂಡರು.
ಪತ್ರಿಕಾ ಗೋಷ್ಠಿಯಲ್ಲಿ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದ ಗೌರವ ಅಧ್ಯಕ್ಷ
ಎಸ್.ಬಿ. ಕಟ್ಟಿಮನಿ, ಒಕ್ಕೂಟದ ಅಧ್ಯಕ್ಷ ಮುತ್ತಪ್ಪ ಚಮಲಾಪೂರ, ಮುಖಂಡರಾದ
ರಾಮಣ್ಣ ಕಟ್ಟಿಮನಿ, ಸಂಜು ಬರದೇನಾಳ,
ನಾಗೇಶ ಕಟ್ಟಿಮನಿ (ಜಿಲ್ಲಾ ಸಂಚಾಲಕರು, ವಿಜಯಪುರ),
ಮಾಂತೇಶ ಕಟ್ಟಿಮನಿ,
ದೇವು ಗೊಟಗುಣಕಿ, ಭೀಮರಾಜ ರತ್ನಕ,
ಚಂದ್ರಶೇಖರ ಹಾದಿಮನಿ,
ಬಾಬು ರಾಂಪುರ ಮಿಣಜಗಿ, ನಿಂಗಪ್ಪ ಹೊನ್ನಳ್ಳಿ,
ನಿಂಗಪ್ಪ ತಾಳಿಕೋಟಿ, ಮುನ್ನಾ ಹುಣಶ್ಯಾಳ,
ರಾಮಪ್ಪ ತಾಳಿಕೋಟಿ, ಸಿದ್ದಪ್ಪ ಹೊಸಮನಿ, ಹುಳ್ಳೆಪ್ಪ ತಾಳಿಕೋಟೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ ನಜೀರ್ ಅಹ್ಮದ್ ಚೋರಗಸ್ತಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!